ಮಂಡ್ಲಿ ಪಂಪ್​ಹೌಸ್​ ಬಳಿ ಮಾರಕಾಸ್ತ್ರಗಳೊಂದಿಗೆ ಬಂದ ಇನ್ನೋವಾ ಕಾರು! ತಪಾಸಣೆ ನಡೆಸಿದ ಪೊಲೀಸರಿಗೆ ಸಿಕ್ಕಿದ್ದೇನು ನೋಡಿ

SHIVAMOGGA  |  Jan 19, 2024  |    near Mandli pumphouse   ಶಿವಮೊಗ್ಗ ಪೊಲೀಸರು ಮಾದಕ ವಸ್ತು ಗಾಂಜಾ ವಿರುದ್ಧ ನಡೆಸ್ತಿರುವ ಸಣ್ಣಪುಟ್ಟ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇನ್ನೋವಾ ಕಾರು ಒಂದನ್ನು ಸೀಜ್  ಮಾಡಿದ್ದು ಅದರಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.  

ದೊಡ್ಡಪೇಟೆ ಪೊಲೀಸ್​ ಸ್ಟೇಷನ್

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸ್ ಈ ಕೇಸ್ ದಾಖಲಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0024/2024  ಕಲಂ 8(ಸಿ), 20(ಬಿ) NDPS ಕಾಯ್ದೆ ಮತ್ತು ಕಲಂ 25(1)(ಎ) ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಹಳೇಮಂಡ್ಲಿ ಪಂಪ್​ ಹೌಸ್ 

ಕಳೆದ  17-01-2024  ರಂದು ಮಧ್ಯಾಹ್ನ ದೊಡ್ಡಪೇಟೆ ಪೊಲೀಸರು ಹಳೆ ಮಂಡ್ಲಿ ಪಂಪ್ ಹೌಸ್ ನ ಹತ್ತಿರ  ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿದ್ದ ಪೊಲೀಸರಿಗೆ ಒಂದು ಮೆಸೇಜ್ ರವಾನೆಯಾಗಿರುತ್ತೆ.  ಇನ್ನೋವಾ ಕಾರಿನಲ್ಲಿ ಗಾಜನೂರು ಕಡೆಯಿಂದ ಶಿವಮೊಗ್ಗ ನಗರದ ಕಡೆಗೆ ಮಾದಕ ವಸ್ತು ಗಾಂಜಾವನ್ನು ವನ್ನ ಸಾಗಿಸಲಾಗ್ತಿದೆ ಎಂಬ ವಿಚಾರ ಸಂದೇಶದಲ್ಲಿತ್ತು.

ಮಾರ್ನಾಮಿ ಬೈಲ್​ ಆರೋಪಿ ಅರೆಸ್ಟ್​ 

ವಿಚಾರ ತಿಳಿಯುತ್ತಲೇ ಶಿವಮೊಗ್ಗ ಪೊಲೀಸರು ಟೀಂ ಮಾಡಿಕೊಂಡಿದ್ದಾರೆ.  ರವಿ ಪಾಟೀಲ್, ಪಿಐ ದೊಡ್ಡಪೇಟೆ ಮತ್ತು  ವಸಂತ್ ಪಿಎಸ್ಐ ದೊಡ್ಡಪೇಟೆ ಪೊಲೀಸ್ ಠಾಣೆ  ರವರ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದು ತೀರ್ಥಹಳ್ಳಿ ಕಡೆಯಿಂದ ಬರುವ ವಾಹನಗಳನ್ನ ತೀವ್ರ ತಪಾಸಣೆಗೆ ಒಳಪಡಿಸಿದೆ. 

ಸಿಲ್ವರ್ ಬಣ್ಣದ ಇನ್ನೋವಾ

ಈ ವೇಳೆ ಅಲ್ಲಿಗೆ  ಸಿಲ್ವರ್ ಬಣ್ಣದ ಇನ್ನೋವಾ ಕಾರು ಬಂದಿದೆ. ಪಂಪ್​ ಹೌಸ್​ ಬಳಿ ಅದನ್ನ ತಡೆದು ಪರಿಶೀಲಿಸಿದ ಪೊಲೀಸರಿಗೆ  ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜಾ ಸಿಕ್ಕಿದೆ. ಇಷ್ಟೆ ಅಲ್ಲದೆ  ಕಾರಿನ ಒಳಭಾಗದ ಮಧ್ಯದ ಸೀಟಿನ ಕೆಳಭಾಗದಲ್ಲಿ ಹರಿತವಾದ ಆಯುಧಗಳು ಪತ್ತೆಯಾಗಿವೆ. 

ಈ ಹಿನ್ನೆಲೆಯಲ್ಗಲಿ ಚಾಲಕ ಕಂ ಆರೋಪಿ ಅರ್ಬಾಜ್ @ ಹರ್ಬಾಜ್ @ ಹಜರತ್ @ ಅರ್ಬಾಜ್ ಖಾನ್, 23 ವರ್ಷ ಮಾರ್ನಾಮಿ ಬೈಲು ನಿವಾಸಿಯನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ  23,000/-  ರೂಗಳ 440 ಗ್ರಾಂ ತೂಕದ ಒಣ ಗಾಂಜಾ ಮತ್ತು 1 ಮಚ್ಚು, 1 ಬರ್ಚಿ ಮತ್ತು 1 ಡ್ರ್ಯಾಗರ್ ಅನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 


Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು