ಚೆನ್ನೈನಲ್ಲಿ ಸಾಧನೆಯ ದಾಖಲೆ ಬರೆದ ಶಿವಮೊಗ್ಗ ಜಿಲ್ಲೆ ಹೊಸನಗರದ ಮೇಘನಾ

SHIVAMOGGA  |  Jan 15, 2024  |   ಮಲೆನಾಡಿನ ಹುಡುಗಿಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಆದ ಸಾಧನೆ ಮೆರೆಯುತ್ತಿದ್ದಾರೆ. ಅದರಲ್ಲಿಯು ವಿಶೇಷವಾಗಿ ಕುಸ್ತಿ ಕಲೆಯಲ್ಲಿ ಮಲೆನಾಡಿನ ಯುವತಿಯೊಬ್ಬರು ವಿಶಿಷ್ಟ ದಾಖಲೆ ಹಾಗೂ ಸಾಧನೆ ಮೆರೆಯುತ್ತಿದ್ದು, ಇದೀಗ ಅವರ ಕೀರ್ತಿಗೆ ಮತ್ತೊಂದು ಮೆಡೆಲ್​ ಒಲಿದು ಬಂದಿದೆ. 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿ ಮೇಘನಾಗೆ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ (National Level Wrestling Competition) ತೃತೀಯ ಸ್ಥಾನ ಲಭಿಸಿದೆ. 

ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಹಾಗೂ ಕರಿಬಸಮ್ಮ ದಂಪತಿಗಳ ಪುತ್ರಿ ಯಾದ ಕುಮಾರಿ ಮೇಘನಾ ಈ ಹಿಂದೆಯು ಹಲವು ಸಾಧನೆಗಳನ್ನ ಮೆರೆದು ಸುದ್ದಿಯಾಗಿದ್ದರು. ಇದೀಗ   ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಗಳಿಸಿ ಮಲೆನಾಡಿನ ಹಿರಿಮೆಗೆ ಗರಿ ಮೂಡಿಸಿದ್ದಾರೆ

ಇನ್ನೂ ಇದೇ ಫೆಬ್ರವರಿ ಮೂರರಂದು ಹರಿಯಾಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು ಈ ಪಂದ್ಯಾವಳಿಯಲ್ಲೂ ಕುಮಾರಿ ಮೇಘನಾ ಪಾಲ್ಗೊಳ್ಳಲಿದ್ಧಾರೆ. 


Leave a Comment