SHIVAMOGGA | Dec 28, 2023 | ಮಂಜುನಾಥ ಅಲಿಯಾಸ್ ವಲ್ಲು ಅಲಿಯಾಸ್ ವಲಂಗಾ ! ಇವತ್ತು ಬೆಳಗ್ಗೆ ಬೆಳಗ್ಗೆ ಪೊಲೀಸರು ಈತನ ಕಾಲಿಗೊಂಡು ಪೊಲೀಸ್ ಬುಲೆಟ್ ಕೊಟ್ಟು ಮೆಗ್ಗಾನ್ ಜೈಲ್ ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ.
ಎಸ್ಪಿ ಮಿಥುನ್ ಕುಮಾರ್
ಎಸ್ಪಿ ಮಿಥುನ್ ಕುಮಾರ್ ನಡೆದ ಘಟನೆ ಬಗ್ಗೆ ವಾಟ್ಸ್ಯಾಪ್ ಮೆಸೆಜ್ ಮಾಧ್ಯಮಗಳಿಗೆ ರವಾನೆ ಮಾಡಿದ್ದಾರೆ. ಇಷ್ಟಕ್ಕೂ ಯಾರೀತ ವಲಂಗಾ? ಎಂದು ಕೇಳಿದರೇ ಸಿಗುವ ಉತ್ತರ. ಈತನೊಬ್ಬರ ರೌಡಿಶೀಟರ್
2010 ರಿಂದ ರೌಡಿಶೀಟರ್ ಎನಿಸಿರುವ ವಲಂಗಾ ವಿರುದ್ಧ ಸುಮಾರು 12 ಪೊಲೀಸ್ ಕೇಸ್ಗಳಿವೆ. ಹಿಂದೆ ಹಾರಾಡುತ್ತಿದ್ದ ಈತ ಇತ್ತೀಚೆಗೆ ಸೈಲೆಂಟ್ ಆಗಿದ್ದಂತೆ ತೋರಿಸಿಕೊಂಡಿದ್ದ. ಈತನ ಜೊತೆಗೆ ನೇಪಾಳಿ ಮಂಜ ಕೂಡ ಸೇರಿಕೊಂಡಿದ್ದ. ಇವರಿಬ್ಬರು ಸೇರಿದಂತೆ ಮತ್ತೊಂದಿಷ್ಟು ಮಂದಿ ಫ್ರೀಡಂ ಪಾರ್ಕ್ನಲ್ಲಿ ಶಶಿಗೆ ಕವರ್ ಮಾಡ್ಕೊಂಡು ಹಲ್ಲೆ ಮಾಡಿದ್ದರು ಎಂಬುದು ಪೊಲೀಸ್ ಇಲಾಖೆಯ ಆರೋಪ.
READ : ಶಿವಮೊಗ್ಗಕ್ಕೆ ಮಣ್ಣು ಸಾಗಿಸ್ತಿದ್ದಾಗ ಮೇಲೆ ಕೆಳಗಾಗಿ ರಸ್ತೆ ಬದಿ ಬಿದ್ದ ಲಾರಿ!
ಆ ಪ್ರಕರಣ ಸಂಬಂಧ ನಿನ್ನೆ ಖುಲ್ಲಂಖುಲ್ಲಾ ವಲಂಗಾ ಜಯನಗರ ಪೊಲೀಸ್ ಸ್ಟೇಷನ್ ನಲ್ಲಿ ಕಾಣಿಸಿದ್ದ. ಆತನನ್ನ ಬಂಧಿಸಿದ್ದ ಪೊಲೀಸರು ಇವತ್ತು ಹಲ್ಲೆ ಪ್ರಕರಣದಲ್ಲಿ ಬಳಸಿದ್ದ ಮಾರಕಾಸ್ತ್ರ ರಿಕವರಿಗೆ ಅಂತಾ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಕಾರಣಕ್ಕೆ ಇನ್ಸ್ಪೆಕ್ಟರ್ ಸಿದ್ದೇಗೌಡರು ಫೈರ್ ಮಾಡಿ ಕಾಲಿಗೆ ಬುಲೆಟ್ ಇಳಿಸಿದ್ದಾರೆ.
ಇನ್ನೂ ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು ಪೊಲೀಸ್ ಸಿಬ್ಬಂದಿ ಆಕಾಶ್ ಹಾಗೂ ರವಿಗೆ ಈತನ ಕೃತ್ಯದಿಂಧ ಗಾಯವಾಗಿದ್ದು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾತ್ಮಕವಾಗಿ ಸಿದ್ದೇಗೌಡರು ಫೈರ್ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ವಲಂಗಾ ವಿರುದ್ಧ 307 ಕೇಸ್ ದಾಖಲಾಗಿದ್ದು, ಪ್ರಕರಣದ ಸಂಬಂಧ ಈಗಾಗಲೇ ಕೆಲವು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿಸಿರುವ ಎಸ್ಪಿ ಮಿಥುನ್ ಕುಮಾರ್, ಪೊಲೀಸ್ ಬುಲೆಟ್ ಫೈರ್ ಮೂಲಕ ಪರೋಕ್ಷವಾಗಿ ಶಿವಮೊಗ್ಗ ರೌಡಿಸಂಗೆ ಸಂದೇಶವೊಂದನ್ನ ರವಾನಿಸಿದ್ದಾರೆ.
