ಪಿಂಗಾರ ಬಾರ್ ಬಳಿ ನಡೆದ ಕೊಲೆ ಪ್ರಕರಣ 20 ತಿಂಗಳಲ್ಲಿ ಇತ್ಯರ್ಥ! ಆರೋಪಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?

Malenadu Today

SHIVAMOGGA  |   Dec 6, 2023 |  ಶಿವಮೊಗ್ಗ ನಗರದ ಪಿಂಗಾರ ಬಾರ್​ ಆಂಡ್ ರೆಸ್ಟೋರೆಂಟ್ ಎದುರು ನಡೆದ ಕೊಲೆ ಪ್ರಕರಣವೊಂದು ನಿಮಗೆ ನೆನಪಿರಬಹುದು. ಘಟನೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಘಟನೆ ನಡೆದು 20 ತಿಂಗಳಲ್ಲಿ ಕೋರ್ಟ್​ ಈ ಸಂಬಂಧ ವಿಚಾರಣೆ ಮುಗಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ. 

READ : ಅರ್ಜುನನ ಸಾವಿಗೆ ಟ್ವಿಸ್ಟ್! ಕಾಲಿಗೆ ಬಿದ್ದಿತ್ತಾ ಮದ್ದಿನ ಗುಂಡು? ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

ಪಿಂಗಾರ ಬಾರ್​ ಆಂಡ್ ರೆಸ್ಟೋರೆಂಟ್  

ದಿನಾಂಕಃ 02-03-2022 ರಂದು ಮಧ್ಯ ರಾತ್ರಿ ಶಿವಮೊಗ್ಗ ಟೌನ್ ಪಿಂಗಾರ ಬಾರ್ ಅಂಡ್ ರೆಸ್ಟೋರೆಂಟ್ ಎದುರು ರಸ್ತೆಯಲ್ಲಿ ಸಿಮೆಂಟ್ ಇಟ್ಟಿಗೆಯನ್ನು ಚಂದ್ರಶೇಖರ್  ಎಂಬಾತನ ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ  ಮೃತನ ಸಹೋದರ ದೂರು ನೀಡಿದ್ದ. ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 159/2022 ಕಲಂ 302 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. 

READ : ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು! ನಡೆದಿದ್ದರ ಬಗ್ಗೆ ಎಸ್​ಪಿ ಹೇಳಿದ್ದೇನು?

ದೊಡ್ಡಪೇಟೆ ಪೊಲೀಸ್ ಠಾಣೆ

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಹರೀಶ್ ಕೆ ಪಟೇಲ್, ಪಿಐ, ದೊಡ್ಡಪೇಟೆ ಪೊಲೀಸ್ ಠಾಣೆ  ಆರೋಪಿ ಶಿವಮೊಗ್ಗ ಟೌನ್ ರಾಜೀವ್ ಗಾಂಧಿ ಬಡಾವಣೆಯ ವಾಸಿ ಪರಶುರಾಮನನ್ನ ಬಂಧಿಸಿ ಆತನ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದರು. ಕೋರ್ಟ್​ನಲ್ಲಿ  ಶ್ರೀಮತಿ ಪುಷ್ಪಾ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದರು. 

 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 

ಸದ್ಯ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ 05-12-2023  ರಂದು ಆರೋಪಿ ಪರಶುರಾಮ @ ಪರ್ಸಾ @ ಚಿಂಗಾರಿ, 29 ವರ್ಷ, ರಾಜೀವ್ ಗಾಂಧಿ ಬಡಾವಣೆ ಶಿವಮೊಗ್ಗ ಟೌನ್ ಈತನ ವಿರುದ್ಧ ಕೊಲೆ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ  ಜೀವಾವದಿ ಶಿಕ್ಷೆ ಮತ್ತು ರೂ 10,000/- ದಂಡ ವಿಧಿಸಿ ಆದೇಶಿಸಿರುತ್ತಾರೆ

 

Share This Article