KARNATAKA NEWS / ONLINE / Malenadu today/ Nov 16, 2023 SHIVAMOGGA NEWS
Shivamogga | Malnenadutoday.com | ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ಅಂತ್ಯಾಕ್ಷರಿ ಸ್ಪರ್ದೆ…ಪ್ರವೇಶ ಉಚಿತ
ಅಖಿಲ ಕರ್ನಾಟ ಒಕ್ಕಲಿಗ ಸಂಘದ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಡಾಕ್ಟರ್ ಶಾಂತಾ ಸುರೇದ್ರ ಹೇಳಿದ್ದಾರೆ.
ಶಿವಮೊಗ್ಗದ ಪ್ರೆಸ್ಟ್ ಟ್ರಸ್ಟ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21-1123 ರಂದು ಆದಿಚುಂಚನ ಗಿರಿ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಸಾಗಿದ್ದು. ಕನ್ನಡ ನಾಡಿನ ನಡೆ-ನುಡಿ, ಹಿರಿಮೆ-ಗರಿಮೆಯ ಚಲನ ಚಿತ್ರಗೀತೆ ಭಾವಗೀತೆ ಜನಪದ ಗೀತೆಗಳ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
READ : ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿಯು ಮೀಸಲಾತಿ ನೀಡಿ
10 ಮಹಿಳೆಯರನ್ನು ಒಳಗೊಂಡ ಒಂದು ಗುಂಪಿನಂತೆ ಕಾರ್ಯಕ್ರಮದಲ್ಲಿ ಭಾಗವಹಿಸತಕ್ಕದ್ದು, ಪ್ರಥಮ ದ್ವಿತೀಯ ಹಾಗು ತೃತೀಯ ವಿಶೇಷ ಗುಂಪುಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಸಮಾಧಾನಕರ ಗುಂಪಿಗೆ ಬಹುಮಾನವಾಗಿ ಪ್ರಮಾಣ ಪತ್ರ ನೀಡಲಾಗುವುದು ಹಾಗು ಕಾರ್ಯಕ್ರಮದಲ್ಲಿ ಉಪಹಾರ ವ್ಯವಸ್ತೆ ಕಲ್ಪಿಸಲಾಗಿದೆ. ಪ್ರವೇಶ ಉಚಿತ ಎಂದು ಶಾಂತಾ ಸುರೇಂದ್ರ ಹೇಳಿದ್ದಾರೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9448024926, 9845948118, 9448105901, 9480286253, 9449260265