ಸಕ್ರೆಬೈಲ್ ಆನೆ ಬಿಡಾರ | ಹೆಣ್ಣು ಮರಿಗೆ ಜನ್ಮ ನೀಡಿದ ಬಾನುಮತಿ ಆನೆ | ಸುದ್ದಿ ಬಹಿರಂಗ ಪಡಿಸಲಿಲ್ಲವೇ ಅಧಿಕಾರಿಗಳು?

Malenadu Today

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

 

SHIVAMOGGA | ಶಿವಮೊಗ್ಗ ಸಕ್ರೆಬೈಲ್ ಆನೆ ಬಿಡಾರದಿಂದ ಮತ್ತೊಂದು ಗುಡ್ ನ್ಯೂಸ್​ ಬಂದಿದೆ. ಸಕ್ರೆಬೈಲ್ ಆನೆ ಬಿಡಾರದ (Sakrebyle elephant camp) ನ ಬಾನುಮತಿ ಆನೆ ಮರಿಹಾಕಿದೆ. ಆದರೆ ಈ ವಿಚಾರವನ್ನೇ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಸುದ್ದಿಯು ಹೊರಹೋಗದಂತೆ ತಡೆ ಹಿಡಿದಿರುವುದು ಯಾವ ಕಾರಣಕ್ಕೆ ಎನ್ನುವುದನ್ನ ಅಧಿಕಾರಿಗಳೇ ಹೇಳಬೇಕಿದೆ. 

 

READ : ಆನೆ ಬಾಲಕ್ಕೆ ಕತ್ತಿಯಿಂದ ಕಡಿದವರು ಯಾರು? | ಬಾನುಮತಿ ಆನೆ ವಿಚಾರದಲ್ಲಿ ಡಿಸಿಎಫ್​ ಪ್ರಸನ್ನ ಕೃಷ್ಣ ಪಟಗಾರ್ ಹೇಳಿದ್ದೇನು?

 

ಸದ್ಯ ಸಿಕ್ಕಿರುವ ಮೂಲಗಳ ಪ್ರಕಾರ, ಬಿಡಾರದ ಆನೆ ಬಾನುಮತಿ ಹೆಣ್ಣು ಮರಿಗೆ ಜನ್ಮ ನೀಡಿದೆ. ನಿನ್ನೆ ಮರಿಗೆ ಜನ್ಮ ನೀಡಿದೆ ಎನ್ನಲಾಗಿದೆ. ಆದರೆ ಮರಿಯ ಬಗ್ಗೆ ಯಾವೊಂದು ಮಾಹಿತಿಯನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಇತ್ತೀಚೆಗೆ ತುಂಬುಗರ್ಭಿಣಿ ಬಾನಮತಿ ಆನೆಯ ಬಾಲವನ್ನ ದುಷ್ಕರ್ಮಿಗಳು ಕಟ್ ಮಾಡಿದ್ದರು. ಇದರ ಬಗ್ಗೆ ಮಲೆನಾಡು ಟುಡೆ ಎಕ್ಸ್​ಕ್ಲ್ಯೂಸಿವ್ ಆಗಿ ವರದಿ ಮಾಡಿತ್ತು. ಅಲ್ಲದೆ ವರದಿಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಮೂಕಪ್ರಾಣಿಯ ಮೇಲೆ ಮಾರಕಾಸ್ತ್ರ ಬಳಸಿರುವುದು ಆಕ್ಷೇಪಕ್ಕೆ ಗುರಿಯಾಗಿತ್ತು. 

 

READ : BREAKING NEWS | ಶಿವಮೊಗ್ಗ ದಸರಾಗೆ ಬಂದು ಮರಿಹಾಕಿದ ನೇತ್ರಾವತಿ ಆನೆ!| ವಾಸವಿ ಶಾಲೆ ಆವರಣದಲ್ಲಿ ಹೆರಿಗೆ

 

ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳು ಶಿವಮೊಗ್ಗ ದಸರಾಕ್ಕೆ ಕರೆತಂದಿದ್ದ ನೇತ್ರಾವತಿ ಆನೆ ವಾಸವಿ ಶಾಲೆ ಆವರಣದಲ್ಲಿಯೇ ಮರಿಹಾಕಿತ್ತು. ಈ ವಿಚಾರವಾಗಿ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ ಎಂಬ ವದಂತಿಯಿದ್ದು, ಇದರ ಬಗ್ಗೆಯು ಅಧಿಕಾರಿಗಳು ಮೌನ ಮುರಿದಿಲ್ಲ. ಸಕ್ರೆಬೈಲ್ ಕ್ಯಾಂಪ್​ನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಗೌಪ್ಯವಾಗಿ ಇಡಲು ಕಾರಣ ಸ್ಪಷ್ಟವಾಗುತ್ತಿಲ್ಲವಾದರೂ, ಬಿಡಾರದಲ್ಲಿ ಏನೋ ನಡೆಯುತ್ತಿದೆ ಎಂಬಂತಹ ಅನುಮಾನಗಳಿಗೆ ಈ  ಚಟುವಟಿಕೆಗಳು ಪುಷ್ಟಿ ನೀಡುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿಗಳು.


 

Share This Article