KARNATAKA NEWS/ ONLINE / Malenadu today/ Nov 3, 2023 SHIVAMOGGA NEWS
CHIKKAMAGALURU | ಆರ್ಟಿಫಿಷಿಯಲ್ ಸರಗಳನ್ನು ಕದಿಯುತ್ತಿದ್ದ ಸಂಪತ್ ಕುಮಾರ್ ಅಲಿಯಾಸ್ ಪಾಪಿ ಎಂಬ 30 ವರ್ಷದ ಯುವಕನನ್ನ ಆಲ್ದೂರು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ತೋರಣ ಮಾವು ನಿವಾಸಿಯೊಬ್ಬರ ಮನೆಯಲ್ಲಿ ಕಳದೆ ಅಕ್ಟೋಬರ್ 29ರಂದು ಕಳ್ಳತನ ನಡೆದಿತ್ತು. ಮಾಲೀಕರು ತೋಟಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಕಳ್ಳತನ ವೆಸಗಿದ್ದರು. ಸುಮಾರು 15 ಗ್ರಾಂ ಚಿನ್ನದ ಸರ ಮತ್ತು ಆರ್ಟಿಫಿಷಿಯಲ್ ಸರಗಳನ್ನು ಕಳವು ಮಾಡಲಾಗಿತ್ತು.
READ : ಧಗಧಗ ಅಂತಿದ್ದ ಮನೆಯೊಳಗೆ ನುಗ್ಗಿ ಇಬ್ಬರ ಜೀವ ಉಳಿಸಿದ ಮಹಿಳೆಯರು! ಏನಿದು ಘಟನೆ
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತೋರಣಮಾವು ನಿವಾಸಿ ಶಾಂತಪ್ಪ ಅಲಿಯಾಸ್ ಸಂಪತ್ತಕುಮಾರ ಅಲಿಯಾಸ್ ಪಾಪಿ (30) ಎಂಬಾತನನ್ನು ಬಂಧಿಸಿದ್ದಾರೆ. ಅಡುಗೆ ಕೆಲಸ ಮಾಡ್ತಿದ್ದ ಈತ ಕಳವು ಮಾಡಿದ್ದ ಆಭರಣವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ.
ಸದ್ಯ ಆರೋಪಿಯಿಂದ ಕಳುವಾದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಅಕ್ಷಿತಾ ಕೆ.ಪಿ, ಕೀರ್ತಿ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.