KARNATAKA NEWS/ ONLINE / Malenadu today/ Oct 23, 2023 SHIVAMOGGA NEWS
ನಾಳೆ ವಿಜಯದಶಮಿ! ಈ ನಡುವೆ ಅದ್ದೂರಿ ದಸರಾ ಆಚರಣೆಗೆ ಶಿವಮೊಗ್ಗಕ್ಕೆ ಸಕ್ರೆಬೈಲ್ ಆನೆ ಬಿಡಾರದ ಮೂರು ಆನೆಗಳು ಆಗಮಿಸಿದ್ದವು. ಅಂಬಾರಿ ಹೊರಲು ಆಗಮಿಸಿದ್ದ ಸಾಗರ್ ಜೊತೆಯಲ್ಲಿ ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿ ಎಲ್ಲೆಡೆ ತಾಲೀಮು ನಡೆಸಿದ್ದವು. ಸೋಮವಾರವಷ್ಟೆ ಸಿಟಿ ರೌಂಡ್ಸ್ ಹಾಕಿದ್ದ ಆನೆಗಳ ಪೈಕಿ ಶುಭ ಸಮಯದಲ್ಲಿ ಶುಭ ಸುದ್ದಿಯೊಂದು ಹೊರಬಿದ್ದಿದೆ.
ದಸರರಾ ಉತ್ಸವಕ್ಕೆ ಶಿವಮೊಗ್ಗಕ್ಕೆ ಬಂದ ಆನೆಗಳ ಪೈಕಿ ನೇತ್ರಾವತಿ ಮರಿಯನ್ನು ಹಾಕಿದೆ. ಶಿವಮೊಗ್ಗಕ್ಕೆ ಸಕ್ರೆಬೈಲ್ ಆನೆ ಬಿಡಾರದಲ್ಲಿ ಆನೆಗಳನ್ನು ಕರೆತರುವಾಗಲೇ ಬಿಡಾರದ ಹೆಣ್ಣಾನೆಗಳ ಪೈಕಿ ಬಾನುಮತಿ ಪ್ರೆಗ್ನೆಂಟ್ ಆಗಿದ್ದಳು.. ಕುಂತಿ ಈಗಷ್ಟೆ ಮರಿ ಹಾಕಿದ್ದಳು. ನೇತ್ರಾವತಿ ಸಹ ಗರ್ಭಿಣಿ ಎನ್ನಲಾಗಿತ್ತು.
ಹಾಗಾಗಿ ಯಾವ ಆನೆಗಳನ್ನು ಕರೆತರಬೇಕು ಎಂಬ ವಿಚಾರದಲ್ಲಿ ಕೊನೆಗೆ ನೇತ್ರಾವತಿಯನ್ನು ಕರೆತರಲಾಗಿದೆ. ಇದೀಗ ದಸರಾಕ್ಕೆ ಕರೆತಂದ ನೇತ್ರಾವತಿಯು ಮರಿ ಹಾಕಿದ್ಧಾಳೆ. ಇದೇ ರೀತಿಯಲ್ಲಿ ಮೈಸೂರು ದಸರಾದ ಸಂದರ್ಭದಲ್ಲಿ ಆನೆಯೊಂದು ಮರಿಹಾಕಿದ ಘಟನೆ ನಡೆದಿತ್ತು. ಅಲ್ಲದೇ ಈ ಹಿಂದೆ ಕುಂತಿ ಆನೆ ಕೂಡ ವಾಸವಿ ಶಾಲೆಯ ಆವರಣದಲ್ಲಿ ದಸರಾ ಸಂದರ್ಭದಲ್ಲಿ ಮರಿಹಾಕಿದ್ದ ಘಟನೆ ನಡೆದಿತ್ತು.
ಇನ್ನೂ ತುಂಬು ಗರ್ಭಿಣಿಯಾದಂತಹ ಆನೆಗಳನ್ನು ದಸರಾ ಕಾರ್ಯಕ್ರಮಕ್ಕೆ ಕರೆತಂದಿರುವ ಬಗ್ಗೆ ಆಕ್ಷೇಪಗಳು ಎದ್ದಿವೆ. ಮತ್ತೊಂದೆಡೆ ಆನೆಯ ಗರ್ಭಧಾರಣೆ ವೈಜ್ಞಾನಿಕವಾಗಿ ಕಂಡು ಹಿಡಿಯುವುದು ಕಷ್ಟ. ಕೆಲವು ಸಹಜ ಬದಲಾವಣೆ ತೋರುತ್ತವೆ. ಇನ್ನೂ ಕೆಲವು ಆನೆಗಳಲ್ಲಿ ಲಕ್ಷಣಗಳು ಕಾಣುವುದಿಲ್ಲ ಎನ್ನುತ್ತಾರೆ.
ಸದ್ಯ ನೇತ್ರಾವತಿ ವಾಸವಿ ಶಾಲೆ ಆವರಣದಲ್ಲಿ ಮರಿ ಹಾಕಿದ್ದಾಳೆ. ಹೆಣ್ಣು ಮರಿ ಜನನವಾಗಿದ್ದು, ಬಿಡಾರದ ಸಿಬ್ಬಂದಿಯಲ್ಲಿ ಹರ್ಷ ಮೂಡಿದೆ. ಇನ್ನೊಂದೆಡೆ ಹಾಕಿರುವುದರಿಂದ ನಾಳೆಯ ಜಂಬುಸವಾರಿಯಲ್ಲಿ ಸಾಗರ್ ಆನೆ ಜೊತೆ ಹೇಮಾವತಿ ಆನೆಯನ್ನು ಸಹ ಬಳಸಿಕೊಳ್ಳಲು ಕಷ್ಟವಾಗಿದೆ. ಹೆಣ್ಣಾನೆ ಮರಿಹಾಕಿದ ನಂತರ ಅದರ ದೇಖಾರೇಖಿಯನ್ನು ಸಂಬಂಧಿ ಆನೆ ನೋಡಿಕೊಳ್ಳುತ್ತದೆ. ಸದ್ಯ ಜೊತೆಯಲ್ಲಿರುವ ಹೇಮಾವತಿ ಆನೆಯೇ ನೇತ್ರಾವತಿಯನ್ನ ಹಾಗೂ ಅದರ ಮರಿಯನ್ನು ನೋಡಿಕೊಳ್ಳುತ್ತಿದೆ.
ಇನ್ನಷ್ಟು ಸುದ್ದಿಗಳು
ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು
ರಾಗಿಗುಡ್ಡ ಕೇಸ್ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್ !
ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?
