KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’
–
ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಶಿವಮೊಗ್ಗದಸರಾ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಇಂದು ರೈತ ದಸರಾ ಅಂಗವಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸ್ಟೆನ್ಸ್ ಮೈದಾನದಲ್ಲಿ ರೈತ ಜಾಥಾಕ್ಕೆ ರೈತ ದಸರಾ ಸಮಿತಿ ಅಧ್ಯಕ್ಷ ಮೆಹಬ್ ಶರೀಫ್ ಚಾಲನೆ ನೀಡಿದ್ರು
ರೈತ ಮುಖಂಡರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಶೃಂಗಾರಗೊಂಡ ಟ್ರ್ಯಾಕ್ಟರ್, ಎತ್ತಿನಗಾಡಿಗಳು ಮರವಣಿಗೆಯ ಕೇಂದ್ರಬಿಂದುವಾಗಿದ್ದು, ಆಕರ್ಷಣೀಯವಾಗಿತ್ತು. ಎತ್ತಿನಗಾಡಿಗಳಲ್ಲಿ ರೈತ ನಾಯಕರಾದ ಹೆಚ್ ಆರ್ ಬಸವರಾಜಪ್ಪ, ಕೆ.ಟಿ. ಗಂಗಾಧರ್ ಸ್ವತಃ ಎತ್ತಿನ ಗಾಡಿಯನ್ನು ಚಲಾಯಿಸಿದರು.ಶಾಸಕ ಎಸ್.ಎನ್. ಚನ್ನಬಸಪ್ಪ ಕೂಡ ಎತ್ತಿನಗಾಡಿಯಲ್ಲಿ ಕುಳಿತಿದ್ದರು. ಆನಂತರ ಅವರು ಕೂಡ ಎತ್ತಿನ ಗಾಡಿ ಚಲಾಯಿಸಿ ಮೆರವಣಿಗೆಯಲ್ಲಿ ಸಾಗಿದ್ರು
ಈ ಸಂದರ್ಭದಲ್ಲಿ ಮಾತನಾಡಿದ ರೈತ ದಸರಾ ಸಮಿತಿಯ ಮೇಹಖ್ ಶರೀಫ್, ರೈತರು ಮಳೆ ಇಲ್ಲದೆ ಸಂಕಟದಲ್ಲಿದ್ದಾರೆ. ಆದರೂ ಕೂಡ ದಸರಾ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಂಕಷ್ಟಗಳು ಬೇಗನ ದೂರವಾಗಬೇಕು. ರೈತರು ಸಂತೋಷವಾಗಿದ್ದಾಗ ಮಾತ್ರ ದೇಶ ಸುಭಿಕ್ಷವಾಗಿರುತ್ತದೆ ಎಂದರು.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ