KARNATAKA NEWS/ ONLINE / Malenadu today/ Jul 8, 2023 SHIVAMOGGA NEWS
ಶಿವಮೊಗ್ಗ ಪಾತಕಲೋಕದ ಕಥೆಗಳಲ್ಲಿ ಒಂದು ಕಥೆ ಅದೇಗೋ ಮರವಿನ ಅಟ್ಟ ಸೇರಿಬಿಟ್ಟಿತ್ತು. ಮೊನ್ನೆ ಮೊನ್ನೆ ಶಿವಮೊಗ್ಗ ಕೋರ್ಟ್ನಲ್ಲಿ ಆದ ಜೀವಾವಧಿ ಶಿಕ್ಷೆ ತೀರ್ಪು, ಹಳೆಯದನ್ನ ಮತ್ತೆ ನೆನಪು ಮಾಡಿಕೊಡ್ತಿದೆ. ಯಾಕೆಂದರೆ, ಮಾನ್ಯ ನ್ಯಾಯಾಲಯ ನೀಡಿದ ತೀರ್ಪು ಕೇವಲ ಪ್ರಕರಣವೊಂದಕ್ಕೆ ಸಂಬಂಧಿಸಿದಲ್ಲ. ಆ ಪ್ರಕರಣದ ಹಿಂದೆ ಎರಡು ಕುಟುಂಬಗಳ ವೈಷಮ್ಯವಿತ್ತು. ಒಂದು ಸಮುದಾಯದ ನಡುವಿನ ಪ್ರಾಬಲ್ಯ ಸಾಧಿಸುವ ರೌಡಿಸಂ ಇತ್ತು.. ಆ ಕೇಸ್ನ ಫ್ಲ್ಯಾಶ್ಬ್ಯಾಕ್ನ್ನ ಇವತ್ತು ಹೇಳಲು ಹೊರಟಿದ್ದೇನೆ……ಅದಕ್ಕೂ ಮೊದಲು ಬಚ್ಚಾ ಮರ್ಗಯಾ! ಕೇಸ್ ಗೊತ್ತಾ? ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದ್ದೇಕೆ? ಶಿವಮೊಗ್ಗದ ಮೋಸ್ಟ್ ಇಂಟರ್ಸ್ಟಿಂಗ್ ಪ್ರಕರಣದ ಪೂರ್ತಿ ಡಿಟೇಲ್ಸ್! ಈ ಸ್ಟೋರಿಯನ್ನ ಕ್ಲಿಕ್ ಮಾಡಿ ಥಟ್ ಅಂತಾ ಓದಿ…ನಿಮಗೊಂದು ಕ್ಲೂ ಸಿಗುತ್ತೆ..
ಶಿವಮೊಗ್ಗ ಅಂಡರ್ವರ್ಲ್ಡ್ ಮತ್ತು ಆ ನಸ್ತ್ರು
ಎಲ್ಲದರಲ್ಲಿಯು ಶಿವಮೊಗ್ಗ ಕುದಿಯುವ ನೆಲವೇ… ಪಾತಕಲೋಕದಿಂದ ಹಿಡಿದು ಅನ್ಯಾಯದ ವಿರುದ್ದದ ಹೋರಾಟದವರೆಗೂ ಹೆಸರು ಮಾಡಿದ ವ್ಯಕ್ತಿಗಳಿಗೆ ಶಿವಮೊಗ್ಗ ಪವರ್ ಫುಲ್ ಪ್ಲೇಸ್! ವಿಚಾರಕ್ಕೆ ನಿಷ್ಟವಾಗಿ ರೌಡಿಸಂ ಮ್ಯಾಟ್ರಿಗೆ ಬರೋದಾದ್ರೆ, ಕೆಲವು ವರ್ಷಗಳ ಹಿಂದಿನ ಮಾತು. ಶಿವಮೊಗ್ಗದಲ್ಲಿ ಸೀನು ಬಂದರೆ, ಬೆಂಗಳೂರಲ್ಲಿ ಜ್ವರ ಬರುತ್ತೆ ಅನ್ನುವ ಹಾಗಿತ್ತು. ಅಂತಹ ಕ್ಯಾಲುಕೇಟೆಡ್ ಪಾತಕಲೋಕದಲ್ಲಿ ಮುಸ್ಲಿಮ್ ಸಮುದಾಯದಲ್ಲಿಯೇ ಡಾನ್ ಅನ್ನಿಸಿಕೊಳ್ಳಲು ಹೊರಟಿದ್ದ ಒಂದಿಷ್ಟು ಮಂದಿಯಿದ್ರು. ಮಾಫಿಯಾ ಪಟ್ಟಕ್ಕಾಗಿ ಅವರವರ ನಡುವೆಯೇ ಪೈಪೋಟಿ ನಡೆದಿತ್ತು. ಇಂಗ್ಲೇಂಡ್ ಮೇಡ್ ಗನ್ ಶಿವಮೊಗ್ಗದಲ್ಲಿ ಓಡಾಡುವ ಮಟ್ಟಿಗೆ ಆ ಮಂದಿಯ ನಡುವೆ ಜಿದ್ದಾಜಿದ್ದಿಯಿತ್ತು. ಅಂತಹ ರೌಡಿ ಪರೇಡ್ನಲ್ಲಿ ಆತನೊಬ್ಬ ಹುಚ್ಚನಂತಿದ್ದ. ಆತನ ಎದುರಿಗೆ ನಿಲ್ಲೋದಕ್ಕೆ ರೌಡಿಗಳೆ ಹೆದರೋರು. ಆತ ಮತ್ಯಾರು ಅಲ್ಲ. 15 ವರ್ಷಗಳ ಹಿಂದೆಯೇ ಆತ ಕೊಲೆಯಾದ ಮೋಸ್ಟ್ ನಟೋರಿಯಸ್ ರೌಡಿ ನಸ್ರು

ಜಮಾನದಲ್ಲಿ ಶಿವಮೊಗ್ಗವನ್ನು ಬೆಚ್ಚಿಬೀಳಿಸಿದ್ದ ರೌಡಿ ನಸ್ರು.
ನಸ್ರು..,ಹೆಸರು ಕೇಳಿದ ತಕ್ಷಣ ಬೆಂಗಳೂರಿನ ರೌಡಿ ನಸ್ರು ನ ಹೆಸರು ತಕ್ಷಣಕ್ಕೆ ನೆನಪಾಗಬಹುದು. ಆದರೆ ಈತ ಶಿವಮೊಗ್ಗ ನಸ್ರು . ಬೆಂಗಳೂರಿನ ಆ ರೌಡಿಗಿಂತಲೂ ಟ್ರಮಂಡಸ್,ಪ್ರೆಕ್ಯುಲಿಯರ್ ಆ್ಯಂಡ್ ನಟೋರಿಯಸ್.. ಶಿವಮೊಗ್ಗದ ಸವಾಯಿ ಪಾಳ್ಯದ ವಾಸಿ ನಸ್ರು ,ಆರ್.ಎಕ್ಸ್ ಯಮಹ ಬೈಕ್ ಏರಿ ಹೊರಟ್ರೆ.., ಏಕಾಂಕಿಯಾಗಿಯೇ ಅಪರಾಧ ಕೃತ್ಯ ಎಸಗ್ತಿದ್ದ.. ವಿಶೇಷ ಅಂದರೆ, ಈತ ಸಾಮಾನ್ಯರಿಗೆ ತಗ್ಲಾಕ್ಕಿಕೊಳ್ತಿರಲಿಲ್ಲ. ಈತನ ಕಿರಿಕ್ ಏನಿದ್ರೂ, ಕಾನೂನು ಪಾಲಿಸದೇ ಇರೋರ ಹತ್ರ.. ಅಂದರೆ ರೂಲ್ಸ್ ಬ್ರೇಕ್ ಮಾಡಿ, ಒಸಿ, ಇಸ್ಪೀಟ್ ಆಡಿಸ್ತಿದ್ದವರನ್ನ ಮಟ್ಕಾ ದಂಧೆ ಕೋರರನ್ನ, ಗಂಧದಕಳ್ಳರನ್ನ ನಸ್ರು ಎದುರಾಕಿಕೊಳ್ತಿದ್ದ. ಹಪ್ತಾ ವಸೂಲಿ ಮಾಡ್ತಿದ್ದ. ಕೊಡದಿದ್ದರೇ ಬೆರಳನ್ನೋ, ಕಿವಿಯನ್ನೋ ಕಟ್ ಮಾಡ್ತಿದ್ದ. ಹೀಗೆ ಕತ್ತರಿಸಿದ ಭಾಗದಲ್ಲಿರುವ ಚಿನ್ನದ ಆಭರಣಗಳನ್ನ ಕಿತ್ಕೊಂಡು ಹೋಗುತ್ತಿದ್ದ ಎಂದು ಹೇಳುತ್ತೆ ಪೊಲೀಸ್ ಕ್ರೈಂ ಹಿಸ್ಟರಿಯ ಫೈಲ್ಗಳು. 90 ರ ದಶಕ. ಶಿವಮೊಗ್ಗದಲ್ಲಿ ಸ್ಯಾಂಡಲ್ ಸ್ಮಗಲ್ ಜೋರಾಗಿ ನಡೆಯುತ್ತಿದ್ದ ಕಾಲ. ಆದರೆ ನಸ್ರು, ಸ್ಮಗಲ್ ಮಾಡಿ ಬಚ್ಚಿಡ್ತಿದ್ದ ಗಂಧವನ್ನೆ ಕದ್ದು ಪರಾರಿಯಾಗ್ತಿದ್ದ. ಆನಂತರ ಕಳ್ಳರಿಗೆ ಡೀಲ್ ಇಟ್ಟು ದುಡ್ಡು ಮಾಡ್ತಿದ್ದ

ಏನಕ್ಕೀಗ ನಸ್ರು ಕಥೆ ಗೊತ್ತಾ?
ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದು ನಸ್ರು, ದಾಡಿ ಬಷೀರ್ ಗ್ಯಾಂಗ್ಗೂ ಸಾಕಷ್ಟು ಕಾಟ ಕೊಟ್ಟಿದ್ದ. ಅದರಲ್ಲಿಯು , ದಾಡಿ ಬಷೀರ್ ಬಂಟ ಕಾಲಿಂ ಅನ್ನೋ ವ್ಯಕ್ತಿಯ ಕೈಗಳನ್ನು ಕಟ್ ಮಾಡಿ,ಚಾಕುವಿನಂದ ತಿವಿದು ಅಟೆಂಟ್ಪು ಮರ್ಡರ್ ಕೇಸ್ ಹಾಕಿಸಿಕೊಂಡಿದ್ದ. ಈತನಿಂದ ಚುಚ್ಚಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಖಾಲಿಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈ ಘಟನೆ ನಂತರ ನಸ್ರು ಹಣೆಬರಹದ ಗಡಿಯಾರ ವಿರುದ್ಧ ದಿಕ್ಕಿನಲ್ಲಿ ತಿರುಗುವುದಕ್ಕೆ ಆರಂಭವಾಯ್ತು. ಯಾವ ನಸ್ರು ಖಾಲಿಂ ಸಾವಿಗೆ ಕಾರಣವಾದ್ನೋ ಆಗಲೇ ಆತನ ಅಂತ್ಯಕ್ಕೆ ಸ್ಕೆಚ್ ಪೂರ್ಣಗೊಂಡಿತ್ತು. ಆ ಕಡೆ ಪೊಲೀಸರು ನಸ್ರುಗೆ ಬುಲೆಟ್ನ ರುಚಿ ತೋರಿಸುವ ಸಿದ್ಧತೆಯಲ್ಲಿದ್ರು. ಇನ್ನೊಂದೆಡೆ ಅಣ್ಣನನ್ನ ಕೊಂದಿದ್ದರ ಪ್ರತೀಕವಾಗಿ, ನಸ್ರು ಮರ್ಡರ್ ಗೆ ಮಚ್ಚು ಲಾಂಗ್ ಸಮೇತ ಟೀಂ ಸಿದ್ದವಾಗುತ್ತೆ. ಶಿವಮೊಗ್ಗದ ಬೈಪಾಸ್ ರಸ್ತೆ ಬಳಿಯ ಸೂಳೆಬೈಲು ಸಮೀಪ ನಸ್ರು ಅನಾಮತ್ತಾಗಿ ಬೀದಿ ಹೆಣವಾಗುತ್ತಾನೆ.

ಅಪ್ಪನ ಕೊಂದವನ ಪ್ರತಿಕಾರಕ್ಕೆ ಸಿದ್ದವಾದ್ರು ಮಕ್ಕಳು
ಹಾಗೆ ನಸ್ರು ಫಿನಿಶ್ ಆದಮೇಲೆ ಕೇಳಿಬರುವ ಹೆಸರು ಬಚ್ಚಾ.. ನಸ್ರು ಮಗ ಬಚ್ಚಾ..ಕೂಡ ಹರೆಯದ ವಯಸ್ಸಿನಲ್ಲಿಯೇ ಫಿಲ್ಡ್ಗೆ ಎಂಟ್ರಿಕೊಟ್ಟಿದ್ದ. ಆದರೆ ಅಪ್ಪನನ್ನ ಕೊಂದವರನ್ನ ಗತಿಕಾಣಿಸದೇ, ಆತನಿಗೆ ದೊಡ್ಡ ಹೆಸರು ಬರೋದಕ್ಕೆ ಅಂಡರ್ವರ್ಲ್ಡ್ನಲ್ಲಿ ಸಾಧ್ಯವಿರಲಿಲ್ಲ. ಹಾಗಂತ ದ್ವೇಷದ ಕೊಲೆಯನ್ನು ಸಲೀಸಲಾಗಿ ಮಾಡೋದಕ್ಕೂ ಸಾಧ್ಯವಾಗ್ತಿರಲಿಲ್ಲ. ಹಾಗಾಗಿ ಗಾಂಜಾ ಮಾಫಿಯಾದಲ್ಲಿ ಸಕ್ರಿಯನಾಗಿ, ಹಂತಹಂತವಾಗಿ ಅಂಡರ್ವರ್ಲ್ಡ್ನ್ನ ಕೈಗೆ ತೆಗೆದುಕೊಳ್ಳಲು ಮುಂದಾಗಿದ್ದ. ಅಟ್ ದೀ ಸೇಮ್ ಟೈಂ ಕೀಲಿ ಇಮ್ರಾನ್ ಎಂಬಾತನ ಬಚ್ಚಾನಿಗೆ ನೇರಾನೇರ ಸವಾಲು ಒಡ್ಡಿದ್ದ.

ಬಚ್ಚನಾ ಮೇಲೆ ಮೂರು ಸಲ ಅಟ್ಯಾಕ್
ಲೆಕ್ಕವಿಲ್ಲದಷ್ಟು ದುಡ್ಡು ಬರುವ ಮಾಫಿಯಾದ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ ಎರಡು ಟೀಂಗಳು ಒಳಗಿಂದ ಒಳಗೆ ಫೈಟ್ ಮಾಡುತ್ತಿತ್ತ. ಇದರ ನಡುವೆ ಕೀಲಿ ಇಮ್ರಾನ್ ಗ್ಯಾಂಗ್ ಬಚ್ಚನಾ ಟೀಮನ್ನ ಮೂರು ಸಲ ಬೆನ್ನಟ್ಟಿತ್ತು. ಅಲ್ಲದೆ ಆ ಒಂದು ಮಾತು ಬಚ್ಚಾನನ್ನ ಕೆರಳಿಸ್ತಿತ್ತು. ಅಪ್ಪನ್ನ ಕೊಂದವರನ್ನೇ ಏನು ಮಾಡ್ಕೊಳ್ಳಲಾಕೆ ಆಗ್ಲಿಲ್ಲ. .. ಇನ್ನ ನಮ್ಮ ಹತ್ರ ಏನೋ ಕಿಸಿತಿಯಾ…ಪೊಲೀಸ್ ಇಲಾಖೆಯ ಗೌಪ್ಯ ವರದಿಗಳಲ್ಲಿ ಇಂತಹ ಹಲವು ವಿಷಯಗಳಿವೆ. ಮೇಲಿಂದ ಮೇಲೆ ಅಟ್ಯಾಕ್ ಮತ್ತು ಪದೇಪದೇ ಕಿವಿಗಚ್ತಿದ್ದ ಆ ಮಾತು.. ಬಚ್ಚಾ ಕೆರಳಿದ್ದ. ಮಾಸ್ ಅಟ್ಯಾಕ್ ಮಾಡಿ, ಇಡೀ ಶಿವಮೊಗ್ಗ ಅಂಡರ್ ವರ್ಲ್ಡ್ ನ್ನೆ ಅಲ್ಲಾಡಿಸುವ ಪ್ಲಾನ್ ಮಾಡಿದ್ದ. ಇನ್ಫ್ಯಾಕ್ಟ್ ಅದರಲ್ಲಿ ಸಕ್ಸಸ್ ಸಹ ಆಗಿದ್ದ.
ಒಂದೇ ದಿನದಲ್ಲಿ ಮೂರು ಕಡೆ ಅಟ್ಯಾಕ್
ಬಚ್ಚಾ ಮತ್ತವನ ಗ್ಯಾಂಗ್ ಆ ದಿನ ಮೂರು ಕಡೆಯಲ್ಲಿ ಏಕಕಾಲಕ್ಕೆ ಅಟ್ಯಾಕ್ ಮಾಡಿತ್ತು. ಮೊದಲನೇ ಅಟ್ಯಾಕ್ 2016 ಅಕ್ಟೋಬರ್ 13 ರಂದು ನಡೆದಿತ್ತು. ಕೀಲಿ ಗ್ಯಾಂಗ್ ನ ಒಬ್ಬಾತನ ಮೇಲೆ ಆಯನೂರು ಗೇಟ್ ಬಳಿ ಅಟ್ಯಾಕ್ ಮಾಡುವ ಟೀಂ ಬೈಕ್ ಹಾಗೂ ಎದುರಾಳಿ ಗ್ಯಾಂಗ್ನ ಆಸಾಮಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿತ್ತು. ಅದೃಷ್ಟಕ್ಕೆ ಎದುರಾಳಿ ಅಲ್ಲಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದ. ಆದರೆ ಬೈಕ್ ಭಸ್ಮ ಆಗಿತ್ತು.
- ಎರಡನೇ ಅಟ್ಯಾಕ್ನಲ್ಲಿ ಆರ್.ಎಂ.ಎಲ್ ನಗರದಲ್ಲಿ ಬಚ್ಚಾನ ಗ್ಯಾಂಗ್ ಕೀಲಿಯ ಸಂಬಂಧಿಕನಿಗೆ ಚಾಕುವಿನಿಂದ ಚುಚ್ಚಿಬಿಟ್ಟಿತ್ತು.
- ಮೂರನೇ ಅಟ್ಯಾಕ್ನಲ್ಲಿ ಬಚ್ಚಾ ಗ್ಯಾಂಗ್ ಇಂಗ್ಲೆಂಡ್ ಮೇಡ್ ರಿವಾಲ್ವರ್ ಸಮೇತ ದಾಡಿ ಬಷೀರ್ ಮನೆಗೆ ನುಗ್ಗಿ ಫೈರ್ ಮಾಡಿತ್ತು. ಬುಲೆಟ್ ಮಿಸ್ ಫೈರ್ ಆಗಿತ್ತು.
- ದೊಡ್ಡಪೇಟೆ, ತುಂಗಾನಗರ ಲಿಮಿಟ್ಸ್ನಲ್ಲಿ ನಡೆದಿದ್ದ ಈ ಘಟನೆಯಿಂದ ಬಚ್ಚೆ ಬಚ್ಚೆಯಾಗಿ ಉಳಿದಿರಲಿಲ್ಲ. ಆತನೂ ನಟೋರಿಯಸ್ ಆಗುವ ಸೂಚನೆ ಕೊಟ್ಟಿದ್ದ. ಪೊಲೀಸ್ ಇಲಾಖೆ ಆತನ ಬೆನ್ನುಬಿದ್ದಿದ್ದರು.
4000 ಕಿಲೋಮೀಟರ್ ಟ್ರಾವಲ್ ಮಾಡಿದ್ದ ಆರೋಪಿಗಳು
ಎಸ್ಪಿ ಅಭಿನವ್ ಖರೆ ಇರೋ ಟೈಂನಲ್ಲಿ ಇಂತಹದ್ದೊಂದು ಕ್ರೈಂ ಮಾಡಿ, ಎಸ್ಕೇಪ್ ಆಗಿದ್ದ ಆರೋಪಿಗಳು ಶಿವಮೊಗ್ಗದಿಂದ ಮುಂಬೈ ,ಬೆಳಗಾಂ ನಿಂದ ಬೆಂಗಳೂರಿಗೆ ಹೀಗೆ ಊರೂರು ತಿರುಗುತ್ತಿದ್ದರು. ಬರೋಬ್ಬರಿ 4 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದ ಆರೋಪಿಗಳನ್ನ ಅಂದಿನ ತನಿಖಾ ತಂಡ ಎತ್ತಾಕ್ಕೊಂಡು ಬಂದು ಡಿಆರ್ ಕಚೇರಿ ಬಳಿಯಲ್ಲಿ ಕಪ್ಪುಬಟ್ಟೆ, ಕೈಕೋಳ ಹಾಕಿ ನಿಲ್ಲಿಸಿತ್ತು.

ರಿಲೀಸ್ ಆಗಿದ್ದ ಬಚ್ಚಾ ಮರ್ ಗಯಾ
ಅವತ್ತು ಜೈಲು ಸೇರಿದ್ದ ಬಚ್ಚಾ ರಿಲೀಸ್ ಆಗದಿದ್ದರೆ ಬಚಾವ್ ಆಗ್ತಿದ್ದನೇನೋ.. ಯಾಕೆಂದರೆ ಆತ ಮಾಡಿದ್ದ ಘಾತುಕ ಅಟ್ಯಾಕ್ಗೆ ಪ್ರತಿಯಾಗಿ ಜೈಲಿನಿಂದ ಹೊರಗಡೆ ಫೈನಲ್ ಸ್ಕೆಚ್ ರೆಡಿಯಾಗಿತ್ತು. ಬಚ್ಚಾ ಬೇಲ್ ಮೇಲೆ ರಿಲೀಸ್ ಆಗಿದ್ದ. ಅದರ ಬೆನ್ನಲ್ಲೆ ಆ ಒಂದು ಟೀಂ ಬರೋಬ್ಬರಿ ಹುಡುಗ್ರನ್ನ ಹಾಕ್ಕೊಂಡು 08-02-17 ರಂದು ಮದ್ಯಾಹ್ನ 4 ಗಂಟೆಗೆ ಬಚ್ಚಾನ ಮೇಲೆ ದಾಳಿ ಮಾಡುತ್ತೆ. ಬಚ್ಚನನ್ನ ಮಾತನಾಡಿಸಿದ ಒಂದು ಗ್ಯಾಂಗ್ ಆತನನ್ನ ಹಿಡಿದು, ಆತನಿಗೆ ಚಾಕುವಿನಿಂದ ಇರಿದು ಸಾಯಿಸುತ್ತೆ. ಆಮೇಲೆ ಸತ್ತಿದಾನೋ ಇಲ್ವಾ ಎಂದು ಅನುಮಾನ ಬಿದ್ದು ಮತ್ತೆ ಬಂದು ಇರಿಯುತ್ತಾರೆ. ಎಲ್ಲವೂ ವಿಡಿಯೋ ರೆಕಾರ್ಡ್ ಆಗುತ್ತೆ..ಬಚ್ಚಾ ಮರ್ಗಯಾ…ಎಂಬ ಮಾತು ಜೋರಾಗಿ ಕೇಳುತ್ತೆ..

ಶಿವಮೊಗ್ಗ ಗಾಂಜಾಪೇಟೆಯು ಸಮೃದ್ಧ ದುಡ್ಡಿದ ಫಸಲು ಕೊಡುವ ಪ್ರದೇಶ..ಆದರೆ ಕಾಸಿನ ಕೊಯ್ಲಿಗೆ ಇಲ್ಲಿ ಕೊಲೆಗಳೇ ನಡೆದುಹೋಗುತ್ತವೆ ಎಂಬುದಕ್ಕೆ ಅವತ್ತಿನ ಘಟನೆ ಸಾಕ್ಷಿಯಾಗಿತ್ತು. ಅವತ್ತಿನ ಕೇಸ್ನಲ್ಲಿಯೇ ಮೊನ್ನೆ ಕೋರ್ಟ್ ತೀರ್ಪು ನೀಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಅದರ ಬಗ್ಗೆ ಪೂರ್ಣ ವಿವರ ಓದಲು ಬಚ್ಚಾ ಮರ್ಗಯಾ! ಕೇಸ್ ಗೊತ್ತಾ? ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದ್ದೇಕೆ? ಶಿವಮೊಗ್ಗದ ಮೋಸ್ಟ್ ಇಂಟರ್ಸ್ಟಿಂಗ್ ಪ್ರಕರಣದ ಪೂರ್ತಿ ಡಿಟೇಲ್ಸ್! ಈ ಸ್ಟೋರಿಯನ್ನ ಕ್ಲಿಕ್ ಮಾಡಿ
