ಬಚ್ಚಾ ಮರ್​ಗಯಾ! ಕೇಸ್​ ಗೊತ್ತಾ? ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದ್ದೇಕೆ? ಶಿವಮೊಗ್ಗದ ಮೋಸ್ಟ್​ ಇಂಟರ್​ಸ್ಟಿಂಗ್ ಪ್ರಕರಣದ ಪೂರ್ತಿ ಡಿಟೇಲ್ಸ್​!

Malenadu Today

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ ವಾಸಿ ಹಯಾತುಲ್ಲಾಖಾನ್ ಅಲಿಯಾಸ್ ಬಚ್ಚಾ ಎಂಬುವವನ ಕೊಲೆ ಕೇಸಿಗೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 

ಯಾರಿಗೆ ಶಿಕ್ಷೆ 

ಆರೋಪಿಗಳಾಗಿದ್ದ ಅರ್ಬಾಜ್ ಬಿನ್ ಶಾರುಖಾನ್ ಬಿನ್ ಸೈಯದ್ ಮುನಾಥ್, ಸದಾಬ್ ಬಿನ್ ಹಿದಾಯತ್ ಮತ್ತು ಅಲ್ಯಾಜ್ ಅರು ಸೈಯದ್‌ ಜಮೀಲ್ ಎಂಬುವವರಿಗೆ ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಭಾ.ದಂ.ಸಂಹಿತೆ ಹಾಗೂ ತಲಾ ರೂ. 50,000/- ದಂಡವನ್ನು ವಿಧಿಸಿದ್ದಾರೆ. 

ಏನಿದು ಪ್ರಕರಣ 

ಶಿವಮೊಗ್ಗ ಟೌನ್, ದೊಡ್ಡಪೇಟೆ ಪೊಲೀಸ್ ಠಾಗ ವ್ಯಾಪ್ತಿಯ ಬಾನಗರ ವಾಸಿ ನಾಜಿಮಾರ ಮಗನಾದ  ಹಯಾತುಲ್ಲಾ‌ ಆಲಿಯಾಸ್  ಬಚ್ಚಾ ಮತ್ತು  ಟಿಪ್ಪುನಗರ ವಾಸಿಗಳಾದ ಕುರ್ರಮ್​ ಹಾಗೂ ಇಮ್ರಾನ್​ ಷರೀಪ್​ ನಡುವೆ ವೈಷಮ್ಯವಿತ್ತು. 

ಘಟನೆ ಹಿನ್ನೆಲೆ

ಇವರಿಬ್ಬರ ಗುಂಪುಗಳ ನಡುವೆ ಆಗಾಗ ಹೊಡೆದಾಟ ನಡೆದು ಜೈಲಿಗೆ ಹೋಗಿ ಬಂದಿದ್ದ ಉದಾಹರಣೆಗಳಿದ್ದವು. ಅಲ್ಲೆ 2016 ರಲ್ಲಿ ಬಚ್ಚಾ ಗ್ಯಾಂಗ್ ಕುರ್ರಮ್​ನ ಸಹಚರನ ಹೊಟ್ಟೆ ಚುಚ್ಚಿ ಅರೆಸ್ಟ್​ ಆಗಿತ್ತು. ಇದೇ ವಿಚಾರಕ್ಕೆ ಇಮ್ರಾಮ್​ ಷರೀಫ್​ ತಮ್ಮ  ಹುಡುಗರಿಗೆ ಹೊಡೆದವರಿಗೆ ಬಿಡುವುದಿಲ್ಲಾ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ. ಇನ್ನೊಂದೆಡೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಬಚ್ಚಾ ರಿಲೀಸ್ ಆದ ಮೇಲೆ  ಒಬ್ಬೊಬ್ಬರನ್ನಾಗಿ ಮುಗಿಸುತ್ತೇನೆ ಎಂದು ಷರೀಫ್​ ಗ್ಯಾಂಗ್​ಗೆ ಅವಾಜ್ ಹಾಕಿದ್ದ. 

ಸ್ಕೆಚ್​ ರೆಡಿ?

ಈತನನ್ನು ಬಿಟ್ಟರೆ ಮುಂದೆ ನಮ್ಮ ಜೀವಕ್ಕೆ ತೊಂದರೆಯಾಗುತ್ತದೆ ಎಂದು ಕೊಂಡ  ಕುರ್ರಮ್​ ಟೀಂ​ ಗ್ಯಾಂಗ್ ಬಚ್ಚಾನನನ್ನ ಮುಗಿಸಲು ಸ್ಕೆಚ್​ ಹಾಕುತ್ತದೆ. 12 ಸೇರಿಕೊಂಡು ಸಂಚು ರೂಪಿಸಿ, ಪೂರ್ವ ಸಿದ್ಧತೆ ಮಾಡಿಕೊಂಡು ದಿನಾಂಕ: 08-02-2017 ರಂದು ಮಧ್ಯಾಹ್ನ 3.30 ಗಂಟೆ ಸಮಯದಲ್ಲಿ  ಗಣೇಶ ದರ್ಶಿನಿ ಹೋಟೆಲ್ ಪಕ್ಕದ ಮಾತೃಶ್ರೀ ಸ್ಟುಡಿಯೋ ಮುಂಭಾಗ ತೆರಳುತ್ತದೆ. ಅಲ್ಲದೆ ಬಚ್ಚಾ  ಒಬ್ಬನೇ ಕುಳಿತಿದ್ದನ್ನು  ಕಂಡು ಎರಡು ಟೀಂಗಳಾಗಿ ತಂಡ ಡಿವೈಡ್ ಆಗುತ್ತದೆ. ಒಂದು ಟೀಂ ಸ್ಥಳಕ್ಕೆ ಹೋಗಿ ಬಚ್ಚಾನನ್ನ ಮಾತನಾಡಿಸಿ ಕೊಲೆ ಮಾಡುವುದು. ಹಾಗೊಂದು ವೇಳೆ ಆತ ತಪ್ಪಿಸಿಕೊಂಡು ಹೋದರೆ, ಇನ್ನೊಂದು ಟೀಂ ಅಟ್ಯಾಕ್ ಮಾಡುವುದು ಎಂದು ತೀರ್ಮಾನಿಸುತ್ತದೆ. ಹೀಗೆ ಮಾತನಾಡಿಕೊಂಡು ಒಂದು ಬಚ್ಚಾನನ್ನ ಮಾತನಾಡಿಸುವಂತೆ ಮಾತನಾಡಿ, ಆತನನ್ನ ಹಿಡಿದು, ಆತನ ಹೊಟ್ಟೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತದೆ. ‘ಬಚ್ಚಾ ಮರ್‌ಗಯಾ’ ಬಚ್ಚಾ ಮರ್‌ಗಯಾ’ ಎಂದು ಕೂಗುತ್ತಾ ಅಲ್ಲಿಂದ ಎಸ್ಕೇಪ್ ಆಗುತ್ತದೆ. 

ಪ್ರಕರಣದ ತನಿಖೆ

ಈ ಬಗ್ಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ತಮ್ಮ ಠಾಣಾ ಗುನ್ನೆ ಸಂಖ್ಯೆ: 39/2017 ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖಾಧಿಕಾರಿಗಳಾದ  ಕೆ.ಟಿ. ಗುರುರಾಜ, ಸಿ.ಪಿ.ಐ., ರವರು ತನಿಖೆ ಪೂರೈಸಿ ಆರೋಪಿಗಳಾದ ಕುರಮ್ ಮತ್ತು ಆತನ ಸಹಚರರು ಸೇರಿ ಒಟ್ಟು 12 ಜನ ಆರೋಪಿಗಳ ವಿರುದ್ಧ ಭಾ.ದಂ.ಸಂಹಿತೆ ಕಲಂ: 143, 144, 147, 148, 302, 114 ರ:ವಿ 149 ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಕೋರ್ಟ್ ತೀರ್ಪು

ಪ್ರಕರಣವೂ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಅಲ್ಲಿ ವಿಚಾರಣೆ ನಡೆದು ವಿ, ಅರ್ಬಾಜ್,  ಎ. ಶಾರುಖಾನ್ ಸದಾಬ್​, ಅಲ್ಪಾಜ್​ ವಿರುದ್ಧ ಐಪಿಸಿ 143, 14, 147, 148, 302, 114 ಲೆ. (4) ರ ಅಡಿಯಲ್ಲಿ ಆರೋಪ ಸಾಬೀತಾಗಿದೆ. ಹೀಗಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕ ಜೆ.ಶಾಂತರಾಜ್ ವಾದ ಮಂಡಿಸಿದ್ದರು. 


ಸಾಮಾಜಿಕ ಜಾಲತಾಣ! ಇರಲಿ ಹುಷಾರು! ಮನಸ್ಸೋ ಇಚ್ಚೆ ಬರೆದರೇ ಆಗ್ತೀರಾ ಅರೆಸ್ಟು! ಇಲ್ಲಿದೆ ಸಾಂಗ್ಲಿಯಾನ ಕಥೆ

ಶಿವಮೊಗ್ಗ : ಸಾಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಪೋಸ್ಟ್​ಗಳ ಮೇಲೆ ರಾಜ್ಯ ಪೊಲೀಸ್ ಇಲಾಖೆ ಕಣ್ಣಿಡಲು ಆರಂಭಿಸಿದೆ. ಇದಕ್ಕೆ ಪೂರಕ ಎಂಬಂತೆ  ಸಾಂಗ್ಲಿಯಾನ ಚಂದು ಹೆಸರಿನ ಟ್ವಿಟ್ಟರ್​ ಅಕೌಂಟ್​ ಹ್ಯಾಂಡ್ಲರ್​ನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. 

ಅವಹೇಳನಕಾರಿ ಟ್ವಿಟ್ ಮಾಡಿದ್ದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನ ಬಂಧಿಸಿ ಎಫ್​ಐಆರ್ ಮಾಡಿದ್ದಾರೆ.  ಖಾಸಗಿ ಸಂಶ್ಥೆಯ ಉದ್ಯೋಗಿ ಆಗಿರುವ ವ್ಯಕ್ತಿಯು ಮಹಿಳೆಯರ ಬಗ್ಗೆ ಅನಪೇಕ್ಷಿತ ಹಾಗೂ ಅಸಹ್ಯಕರವಾಗಿ ಕಾಮೆಂಟ್ಸ್ ಮಾಡುತ್ತಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. 

 

Share This Article