ಹೈಬ್ರೀಡ್ ಕರುಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದ ಅಪರಿಚಿತರು! ಏನಿದು ಘಟನೆ?

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಗಂಡು ಕರುಗಳನ್ನು ರಸ್ತೆ ಮೇಲೆ ಅನಾಥವಾಗಿ ಬಿಟ್ಟು ಹೋದಂತಹ ಘಟನೆ ಬಗ್ಗೆ ಸ್ಥಳೀಯವಾಗಿ ವರದಿಯಾಗಿದೆ. ಹೈಬ್ರಿಡ್​ ತಳಿಯ ಕರುಗಳು ಇವಾಗಿದ್ದು, ಯಾರು ಈ ಕೃತ್ಯವೆಸಗಿದ್ದು ಎಂಬುದು ಗೊತ್ತಾಗಿಲ್ಲ.  ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದ ಬನ್ನಿಕಟ್ಟೆ ಬಳಿಯಲ್ಲಿ ಒಟ್ಟು ನಾಲ್ಕು ಕರುಗಳನ್ನು ಬಿಟ್ಟು ಹೋಗಿದ್ದಾರೆ. 

ಇದನ್ನ ಗಮನಿಸಿದ ಸ್ಥಳೀಯರು ಕುಂಟಗೋಡಿನ ಪುಣ್ಯಕೋಟಿ ಗೋ ಶಾಲೆಗೆ ಕರುಗಳನ್ನು ಸಾಗಿಸಿ ಆಶ್ರಯ ಒದಗಿಸಿದ್ದಾರೆ.  ಕರುಗಳ ಪೋಷಣೆಗೆ ಶ್ರೀಧರಾಶ್ರಮ ನೆರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 


ಈಶ್ವರಪ್ಪರಿಗೆ ಸನ್ಮಾನ ಮಾಡಲು ನಿರಾಕರಿಸಿದ್ರಾ ಸಿದ್ದರಾಮಯ್ಯ

ಮಾಜಿ ಶಾಸಕ ಈಶ್ವರಪ್ಪಗೆ ಸನ್ಮಾನ ಮಾಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ರಾ ಎಂಬ ಪ್ರಶ್ನೆಯೊಂದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೂಡಿದೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಪಾಲ್ಗೊಂಡಿದ್ದರು. ಈ ವೇಳೆ ಈಶ್ವರಪ್ಪನವರಿಗೆ ಅಭಿನಂದನೆ ಸಲ್ಲಿಸಲು ನಿರಂಜನಾನಂದಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯರಿಗೆ ಸನ್ನೆ ಮಾಡಿದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಸನ್ನೆಯಿಂದಲೇ ನೀವೇ ಹಾಕಿ ಅಂತ ಹೇಳಿದರು.  

Malenadu Today

 


 

Leave a Comment