shivamogga to bangalore bus booking/ ಶಿವಮೊಗ್ಗ -ಬೆಂಗಳೂರು ನಡುವೆ KSRTC E-Bus ಓಡಾಟ ಆರಂಭ! ಟಿಕೆಟ್ ಎಷ್ಟು? ಬುಕ್ಕಿಂಗ್ ಹೇಗೆ ಓದಿ!

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಶಿವಮೊಗ್ಗ / KSRTC/ Shivamogga banglore bus/ ನಿರೀಕ್ಷೆಯಂತೆಯೇ ಶಿವಮೊಗ್ಗಕ್ಕೂ ಕೆಎಸ್​ಆರ್​ಸಿ ರಸ್ತೆಗಿಳಿಸಿರುವ ಇ-ಬಸ್ಸುಗಳ (e bus) ಸೇವೆ ಲಭ್ಯವಾಗಿದೆ.  ನೂತನ ಹವಾ ನಿಯಂತ್ರಿತ ಇ-ಬಸ್ಸುಗಳ  ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ. 

ಒಟ್ಟಾರೆ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸುಸರ್ಜಿತವಾದ ನೂತನ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ದಿನಾಂಕ:27.05.2023ರಂದು ಅಂದರೆ ಇವತ್ತು ಒಂದು ಇ-ಬಸ್​ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿದೆ.  ಉಳಿದ 9 ಬಸ್​ಗಳ ಪ್ರಯಾಣವನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ (ksrtc shivamogga to bangalore) ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಟಿಕೆಟ್ ದರ ಎಷ್ಟು (shimoga to bangalore ksrtc bus ticket cost)

ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ  ಓಡಾಡುವ ಇ-ಬಸ್ಸಿನಲ್ಲಿ ಟಿಕೆಟ್ ದರ  ರೂ.600/-ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಬಸ್​ಗಳಿಗೆ  ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ   (shivamogga to bangalore bus booking)ಲಭ್ಯವಿದ್ದು,   (https://awatar.ksrtc.in) ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. 

ಹಿಂದಿನಿಂದ ಬಂದು ಡಿಕ್ಕಿ ಹೊಡೆಯುತ್ತಾರೆ ಹುಷಾರ್! ಭದ್ರಾವತಿ ರಸ್ತೆಯಲ್ಲಿ ಸ್ವಲ್ಪದರಲ್ಲಿಯೇ ಉಳಿತು ಜೀವ! ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ!

ಭದ್ರಾವತಿ/ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಪೀಡಾಗಿ ಮುಂದಕ್ಕೆ ಹೋದ ಘಟನೆಯೊಂದರ ವಿಡಿಯೋ ಇದೀಗ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ಲಭ್ಯವಾದ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ ಭದ್ರಾವತಿಯದ್ದು ಎಂದು ಹೇಳಲಾಗಿದೆ. 

ಇಷ್ಟಕ್ಕೂ ನಡೆದಿದ್ದೇನು? 

ಬೈಕ್​ನಲ್ಲಿ ಇಬ್ಬರು ಸವಾರರು ಹೋಗುತ್ತಿರುತ್ತದೆ. ಅವರ ಎಡಭಾಗದಲ್ಲಿ ಒಂದು ಒಮಿನಿ ಹೋಗುತ್ತಿರುತ್ತದೆ. ಇನ್ನೊಂದು ಭಾಗದಲ್ಲಿ ಕಾರೊಂದು ಓವರ್​ ಟೇಕ್ ಮಾಡಲು ಟ್ರೈ ಮಾಡುತ್ತಾನೆ. ಈ ವೇಳೆ ಬೈಕ್​ಗೆ ಡಿಕ್ಕಿ ಹೊಡೆದ ಕಾರು, ಅಲ್ಲಿಂದ ಎಸ್ಕೇಪ್ ಆಗುತ್ತದೆ. ಈ ಘಟನೆ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್​ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. 

 ಕೃಷ್ಣ ಮೂರ್ತಿ ಮತ್ತು ಸಂತೋಷ್‌ ಎಂಬವರು,  ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್‌ ರಸ್ತೆಯ ಸಿದ್ಧಾಪುರದ ಬಳಿ ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಬೆನ್ನಲ್ಲೆ ಐ10 ಕಾರು ಅಲ್ಲಿಂದ ಓವರ್ ಸ್ಪೀಡನಲ್ಲಿ ತೆರಳಿದೆ.  

ಹಿಟ್‌ ಅಂಡ್‌ ರನ್‌ ಅಪಘಾತದ  ದೃಶ್ಯ ಬೈಕ್‌ ಹಿಂಬದಿಯಲ್ಲಿ ಬರುತ್ತಿದ್ದ ಮೈಸೂರು ಮೂಲದ ದೀಪಕ್​ ಎಂಬವರ ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ (dash cam) ಸೆರೆಯಾಗಿದೆ 

 

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು