ಮಲೆನಾಡಲ್ಲಿ ನೀರಿಲ್ಲ ಭಾಗ 1 : ಬರಿದಾಗ್ತಿದೆ ಲಿಂಗನಮಕ್ಕಿ! ರಾಜ್ಯಕ್ಕೆ ಕರೆಂಟು ಡೌಟು! ಹೇಗಿದೆ ಗೊತ್ತಾ ಪರಿಸ್ತಿತಿ!

Malenadu Today

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಸಾಗರ ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಬಹುಬೇಗನೆ ಭರ್ತಿಯಾಗಿದ್ದ ಲಿಂಗನಮಕ್ಕಿ ಜಲಾಶಯದ ಒಡಲು ಈ ಬಾರಿ ಬೇಸಿಗೆ ಸಂದರ್ಭದಲ್ಲಿ ಸಂಪೂರ್ಣ ಬರಿದಾಗುವತ್ತ ಸಾಗಿದೆ.(linganamakki dam water level today,) ರಾಜ್ಯದ ಶೇಕಡಾ 20 ರಷ್ಟು ವಿದ್ಯುತ್ ಸಮಸ್ಯೆ ನೀಗಿಸುವ ಲಿಂಗನಮಕ್ಕಿ ಜಲಾಶಯದಲ್ಲಿ ಈಗ ಶೇಕಡಾ 11.8 ರಷ್ಟು ಮಾತ್ರ ನೀರು ಸಂಗ್ರಹಗೊಂಡಿದೆ. 

Malenadu Today

ಗರಿಷ್ಠ 1819 ಅಡಿ ನೀರಿನ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಡ್ಯಾಂ ನಲ್ಲಿ ಪ್ರಸ್ಥುತ 1751.30 ಅಡಿ ನೀರು ಸಂಗ್ರಹಗೊಂಡಿದೆ.ಜಲಾಶಯದ ಒಡಲು ಬರಿದಾಗಿದ್ದರಿಂದ ಹಿನ್ನಿರಿನ ಪ್ರದೇಶ ನಡುಗಡ್ಡೆಗಳಾಗಿ ಗೋಚರಿಸುತ್ತಿದೆ.ಅಣೆಕಟ್ಟೆಯ ನೀರನ್ನು ಸಂಪೂರ್ಣವಾಗಿ ಬಳಸಿಕೊಂಡರೂ..ಕೆಲ ದಿನಗಳವರೆಗೆ ಮಾತ್ರ  ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ

ಲಿಂಗನಮಕ್ಕಿ ಜಲಾಶಯದಲ್ಲಿ ಕೇವಲ 10.8 ರಷ್ಟು ನೀರು ಸಂಗ್ರಹ (linganamakki reservoir)

ಮುಂಗಾರಿನ ಅಬ್ಬರಕ್ಕೆ ನಾಂದಿ ಹಾಡಬೇಕಿದ್ದ ಮಲೆನಾಡಿನ ಹೆಬ್ಬಾಗಿಲಿನಲ್ಲಿ,ಇನ್ನು ಸೂರ್ಯನೇ ಕಾರುಬಾರು ನಡೆಸುತ್ತಿದ್ದಾನೆ.ನೈರುತ್ಯ ಮಾನ್ಸೂನ್ ಮಳೆ ಸಿಂಚನವಾಗುತ್ತಿದೆ ಹೊರತು , ಧರೆಗೆ ತಂಪನೆರೆಯುತ್ತಿಲ್ಲ .ಮೇ ತಿಂಗಳಲ್ಲಿ ಗುಡುಗು ಸಿಡಿಲಿನ ಅಬ್ಬರ ಆಗಸದಲ್ಲಿ ಕಾರ್ಮೋಡಗಳ ಸಾಲುಗಳನ್ನು ಹೊರತು ಪಡಿಸಿದರೆ ಮಳೆಯ ಲಕ್ಷಣಗಳು ಗೋಚರಿಸುತ್ತಿಲ್ಲ.ಜೂನ್ ನಲ್ಲಿಯಾದರೂ ನೈರುತ್ಯ ಮಾನ್ಸೂನ್ ಜೋರಾಗಿ ಮಳೆ ಸುರಿಯಬಹುದೆಂದು ನಿರೀಕ್ಷಿಸಲಾಗಿದೆ.ಮಲೆನಾಡಿನಲ್ಲಿ ವಾರದೊಳಗೆ ಮಳೆ ಆರ್ಭಟಸದಿದ್ದರೆ.ಕೃಷಿ ನೀರಾವರಿ ವಿದ್ಯುತ್ ಗೆ ಭಾರಿ ಪೆಟ್ಟು ಬೀಳಲಿದೆ.

Malenadu Today

ಬರಿದಾಗುವತ್ತ ಲಿಂಗನಮಕ್ಕಿ ಜಲಾಶಯದ ಒಡಲು

ಹೌದು ಪ್ರತಿವರ್ಷ ಮಲೆನಾಡಿನಲ್ಲಿ ಉತ್ತಮ ಮಳೆಯಾದರೆ ರಾಜ್ಯದ ವಿದ್ಯುತ್ ಸಮಸ್ಯೆ ನೀಗಿದಂತೆ ಎಂಬ ನಿಟ್ಟುಸಿರು ಬಿಡುವುದು ಮೊದಲು ರಾಜ್ಯ ಸರ್ಕಾರ.ರಾಜ್ಯದ ಶೇಕಡಾ 16 ರಿಂದ 20 ರಷ್ಟು ವಿದ್ಯುತ್ ಸಮಸ್ಯೆ ನೀಗಿಸುವ ಲಿಂಗನಮಕ್ಕಿ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಪ್ರತಿವರ್ಷ ಉತ್ತಮ ಮಳೆಯಾದರಷ್ಟೆ,ರಾಜ್ಯದ ವಿದ್ಯುತ್ ಸಮಸ್ಯೆ ಅರ್ಧ ನೀಗಿದಂತಾಗುತ್ತದೆ. 

ಪ್ರತಿ ವರ್ಷ ಜೂನ್ ತಿಂಗಳಲ್ಲಿ ಲಿಂಗನಮಕ್ಕಿ ಯೋಜನಾ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತದೆ.ಕಳೆದ ವರ್ಷ ಸುರಿದ ಉತ್ತಮ ಮಳೆಗೆ ಲಿಂಗನಮಕ್ಕಿ (linganamakki reservoir level)ತುಂಬಿ ತುಳುಕುತ್ತಿತ್ತು.ಆದರೆ ಸತತ ವಿದ್ಯುತ್ ಉತ್ಪಾದನೆಯಿಂದ ಈ ಬಾರಿ ಬೇಸಿಗೆಯಲ್ಲಿಯೇ ನೀರು ಬರಿದಾಗುವತ್ತ ಸಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರು ತಳಕಂಡಿದೆ.ಸ ಮುದ್ರದಷ್ಟು ವಿಶಾಲತೆಯನ್ನು ಹೊಂದಿದ್ದ ಹಿನ್ನಿರಿನ ಪ್ರದೇಶ ಇಂದು ಕಂದು ಬಣ್ಣದ ನಡುಗಡ್ಡೆಗಳ ರೀತಿ ಗೋಚರಿಸುತ್ತದೆ.ಜಲಾಶಯದ ಅಂಗಳ ಆಟದ ಮೈದಾನವಾಗಿದೆ,ಕಣ್ಣು ಹಾಯಿಸಿದಷ್ಟು ದೂರ ಬೋಳು ಗುಡ್ಡಗಳು ಮತ್ತು ಒಣಗಿದ ಮರಗಳು ಕಾಣುತ್ತವೆ

Malenadu Today

ಏನನ್ನುತ್ತದ ಅಂಕಿ ಅಂಶ

ಗರಿಷ್ಠ 1819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1751.30ಅಡಿ ತಲುಪಿದೆ.ಈ ಹಿಂದೆ 2011 ರಲ್ಲಿ 1742 ಅಡಿಯಷ್ಟು ತಳ ಸೇರಿತ್ತು. ಡ್ಯಾಂ ನೀರು ಸಂಗ್ರಹ 1742 ಅಡಿಗಿಂತ ಕೆಳಗಿಳಿಯುತ್ತಿದ್ದಂತೆ ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುತ್ತದೆ. ಡ್ಯಾಂ ನೀರಿನ ಮಟ್ಟ 1735 ಅಡಿಗಿಂತ ಕೆಳಗಿಳಿದಲ್ಲಿ 1725 ಅಡಿಗಳವರೆಗೂ ಶರಾವತಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಫಾದಿಸಬಹುದಾಗಿದ್ದರೂ ನೀರಿನಲ್ಲಿ ಸಿಲ್ಟ್(ಹೂಳು) ಬರುವುದರಿಂದ ಯಂತ್ರೋಪಕರಣಗಳಿಗೆ ದಕ್ಕೆಯಾಗುತ್ತದೆ 

2003 ರಲ್ಲಿ 

ಜಲಾಶಯದ ನೀರಿನ ಮಟ್ಟ ಅತೀ ಕನಿಷ್ಟ 1725 ಅಡಿಗೆ ತಲುಪಿ ವಿದ್ಯುತ್ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿತ್ತು.ಕಳೆದ ವರ್ಷ ಈ ಸಂದರ್ಭದಲ್ಲಿ ಲಿಂಗನಮಕ್ಕಿಯಲ್ಲಿ 1761.20 ಅಡಿ ನೀರಿದ್ದರೆ ಈಗ ಲಿಂಗನ ಮಕ್ಕಿಯಲ್ಲಿ 1751.30 ಅಡಿ ನೀರಿದ್ದು,ಒಟ್ಟು ನೀರು ಸಂಗ್ರಹದ ಶೇಕಡಾ 11.8 ರಷ್ಟು ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ..

Malenadu Today

ಶರಾವತಿ ಬರಿದಾಗುವುದಿಲ್ಲ

ಶರಾವತಿ ಘಟಕದಲ್ಲಿ ಪ್ರತಿದಿನ 18 ಮಿಲಿಯನ್ ಯುನಿಟ್ ವಿದ್ಯುತ್ ಉತ್ಫಾದನೆ ಮಾಡಲಾಗುತ್ತಿದೆ.ಪ್ ರಸ್ಥುತ 11 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾಧನೆ ಮಾಡಲಾಗುತ್ತದೆ. ಥರ್ಮಲ್ ಪವರ್ ಗೂ ಹೆಚ್ಚಿನ ಒತ್ತು ನೀಡಿರುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಹೊರೆ ಕೊಂಚ ತಗ್ಗಿದೆ.

Malenadu Today

ಆದರೆ ಮಳೆಗಾಲ ಆರಂಭದ ಪೂರ್ವದಲ್ಲಿಯೂ ಲಿಂಗನಮಕ್ಕಿ ಜಲಾಶಯದಲ್ಲಿ ಮಳೆಯ ಸಿಂಚನವಾಗದಿರುವುದು ನಿರಾಸೆ ತಂದಿದೆ. ಅಲ್ಲದೆ ಸಿಗಂದೂರು ಡ್ಯಾಂ ನಿರ್ಮಾಣಕ್ಕಾಗಿ ಹಿನ್ನೀರನ್ನು ತಗ್ಗಿಸಲು ಲಿಂಗನಮಕ್ಕಿ ಡ್ಯಾಂ ನಿಂದ ಯತೆಚ್ಚವಾಗಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗಿದೆ ಎಂಬ ಆರೋಪವೂ ಇದೆ.

Malenadu Today

ಲಿಂಗನಮಕ್ಕಿ ಡ್ಯಾಂ ಅಂಕಿಅಂಶಗಳನ್ನು ಅವಲೋಕಿಸಿದರೆ,ಇತಿಹಾಸದಲ್ಲಿ ಡ್ಯಾಂ ಬರಿದಾಗಿದ್ದು 12 ಬಾರಿ. ಆದರೆ ಅದು ವಾಡಿಕೆ ಮಳೆಯಾದರದ ಅಂಕಿ ಅಂಶದಲ್ಲಿ .ಶರಾವತಿ ನದಿ ಜೂನ್ ತಿಂಗಳಲ್ಲಿ  ಸಂಪೂರ್ಣವಾಗಿ ಬರಿದಾದರೂ,ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಸುರಿಯುವ ಮಳೆ ಶರಾವತಿ ನದಿ ಉಕ್ಕಿ ಹರಿಯುವಂತೆ ಮಾಡುತ್ತದೆ. ಜೋಗ ಜಲಪಾದ ಸೌಂದರ್ಯ ಕಳೆಕಟ್ಟುವಂತೆ ಮಾಡುತ್ತದೆ.ಹೀಗಾಗಿ ಈ ವರ್ಷವೂ ಉತ್ತಮ ಮಳೆಯಾಗುತ್ತದೆ ಎಂದು ಆಶಾಬಾವನೆಯನ್ನು ಕೆಪಿಸಿ ಅಧಿಕಾರಿಗಳು ಹೊಂದಿದ್ದಾರೆ.

 

 

Share This Article