ಆನಂದಪುರದಲ್ಲಿ ಅಪಘಾತ/ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ! ಹಿಟ್ & ರನ್​ ಘಟನೆಯಲ್ಲಿ ಪಾದಚಾರಿ ಸಾವು!

Malenadu Today

KARNATAKA NEWS/ ONLINE / Malenadu today/ May 19, 2023 SHIVAMOGGA NEWS

ಸಾಗರ/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪಾದಚಾರಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಇಲ್ಲಿನ ಯೆಡೆಹಳ್ಳಿಯ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು , ಅಲ್ಲಿಂದ ಎಸ್ಕೇಪ್​ ಆಗಿದೆ. 

ನಿನ್ನೆ ರಾತ್ರಿ ನಡೆದ ಘಟನೆ ಯಲ್ಲಿ 56 ವರ್ಷದ ಶಿವಕುಮಾರ್ ಎಂಬವರು, ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣವೇ ಅವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಆನಂದಪುರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

Share This Article