BREAKING NEWS : ಸಕ್ರೆಬೈಲ್​ ಬಿಡಾರದಲ್ಲಿ ವಾಚಮನ್​ ಮೇಲೆ ಆನೆ ದಾಳಿ!

Malenadu Today

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲ್ ಆನೆ ಬಿಡಾರದಲ್ಲಿ (Sakrebyle Elephant Camp) ದುರ್ಘಟನೆಯೊಂದು ಸಂಭವಿಸಿದೆ. ಇಲ್ಲಿನ ವಾಚಮನ್​ವೊಬ್ಬರ ಮೇಲೆ ಬಿಡಾರದ ಆನೆಯೇ ( elephant attack) ದಾಳಿ ನಡೆಸಿದೆ. ಇವತ್ತು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

Malenadu Today

BREAKING : ಮೋದಿ ಆಗಮನಕ್ಕೂ ಮೊದ್ಲೇ ವಿಮಾನ ನಿಲ್ಧಾಣಕ್ಕೆ ಭೂಮಿ ಕೊಟ್ಟವರಿಗೆ ಸೈಟ್! AIRPORT ವಿಷಯದಲ್ಲಿ ಸಂಸದ ರಾಘವೇಂದ್ರ ಮಹತ್ವದ ಸುದ್ದಿಗೋಷ್ಟಿ

ಇವತ್ತು ಬೆಳಗ್ಗೆ ಆಲೆ ಆನೆಯನ್ನು ಬಿಡಾರದಿಂದ  ಕಾಡಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಸಕ್ರೆಬೈಲ್​ ಬಿಡಾರದ ಗೇಟ್​ ಬಳಿಯಲ್ಲಿರುವ ಆನೆ ಕಲಾಕೃತಿಯ ಮುಂದೆ ವಾಚಮನ್​ ಚೌಡಪ್ಪ ನಿಂತಿದ್ದರು. ಅವರ ಮೇಲೆ ಆಲೆ ಆನೆ ದಾಳಿ ನಡೆಸಿದೆ. ವಾಚಮನ್​ ಚೌಡಪ್ಪ, ಆನೆಗಳಿಗೆ ಆಗಾಗ ಬಾಳೆಹಣ್ಣು ತಿನ್ನಿಸುತ್ತಿದ್ದರು. ಇವತ್ತು ಸಹ ಹಾಗೇಯೇ ಬಿಡಾರದ ಆನೆಗಳಿಗೆ ಬಾಳೆಹಣ್ಣು ತಿನ್ನಿಸಲು ಮುಂದಾಗಿದ್ದಾರೆ. ಇನ್ನೂ ಮದದಲ್ಲಿದ್ದ ಆಲೆಯು, ಬಾಳೆಹಣ್ಣು ಕೊಡಲು ಬಂದ ಚೌಡಪ್ಪರ ಮೇಲೆ ಅಟ್ಯಾಕ್ ಮಾಡಿದೆ. ಸದ್ಯ ಅದೃಷ್ಟವಶಾತ್ ಚೌಡಪ್ಪ ಪ್ರಾಣಾಪಾಯದಿಂದ ಪಾರಾಗಿದ್ಧಾರೆ. ಶಿವಮೊಗ್ಗದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article