OLX ನಲ್ಲಿ ಜಾಗೃತೆ ಇರಲಿ: ಕಾರು ಖರೀದಿಸಲು ಮುಂದಾಗಿದ್ದ, ಶಿವಮೊಗ್ಗದ ಬ್ಯಾಂಕ್​ ಉದ್ಯೋಗಿಗೆ ₹3.70 ಲಕ್ಷ ವಂಚನೆ

Malenadu Today

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್​ವೊಂದು ದಾಖಲಾಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು OLX  ನಲ್ಲಿ ಕಾರೊಂದನ್ನ ಖರೀದಿಸಲು ಮುಂದಾದಾಗ ಅವರಿಗೆ ಮೋಸವಾಗಿರುವ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ. 

ನಡೆದಿದ್ದೇನು

ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಕಾರೊಂದನ್ನ ಖರೀದಿಸಬೇಕು ಎನ್ನುವ ಕಾರಣಕ್ಕೆ  OLXನಲ್ಲಿ ಹುಡುಕಾಡಿದ್ದಾರೆ. ಈ ವೇಳೆ  ದೆಹಲಿಯಲ್ಲಿ 2017ರ ಮಾಡಲ್​ನ ಕ್ರೆಟಾ ಕಾರಿನ ಜಾಹೀರಾತು (advertisement)  ಕಂಡಿದೆ. ಅದರಲ್ಲಿದ್ದ ನಂಬರ್​ಗೆ ಕಾಲ್ ಮಾಡಿದ ಉದ್ಯೋಗಿ ಕಾರಿನ ಬಗ್ಗೆ ವಿಚಾರಿಸಿ ಮಾತುಕತೆ ನಡೆಸಿದ್ದಾರೆ. 

ಆಕಡೆ ಕಾರಿನ ಜಾಹಿರಾತು ನೀಡಿದ್ದ ಮಾಲೀಕ ತನ್ನನ್ನ ಆಯುಶ್ ಎಂದು ಪರಿಚಯಸಿಕೊಂಡು ಅಡ್ವಾನ್ಸ್ ಮಾಡಲು ಹೇಳಿದ್ದ. ಅದರಂತೆ ಉದ್ಯೋಗಿ 6 ಸಾವಿರ ರೂಪಾಯಿ ಅಡ್ವಾನ್ಸ್ ಮಾಡಿದ್ದಾರೆ. ಆ ಬಳಿಕ ಆಯುಶ್ ಕಾರ್​ ಡಿಲೇವರಿ ಇವತ್ತೆ ತೆಗೆದುಕೊಳ್ಳಿ ದೆಹಲಿಯ ಪಟೇಲ್​ ನಗರದ ಮೆಟ್ರೋ ಪಿಲ್ಲರ್​ ಬಳಿರುವ ಗ್ಯಾರೇಜಿನಲ್ಲಿ ಕಾರಿದೆ. ಬಾಕಿ ಹಣ ಪಾವತಿಸಿ ಡೆಲಿವರಿ ಪಡೆದುಕೊಳ್ಳಿ ಎಂದಿದ್ದ. 

ಇದನ್ನ ನಂಬಿದ ಉದ್ಯೋಗಿ 3.35 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಬಳಿಕ ದೆಹಲಿಯಲ್ಲಿನ ತಮ್ಮ ಬ್ಯಾಂಕ್ ಸಿಬ್ಬಂದಿಯನ್ನ ಕಾರು ಡೆಲಿವರಿ ಪಡೆದುಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದರು. ಆದರೆ ಸ್ಥಳಕ್ಕೆ ಹೋದಾಗ ಗ್ಯಾರೇಜಿನವರು ಕಾರು ಡೆಲಿವರಿ ಕೊಡಲು ಒಪ್ಪದೇ, ತಮಗೆ ಹಣ ಬಂದಿಲ್ಲ. ಯಾರಿಗೆ ಹಣ ಕೊಟ್ಟಿದ್ದೀರೋ ಅವರನ್ನ ವಿಚಾರಿಸಿ ಎಂದಿದ್ದಾರೆ. ಇದರಿಂದ ಮೋಸ ಹೋಗಿರುವ ಬಗ್ಗೆ ಉದ್ಯೋಗಿಗೆ ಅನುಮಾನ ಬಂದು ತಕ್ಷಣ ಆಯುಶ್​ಗೆ ಕರೆಮಾಡಿದ್ಧಾರೆ. ಆದರೆ ಅಷ್ಟರಲ್ಲಿ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ಧಾನೆ. ಹೀಗಾಗಿ, ತಕ್ಷಣವೇ ಹಣ ಸಂದಾಯವಾದ ಬ್ಯಾಂಕ್ ಖಾತೆಯನ್ನು ಫ್ರೀಜ್​ ಮಾಡಿಸಿ, ಬ್ಯಾಂಕ್ ಉದ್ಯೋಗಿ ಕಂಪ್ಲೇಂಟ್ ದಾಖಲಿಸಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 

Share This Article