ಅಡಿಕೆ ಬೆಳೆಗಾರರ ಸಮಸ್ಯೆ ಇದೀಗ ಬಿಜೆಪಿಯ ಪಾಲಿಗೆ ಮತ ಸಂಕಟವನ್ನು ತಂದುಕೊಡುವ ಹಾಗೆ ಕಾಣುತ್ತಿದೆ. ಇದಕ್ಕೆ ಕಾರಣ ಅಡಿಕೆ ದರ ಕುಸಿಯುತ್ತಿರುವುದು. ಈ ಸಂಬಂಧ ಕಾಂಗ್ರೆಸ್ ಪಕ್ಷ ಬೆಳೆಗಾರರ ಸಮಸ್ಯೆ ಹಾಗೂ ಅಡಿಕೆ ದರ ವಿಚಾರವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ (District congress committee) ಸುದ್ದಿಗೋಷ್ಟಿ ನಡೆಸಿದ ಮುಖಂಡ ರಮೇಶ್ ಹೆಗ್ಡೆಯವರು ಭೂತಾನ್ ಅಡಿಕೆ ಭಾರತಕ್ಕೆ ಬಂದ ಮೇಲೆ, ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಸಹ ಓದಿ : ತುಂಡಾಗಿ ಬಿದ್ದಿತ್ತು ಕರೆಂಟ್ ಲೈನ್ | ಪತ್ನಿಯನ್ನ ರಕ್ಷಿಸುವ ವೇಳೆ, ವಿದ್ಯುತ್ ಸ್ಪರ್ಶಿಸಿ ಪತಿ ಸಾವು/ ಹೊಸನಗರದಲ್ಲೊಂದು ದುರಂತ ಘಟನೆ
ರಮೇಶ್ ಹೆಗ್ಡೆ ಆರೋಪಗಳೇನು?
- 1) 13 ಸಾವಿರ ಮೆಟ್ರಿಕ್ ಟನ್ ಅಡಿಕೆಯನ್ನು ಭೂತಾನ್ನಿಂದ ಪ್ರತಿವರ್ಷ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಲೇ ಮುಖ್ಯವಾಗಿ ಅಡಿಕೆ ದರ ಕಡಿಮೆಯಾಗುತ್ತಿದೆ.
- 2) ಕ್ವಿಂಟಾಲ್ಗೆ 59 ಸಾವಿರ ರೂಪಾಯಿನಷ್ಟಿದ್ದ ಅಡಿಕೆ ಬೆಲೆ ಇದೀಗ 39 ಸಾವಿರ ರೂಪಾಯಿಗೆ ಇಳಿದಿದೆ. ಹಾಗಿದ್ದರೂ ಬೆಳೆಗಾರರ ನೆರವಿಗೆ ಬಿಜೆಪಿ ಮುಂದಾಗುತ್ತಿಲ್ಲ
- 3) ಮಿಜರೋಂ ಬಾರ್ಡರ್ ಮೂಲಕ ಮಯನ್ಮಾರ್ ಮೂಲಕ ಅಕ್ರಮವಾಗಿ ಗುಟ್ಕಾ ಸರಭರಾಜಾಗುತ್ತಿದೆ. ಇತ್ತ ಇಂಡೋನೇಷ್ಯಾದಿಂದ ಶ್ರೀಲಂಕಾ ಮೂಲಕ ಅಡಿಕೆ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದೆ. ಈ ಕಳ್ಳಸಾಗಾಣಿಕೆ ಬಗ್ಗೆ ಬಿಜೆಪಿ ಕ್ರಮಕೈಗೊಂಡಿಲ್ಲ
- 4) ಬಿಜೆಪಿ ಗುಜರಾತ್, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳ ಗುಟ್ಕಾ ವಹಿವಾಟು ದಾರರ ಬೆಂಬಲಕ್ಕೆ ನಿಂತಿದೆ. ಹಾಗಾಗಿ ಅಡಿಕೆ ಕಳ್ಳ ಸಾಗಾಣಿಕಯ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
- 5) ದೇಶದಲ್ಲಿ ಒಟ್ಟು ವರ್ಷ ವರ್ಷ 10 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತದೆ. ಈ ಪೈಕಿ ಶೇಕಡಾ 80 ರಷ್ಟು ಕರ್ನಾಟಕದಲ್ಲಿ ಆಗುತ್ತದೆ. ರಾಜ್ಯ 23 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುತ್ತಿದ್ದರೇ, ಈ ಪೈಕಿ 10 ಜಿಲ್ಲೆಗಳು ಅಡಿಕೆ ಬೆಳೆಯನ್ನು ಅವಲಂಭಿಸಿದೆ.ಹಾಗಿದ್ದರೂ ಅಡಿಕೆ ಬೆಳೆ ಕುಸಿತ ಹಾಗೂ ಎಲೆಚುಕ್ಕಿ ರೋಗ ನಿರ್ವಹಣೆ ಬಗ್ಗೆ ಬಿಜೆಪಿ ಸಮರ್ಪಕ ಕ್ರಮಕೈಗೊಂಡಿಲ್ಲ
ಇದನ್ನು ಸಹ ಓದಿ : ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp link
