ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ! JP EXCLUSIVE PART-2

Shimoga ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಹೀಗೂ ಆಗುತ್ತೆ ಮೋಸ!! ಎಚ್ಚರ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE PART-2

ಓದುಗರೇ, ಇಲ್ಲಿವರೆಗೂ ಸೆಕಂಡ್​ ಹ್ಯಾಂಡ್ ಗಾಡಿ ಖರೀದಿಸಿ ಅದರಿಂದ ಮೋಸ ಹೋದ ಅಭಿಲಾಷ್​ರ ಕಥೆಯನ್ನು ಹೇಳಿದ್ದೆ. ಈ ಪ್ರಕರಣ ಹೇಗೆ ಗೃಹಸಚಿವರ ಬಳಿ ಹೋಯ್ತು! ಆಮೇಲೆ ಎನಾಯ್ತು ಎಂಬಿತ್ಯಾದಿ ಕಂಪ್ಲೀಟ್​ ಸ್ಟೋರಿ ಮುಂದೆ ಇದೆ ಓದಿ!

ಅಳಲು ಆಲಿಸಿ ಸಮಸ್ಯೆಗೆ ಬಗೆಹರಿಸಲು ಸೂಚನೆ ಕೊಟ್ಟ ಗೃಹಸಚಿವ

ಎಲ್ಲಾ ಕಡೆ ಅಲೆದಾಡಿ ಸುಸ್ತಾದ ಅಭಿಲಾಷ್​​ ಕೊನೆಗೆ ಗೃಹಸಚಿವರ ಸಂಪರ್ಕ ಮಾಡಿದ್ಧಾರೆ. ಅವರ ಬಳಿ ಹಿಂಗೆಲ್ಲಾ ಆಗಿದೆ ಸರ್, ಈಗ ಏನು ಮಾಡುವುದು ಗೊತ್ತಾಗುತ್ತಿಲ್ಲ.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಎನಾದರೂ ನ್ಯಾಯಕೊಡಿಸಿ ಸರ್​ ಎಂದು ಕೇಳಿದ್ದಾರೆ. ಮೊದ ಮೊದಲು ವಿಚಾರಿಸಬೇಕಲ್ವೇನ್ರಿ…ಎಂತ ಕಥೆ..ಮಾಡಿಕೊಂಡ್ರಿ.. ಎಂದ ಗೃಹಸಚಿವರ ಆರಗ ಜ್ಞಾನೇಂದ್ರ ಬಳಿಕ ಶಿವಮೊಗ್ಗ ಎಸ್​ಪಿ ಯವರಿಗೆ ಈ ಬಗ್ಗೆ ತನಿಖೆ ನಡೆಸಿ, ಸೆಕೆಂಡ್​ ಹ್ಯಾಂಡ್ ವ್ಯವಹಾರದಲ್ಲಿ ಮೋಸ ಆಗ್ತಿದೆ. ಜನರಿಗೆ ಅನ್ಯಾಯವಾಗಬಾರದು, ಸ್ವಲ್ಪ ಪರಿಶೀಲಿಸಿ ಎಂದಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್​ಪಿ ಲಕ್ಷ್ಮೀಪ್ರಸಾದ್​

ಇನ್ನೂ ಗೃಹಸಚಿವರು ಸೂಚನೆ ಕೊಟ್ಟಾಗ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್​ಪಿ ಲಕ್ಷ್ಮೀಪ್ರಸಾದ್ ನಡೆದಿದ್ದೆಲ್ಲವನ್ನು ತಿಳಿದುಕೊಂಡು, ಈ ಸಂಬಂಧ ತನಿಖೆ ನಡೆಸಲು ಕೋಟೆ ಠಾಣಯ ಚಂದ್ರಶೇಖರ್ ರಿಗೆ ಸೂಚನೆ ಕೊಟ್ಟಿದ್ದಾರೆ. ಕೋಟೆಯ ಇನ್​ಸ್ಪೆಕ್ಟರ್​ ವಿಚಾರ ಎತ್ತಿಕೊಂಡ ಮೇಲೆ ಒಂದು ತಿಂಗಳಲ್ಲಿ ಅಭಿಲಾಷ್​ರವರು ಬ್ರೆಜಾಗಾಗಿ ಕೊಟ್ಟಿದ್ದ ದುಡ್ಡು ಬ್ರೋಕರ್​ ಹಾಗೂ ಅದನ್ನ ಮಾರಿದ್ದ ಓನರ್​ ವಾಪಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ : Sagara ಸಾಗರ ಟೌನ್​ ಪೊಲೀಸರ ಕೈಗೆ ಸಿಕ್ಕಿಬಿದ್ದ ಮನೆಗಳ್ಳ ಸೂರನಗದ್ದೆ ದೊರೆರಾಜ & ಶಿವರಾಜ! ಏರಿಯಾದಲ್ಲಿಯೇ ಇದ್ದ ಕಳ್ಳರಿಂದ ಸಿಕ್ತು 8 ಲಕ್ಷದ ಚಿನ್ನ! ಬೆಳ್ಳಿ ಚೊಂಬು!

ಇದಿಷ್ಟು ನಡೆದ ಕಥೆ! ವಿಶೇಷ ಅಂದರೆ, ಅಭಿಲಾಷ್​ ಗೆ ಆದಂತ ಮಾದರಿಯಲ್ಲಿಯೇ ಸಚಿವರೊಬ್ಬರ ಗನ್​ಮ್ಯಾನ್​ಗೂ ಆಗಿತ್ತು ಎನ್ನಲಾಗುತ್ತಿದೆ. ಆದರೆ, ಅವರು ಪೊಲೀಸ್ ಇಲಾಖೆಯಲ್ಲಿರುವುದು ಗಮನಿಸಿ ನಂತರ, ಅವರ ಹಣ ಅವರಿಗೆ ವಾಪಸ್ ಬಂದಿದೆ ಎಂಬುದು ಸಮಾಚಾರ..

ಇಷ್ಟಕ್ಕೂ ಏನಿದು ಮೋಸ!?

ಸಾಮಾನ್ಯವಾಗಿ ತೆಗೆದುಕೊಂಡ ಗಾಡಿಗಳ ಮೇಲೆ ಮಾಡಿದ ಲೋನ್​ ತೀರಿಸದೇ ಹೋದಲ್ಲಿ, ಅದನ್ನು ಸೀಜರ್​ಗಳು ಬಂದು ಜಪ್ತಿ ಮಾಡಿಕೊಂಡು ಹೋಗಿ ಅದನ್ನು ಶೆಡ್​ಗೆ ಹಾಕುತ್ತಾರೆ. ಆಮೇಲೆ ಅದನ್ನು ಒಟ್ಟಾಗಿ ಹರಾಜು ಹಾಕಿ ಲೋನ್​ ಹಣಕ್ಕೆ ಜಮೆ ಮಾಡಿಕೊಳ್ಳಲಾಗುತ್ತದೆ. ಇದು ಪ್ರೊಸಿಜರ್​..

ಆದರೆ ಕೆಲವು ಸೀಜರ್​ಗಳು ವಾಹನಗಳನ್ನು ಜಪ್ತಿ ಮಾಡಿಕೊಳ್ಳುವುದರ ಜೊತೆಗೆ , ಅದರ ಓನರ್​ಗಳಿಗೆ ಒಂದಿಷ್ಟು ದುಡ್ಡುಕೊಟ್ಟು, ವಾಹನದ ಒರಿಜನಲ್​ ಡ್ಯಾಕ್ಯುಮೆಂಟ್​ಗಳನ್ನು ಪಡೆದುಕೊಳ್ಳುತ್ತಾರೆ.

ಈ ಕೆಲಸವನ್ನು ಕೆಲವು ಬೇರೆ ವ್ಯಕ್ತಿಗಳು ಸಹ ಮಾಡುತ್ತಾರೆ. ಒಟ್ಟಾರೆ ಒರಿಜಿನಲ್​ ಡ್ಯಾಕ್ಯುಮೆಂಟ್ ಇಲ್ಲಿ ಇಂಪಾರ್ಟೆಂಟ್​.

ಹೀಗೆ ತಂದ ಸೀಜ್​ ಗಾಡಿಗಳನ್ನು ಅದರ ಶೆಡ್​ಗೆ ತಲಪಿಸಿದೇ ಸೆಕೆಂಡ್​ ಹ್ಯಾಂಡ್​ ಮಾರಾಟಗಾರರ ಆಯ್ದ ಶೋರೂಮ್​ಗಳಿಗೆ ಹೋಗುತ್ತದೆ.

ಸೀಜ್​ ಗಾಡಿಯ ಫೈನ್ಸಾನ್​ನಲ್ಲಿ ಕೆಲವರ ಜೊತೆ ಅಡ್ಜೆಸ್ಟ್ ಮಾಡಿಕೊಂಡು, ಪೂರ್ತಿ ಹಣ ಕಟ್ಟುವ ವಿಶ್ವಾಸ ಮೂಡಿಸುವ ಕೆಲಸವೂ ಇದರ ನಡುವೆ ನಡೆದಿರುತ್ತದೆ.

ತೋರಿಸಿ ತೋರಿಸಿ ಮೋಸ ಮಾಡುತ್ತಾರೆ

ಹೀಗೆ ಮಾತನ್ನೇ ಬಂಡಾವಾಳ ಮಾಡಿಕೊಳ್ಳುವ ಕೆಲವರು, ಸೀಜ್ ಆಗಿ ತಮ್ಮ ಕೈಗೆ ಬಂದ ಗಾಡಿಯನ್ನು ತಾವೆ ಓನರ್​ ಎಂದೋ ಅಥವಾ ತಮ್ಮ ಪರಿಚಯಸ್ಥರನ್ನೆ ಓನರ್​ ಎಂದು ತೋರಿಸಿ ವಾಹವನ್ನು ಮಾರುತ್ತಾರೆ. ಆದರೆ ರೆಕಾರ್ಡ್ಸ್​ ಚೇಂಜ್ ಆಗಿರುವುದಿಲ್ಲ. ಬೇರೆ ಯಾವುದೋ ಊರಿನ ವೆಹಿಕಲ್​ನ್ನು ಇನ್ನ್ಯಾವುದೋ ಊರಿನಲ್ಲಿ ಮಾರಲಾಗುತ್ತದೆ. ಯಾಮಾರಿ ಗೊತ್ತಿಲ್ಲದೇ ಖರೀದಿಸಿ ಊರೂರು ತಿರುಗುವಾಗ ಟೋಲ್​ಗಳಲ್ಲಿ ಮಾಹಿತಿ ಸಿಕ್ಕಿ, ಫೈನಾನ್ಸ್​ನವರು ಗಾಡಿ ಮತ್ತೆ ಜಪ್ತಿ ಮಾಡಿಕೊಂಡು ಹೋಗುತ್ತಾರೆ. ಈ ಕಡೆ ಕೊಟ್ಟ ದುಡ್ಡು ಗೋವಿಂದ ಆ ಕಡೆ ಗಾಡಿಯು ಗೋವಿಂದ ಎಂಬಂತಾಗುತ್ತದೆ.

ಒಂದೆ ಗಾಡಿ ಪದೇ ಪದೇ ಮಾರಾಟವಾಗುತ್ತದೆ! ಏಕೆ!?

ಇದೊಂದು ಥರವಾದರೇ, ಒಂದೇ ಗಾಡಿಯನ್ನು ಹಲವರಿಗೆ ಮಾರಲಾಗುತ್ತದೆ. ವಾಹನ ಖರೀದಿಸಿದವರು, ಕೊನೆಗೆ ಮೋಸ ಹೋಗಿದ್ದು ಗೊತ್ತಾಗಿ, ಹೋದರೆ ಹೋಯ್ತು ಒಂದು ಲಕ್ಷ ನೀವೆ ಇಟ್ಕೊಂಡು ಉಳಿದ ದುಡ್ಡಾನ್ನಾದರೂ ಕೊಡಿ ಎಂದು ಇಸ್ಕೊಂಡು ಬಚಾವ್ ಆಗುತ್ತಾರೆ. ಆದರೆ ಈ ಕಡೆ ಮತ್ತೆ ಅದೇ ಗಾಡಿಯನ್ನು ಇನ್ನೊಬ್ಬರಿಗೆ ಮಾರಲಾಗುತ್ತದೆ. ಮತ್ತೆ ಅವರಿಗೂ ಮೋಸವಾಗುತ್ತದೆ. ಅಭಿಲಾಷ್​ ಈ ನಿಟ್ಟಿನಲ್ಲಿ ಮೂರನೇ ವ್ಯಕ್ತಿ ಎಂದರೆ, ನೀವೆ ಯೋಚಿಸಿ.!

ಏನು ಮಾಡಬೇಕು!?

ಎಲ್ಲರ ಬಳಿಯಲ್ಲೂ ಶೋರೂಮ್​ ಗಾಡಿಯನ್ನೆ ತೆಗೆದುಕೊಳ್ಳಲು ದುಡ್ಡಿರಲಿಲ್ಲ.ಅದಕ್ಕಾಗಿಯೇ ಸೆಕೆಂಡ್ ಹ್ಯಾಂಡ್ ಗಾಡಿಗಳನ್ನು ತೆಗದುಕೊಳ್ಳುತ್ತಾರೆ. ಆದರೆ ಹೀಘೆ ತೆಗೆದುಕೊಳ್ಳುವಾಗ ಗಾಡಿಯ ಅಸಲಿ ಓನರ್ ಯಾರು ಎಂಬುದನ್ನ ಕಂಡುಕೊಂಡು, ಆರ್​ಸಿ ಓನರ್ ಬಳಿಯಲ್ಲಿ ಮಾತನಾಡಿ, ನಂತರ ಆರ್​ಟಿಒದಲ್ಲಿಯು ಕ್ಲೀಯರ್ ಮಾಡಿಕೊಳ್ಳಿ, ಹಾಗೇ ಫೈನಾನ್ಸ್​ ಲೋನ್​ ಇದ್ರೆ ಅಲ್ಲಿಯೇ ಹೋಗಿ ಹಣಕಟ್ಟಿ ವೆಹಿಕಲ್ ತೆಗೆದುಕೊಳ್ಳಿ. ನಂಬಿಕಸ್ತ ವ್ಯಕ್ತಿಗಳಲ್ಲದವರ ಬಳಿ ವ್ಯವಹಾರ ದೂರವಿಡಿ..

ಲಾಸ್ಟ್​ ಬೈಟ್​!

ಗೃಹಸಚಿವರ ಸಹಾಯದ ಗುಣ, ಎಸ್​ಪಿ ಲಕ್ಷ್ಮೀಪ್ರಸಾದ್​ರವರ ಮುತುವರ್ಜಿ, ಇನ್​ಸ್ಪೆಕ್ಟರ್​ ಚಂದ್ರಶೇಖರ್​ರವರ ಕಾರ್ಯಕ್ಷಮತೆಯಿಂದಾಗಿ, ಬ್ರೇಜಾ ಖರೀದಿಸಿಯು ಅದನ್ನು ಓಡಿಸಲಾಗದೇ ಪರಿತಪಿಸುತ್ತಿದ್ದ ಅಭಿಲಾಷ್​ರವರ ದುಡ್ಡು ಅವರಿಗೆ ವಾಪಸ್ ಬಂದಿದೆ. ಮೂವರು ಗಣ್ಯವ್ಯಕ್ತಿಗಳು ನಾನು ಸದಾ ಚಿರಋಣಿಯಾಗಿರುತ್ತೇನೆ ಎನ್ನುವ ಅಭಿಲಾಷ್​ ನನ್ನ ಈ ಸಂತೋಷಕ್ಕೆ ಪಾರವೇ ಇಲ್ಲ ಎನ್ನುತ್ತಿದ್ದಾರೆ.

Leave a Comment