ನವೆಂಬರ್ 15, 2025 : ಮಲೆನಾಡು ಟುಡೆ : ಚಳ್ಳಕೆರೆ ಬಳಿ ಕ್ರೆಟಾ ಕಾರು-ಲಾರಿ ಡಿಕ್ಕಿ; ಒಬ್ಬರು ಮೃತ್ಯು, ಮೂವರಿಗೆ ಗಾಯ: ಚಿಕಿತ್ಸೆ ಮುಂದುವರಿಕೆ
ಸಮುದ್ರದ ಅಲೆಯಲ್ಲಿ ಕೊಚ್ಚಿಹೋದ ಶಿವಮೊಗ್ಗದ ನಿವಾಸಿ! ನಡೆದಿದ್ದೇನು?
ಬಳ್ಳಾರಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರ ಫೋಟೋ ಶೂಟಿಂಗ್ ಗಾಗಿ ಶಿವಮೊಗ್ಗದಿಂದ ತೆರಳಿದ್ದವರ ಕಾರೊಂದು ಚಳ್ಳಕೆರೆ ಬಳಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಶಿವಮೊಗ್ಗ ಎಲ್ಬಿಎಸ್ ನಗರದ ಅರ್ಜುನ್ ಎಂಬವರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದು, ಓರ್ವರನ್ನ ಚಳ್ಳಕರೆ ಆಸ್ಪತ್ರೆ ಇನ್ನಿಬ್ಬರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



ಶಿವಮೊಗ್ಗದಲ್ಲಿ RJ ಮತ್ತು ಎಸ್ ಕೆ ಮರಿಯಪ್ಪರ ಸುದ್ದಿ ಇ-ಪೇಪರ್ ಓದಿ
ಶಿವಮೊಗ್ಗದ ಅರ್ಜುನ್, ಶರತ್, ಬಸವರಾಜ್ ಹಾಗೂ ನವೀನ್ ಎಂಬವರು ಬಳ್ಳಾರಿಯಲ್ಲಿ ನಿಗದಿಯಾಗಿದ್ದ ನಿಶ್ವಿತಾರ್ಥದ ಕಾರ್ಯಕ್ರಮಕ್ಕೆ ಫೋಟೋ ಶೂಟಿಂಗ್ಗಾಗಿ ತೆರಳುತ್ತಿದ್ದರು. ಇವರು ತೆರಳುತ್ತಿದ್ದ ಕ್ರೆಟಾ ಕಾರು, ಚಳ್ಳಕೆರೆ ಸಮೀಪ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ, ಕಾರನ್ನು ಚಲಾಯಿಸುತ್ತಿದ್ದ ಅರ್ಜುನ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ37 ವರ್ಷದ ಅರ್ಜುನ್ ಸಾವನ್ನಪ್ಪಿದ್ದಾರೆ. ಉಳಿದ ಮೂವರಿಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
