ನವೆಂಬರ್ 14, 2025 : ಮಲೆನಾಡು ಟುಡೆ : ಕಾಲೇಜು ಆವರಣದಲ್ಲಿ ಭೀಕರ ಹೆಜ್ಜೇನು ದಾಳಿ; 25 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು ಜೇನುಗೂಡಿಗೆ ಕಲ್ಲೆಸೆದಿದ್ದರಿಂದ ನಡೆದ ಘಟನೆ
ಚಿಕ್ಕಮಗಳೂರಿನಲ್ಲಿ ಹೆಜ್ಜೆನಿನ ಗೂಡಿಗೆ ಕಲ್ಲು ಹೊಡದ ಪರಿಣಾಮ, ಅವುಗಳು ದಾಳಿ ಮಾಡಿವೆ. ಪರಿಣಾಮ ನಗರದ ಪ್ರತಿಷ್ಠಿತ ಮೌಂಟೇನ್ ವ್ಯೂ ಕಾಲೇಜು ಸಮೀಪ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೇನು ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.. ನಿನ್ನೆ ಮಧ್ಯಾಹ್ನ ಊಟದ ವಿರಾಮದ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು, ಕ್ಯಾಂಪಸ್ ಆವರಣದಲ್ಲಿದ್ದ ಮರದ ಮೇಲಿನ ದೊಡ್ಡ ಜೇನುಗೂಡಿಗೆ ಕೆಲವು ವಿದ್ಯಾರ್ಥಿಗಳು ಕಲ್ಲುಗಳಿಂದ ಹೊಡೆದಿದ್ದಾರೆ. ಇದರಿಂದ ಕೆರಳಿದ ಹೆಜ್ಜೇನುಗಳು ಏಕಾಏಕಿ ಅಲ್ಲಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಮುಗಿಬಿದ್ದವು. ಜೇನು ಕಡಿತಕ್ಕೆ ಒಳಗಾದ ವಿದ್ಯಾರ್ಥಿಗಳನ್ನು ತಕ್ಷಣ ಸ್ಥಳೀಯರು ಮತ್ತು ಆಡಳಿತ ಮಂಡಳಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು

ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು ಸ್ಟೇಷನ್ನಿಂದ ಬಂತು ಪ್ರಕಟಣೆ! ಸಾಗರದಲ್ಲಿ ಮತ್ತೊಂದು ಮಿಸ್ಸಿಂಗ್ ಕೇಸ್
ವೈದ್ಯರು ಮಾಹಿತಿಯ ಪ್ರಕಾರ, ದಾಖಲಾದವರ ಪೈಕಿ ಬಹುತೇಕ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವ ವಿದ್ಯಾರ್ಥಿಯ ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದರಿಂದ, ಹೆಚ್ಚಿನ ಮತ್ತು ಉತ್ತಮ ಚಿಕಿತ್ಸೆಗಾಗಿ ಆತನನ್ನು ಕೂಡಲೇ ಹಾಸನದಲ್ಲಿರುವ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
2 ದಿನ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ವ್ಯತ್ಯಯ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
