Two Youngsters Missing : ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಇಬ್ಬರೂ ಅಕ್ಟೋಬರ್ 11 ರಂದು ನಾಪತ್ತೆಯಾಗಿದ್ದು, ಇವರು ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಮಾಳೂರು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ
ನಾಪತ್ತೆಯಾದವರು ಮತ್ತು ಚಹರೆ:
ನಾಗಶ್ರೀ (21 ವರ್ಷ): ಮಾಳೂರು ಗ್ರಾಮದ ಹೆಗಲತ್ತಿ ವಾಸಿ ಗುರುಪ್ರಸಾದ್ ಅವರ ಮಗಳು.
ಚಹರೆ: 5 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು.
ಧರಿಸಿದ್ದ ಉಡುಪು: ಮನೆಯಿಂದ ಹೋಗುವಾಗ ಲೈಟ್ ಪಿಂಕ್ ಟೀಶರ್ಟ್ ಮತ್ತು ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದರು.
2 ದಿನ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ವ್ಯತ್ಯಯ
Two Youngsters Missing ಸುದೀಪ್ (22 ವರ್ಷ): ಕೀಗಡಿ ಸುಬ್ರಮಣ್ಯ ಅವರ ಮಗ.
ಚಹರೆ: 5.5 ಅಡಿ ಎತ್ತರ, ದುಂಡು ಮುಖ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು.
ಮನೆಯಿಂದ ಹೋಗುವಾಗ ಕಾಫಿ ಬಣ್ಣದ ಟೀಶರ್ಟ್ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು.
ಈ ಇಬ್ಬರು ಕಾಣೆಯಾದ ವ್ಯಕ್ತಿಗಳ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ತಕ್ಷಣವೇ ಮಾಳೂರು ಪೊಲೀಸ್ ಠಾಣೆಗೆ ಅಥವಾ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಸಂಪರ್ಕ ಸಂಖ್ಯೆಗಳು: ಮಾಳೂರು ಪೊಲೀಸ್ ಠಾಣೆ: 08181-235142/9480803353 ಹೆಚ್ಚುವರಿ ಸಂಪರ್ಕ: 08181-228310/9480803333/08182-261413/9480803300


