BS Yediyurappa ದೆಹಲಿ ಬಾಂಬ್ ಬ್ಲಾಸ್ಟ್ನ್ನು ವ್ಯವಸ್ಥಿತವಾಗಿ ರೂಪಿಸಲಾಗಿತ್ತು ಆದರೆ ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಯುಶಸ್ವಿಯಾಗಿದೆ. ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಪುರುಷರು, ಮಹಿಳೆಯರು ವೈದ್ಯರು ಎಂಬುದು ಆತಂಕಕಾರಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಈ ಸ್ಫೋಟದಲ್ಲಿ ಅಮೋನಿಯಂ ಸಲ್ಫೇಟ್ (Ammonium Sulphate) ಬಳಸಲಾಗಿದೆ ಎಂಬ ಮಾಹಿತಿ ಬಂದಿದೆ ಮತ್ತು ಇದು ಬಹಳ ವ್ಯವಸ್ಥಿತ ಪಿತೂರಿಯಿಂದ ಸ್ಫೋಟಿಸಲಾಗಿದೆ ಎಂದು ಅವರು ತಿಳಿಸಿದರು.
ದೆಹಲಿ ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೇಳಿದ್ದಾರೆ. ದೊಡ್ಡ ಅನಾಹುತವಾಗುವುದನ್ನು ಪೊಲೀಸರು ತಡೆದಿದ್ದು, ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಬಂಧಿಸಲಾಗಿದೆ. ಒಂದು ಸಮುದಾಯಕ್ಕೆ ಸೇರಿದ ವೈದ್ಯರು ಈ ಸ್ಫೋಟದಲ್ಲಿ ಭಾಗಿಯಾಗಿರುವುದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಸಾಕಷ್ಟು ಅನುಭವಿ ವೈದ್ಯರೇ ಈ ಪಿತೂರಿಯಲ್ಲಿ ಪಾಲ್ಗೊಂಡಿರುವುದನ್ನು ನಾನು ಖಂಡಿಸುತ್ತೇನೆ ಎಂದರು.
ಸ್ವಲ್ಪ ಯಾಮಾರಿದ್ದರೆ ಅಥವಾ ಮೈಮರೆತಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಆದರೆ, ದೊಡ್ಡ ಅನಾಹುತ ತಡೆಯುವಲ್ಲಿ ಸಫಲರಾಗಿದ್ದೇವೆ ಮತ್ತು ಈ ಘಟನೆಯಲ್ಲಿ ಪಾಲ್ಗೊಂಡವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಸಾಧನೆಯ ಫಲಿತಾಂಶವಾಗಿದೆ. ಆರೋಪಿಗಳಿಗೆ ಏನು ಗತಿ ಕಾಣಿಸಬೇಕೋ ಅದನ್ನು ಕಾಣಿಸಿದ್ದೇವೆ. ಮುಂದಿನ ತನಿಖೆ ಬಳಿಕ ಇನ್ನೂ ಹೆಚ್ಚು ಸಂಗತಿಗಳು ಹೊರಬೀಳಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
BS Yediyurappa ಬಿಜೆಪಿಯಲ್ಲಿ ನಾಯಕತ್ವದ ಕುರಿತು ಹೇಳಿಕೆ
ಇದೇ ವೇಳೆ, ನವೆಂಬರ್ ಕ್ರಾಂತಿಯ ಬಗ್ಗೆ ನಾವು ಏನೂ ಮಾತನಾಡುವುದಿಲ್ಲ, ಈ ಬಗ್ಗೆ ಮಾತನಾಡುವುದಿಲ್ಲ ಆದರೆ ಕಾದು ನೋಡೋಣ. ಬಿಜೆಪಿಯಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ, ಬಿ.ವೈ. ವಿಜಯೇಂದ್ರ (B.Y. Vijayendra) ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಕಾರ್ಯಕರ್ತರು ಸಹ ಅವರೇ ಮುಂದುವರೆಯಬೇಕೆಂದು ಆಶಿಸಿದ್ದಾರೆ. ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.


