Darshan Devil movie ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ ಬಿಡುಗಡೆಗೆ ಕೇವಲ 29 ದಿನಗಳು ಮಾತ್ರ ಬಾಕಿ ಉಳಿದಿದ್ದು, ಚಿತ್ರತಂಡವು ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದೆ. ಈ ಮಧ್ಯೆ, ಚಿತ್ರತಂಡವು ಅಭಿಮಾನಿಗಳಿಗೆ ಹೊಸ ಅಪ್‌ಡೇಟ್ ಒಂದನ್ನು ನೀಡಿದೆ.

ಶಿವಮೊಗ್ಗದಲ್ಲಿ ಪ್ರೀಯಾಗಿ ಬಿಪಿ, ಶುಗರ್ ಚೆಕ್ ಮಾಡಿಸಬೇಕೆ!? ಈ ಮಾಹಿತಿ ಜೊತೆ ಇನ್ನಷ್ಟು ವಿಚಾರ ಇಲ್ಲಿದೆ
ಹೌದು, ‘ಡೆವಿಲ್’ ಚಿತ್ರದ ಮೂರನೇ ಹಾಡನ್ನು ಚಿತ್ರತಂಡವು ಇದೇ ನವೆಂಬರ್ 16 ರಂದು ಮಧ್ಯಾಹ್ನ 12:03 ನಿಮಿಷಕ್ಕೆ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ‘ಡೆವಿಲ್’ ಚಿತ್ರದ ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಗೂ ‘ಒಂದೇ ಒಂದು ಸಹ ಹೇಳಿ ಬಿಡಲೇ’ ಎಂಬ ಎರಡು ಹಾಡುಗಳು ಬಿಡುಗಡೆಯಾಗಿದ್ದು. ಈ ಎರಡೂ ಹಾಡುಗಳು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿ ಸಖತ್ ಟ್ರೆಂಡಿಗ್‌ನಲ್ಲಿದ್ದವು. ಇದೀಗ, ಮೂರನೇ ಹಾಡು ಬಿಡುಗಡೆಗೆ ಸಿದ್ಧವಾಗಿದ್ದು, ಈ ಹಾಡು ಚಿತ್ರದ ಪ್ರಚಾರದ ಮೇಲೆ ಯಾವರೀತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಕಾದು ನೋಡಬೇಕಿದೆ.

darshan devil movie

