ಚಿಕ್ಕವರಾಗಿ ಮತ್ತೆ ಸ್ಕೂಲ್​ಗೆ ಹೋದ ಮಿನಿಸ್ಟರ್! ಮರಳಿ ಸಿಕ್ಕ ಸವಿ..ಸವಿ…ನೆನಪು!

ajjimane ganesh

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ : ರಾಜಕಾರಣದ ಬಿಸಿ ಜಂಜಾಟದ ನಡುವೆ ತಾನು ಓದಿದ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಬಾಲ್ಯದ ಸಿಹಿ ನೆನಪು ಮೆಲುಕು ಹಾಕಿದ ಶಿಕ್ಷಣ ಸಚಿವ, ಸ್ನೇಹಿತರೊಂದಿಗೆ ಸ್ನೇಹ ಸಮ್ಮಿಲನದ ಫೋಟೋ ಸುದ್ದಿ ಇಲ್ಲಿದೆ 

Education Minister Madhu Bangarappa Visits Childhood School, Shares Nostalgic Moments
Education Minister Madhu Bangarappa Visits Childhood School, Shares Nostalgic Moments

ಎಷ್ಟೆ ದೊಡ್ಡವರಾದ್ರೂ ನಾವು ಓದಿದ ಸ್ಕೂಲಿಗೆ ನಾವೆಲ್ಲರೂ ಇನ್ನೂ ಸಹ ಮಕ್ಕಳೆ! ಓದಿದ ಶಾಲೆಯೊಂದರಲ್ಲಿ ಸಾಧಕನಾಗಿ ಮೆರೆದು ಹೋದರೂ ಕೂಡ, ಸಣ್ಣವರಿರುತ್ತಾ ಕುಳಿತ ಡೆಸ್ಕ್​ ನಮ್ಮೆಲ್ಲಾ ಇಗೋಗಳನ್ನು ಕಳಚಿ ಮತ್ತೆ ಮಕ್ಕಳಾಗಿಸುತ್ತೆ. ಅದೆ ಹೊತ್ತಿಗೆ, ಅದೇ ಕ್ಲಾಸಿನ ಸ್ನೇಹಿತರು ಸಿಕ್ಕರಂತೂ, ಬದುಕು ಸಹ ಮರೆತೂ ಹೋಗಿ ನೆನಪುಗಳ ಸಮಯ ಮತ್ತೆ ಟಿಕ್ ಟಿಕ್ ಅನ್ನಲು ಆರಂಬಿಸುತ್ತದೆ. ಇಂತಹದ್ದೊಂದು ರಸವತ್ತಾದ ಕ್ಷಣಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಹ ಸಾಕ್ಷಿಯಾಗಿದ್ದರು.

ಶಿವಮೊಗ್ಗ: ಕೆಪಿಎಸ್ ಶಾಲೆಗಳಿಗೆ ನವೆಂಬರ್‌ನಲ್ಲಿ ಸಿಎಂ ಚಾಲನೆ, 30,000ಕ್ಕೂ ಹೆಚ್ಚು ಶಿಕ್ಷಕರ ನೇಮಕಕ್ಕೆ ಕ್ರಮ – ಸಚಿವ ಮಧು ಬಂಗಾರಪ್ಪ

ಅವರು ಮೊನ್ನೆ ಭಾನುವಾರ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾಧ್ಯಮ ಶಾಲೆಗೆ ತೆರಳಿದ್ದರು. ಸಚಿವನಾಗಿ ಅಲ್ಲ, ಅಲ್ಲಿಯೇ ಓಲ್ಡ್ ಸ್ಟೂಡೆಂಟ್ ಆಗಿ. ಈಗೆಲ್ಲಾ ರಿಯೂನಿಯನ್​ ಕಾನ್ಸೆಪ್ಟ್ ಟ್ರೆಂಡ್​ನಲ್ಲಿದೆ. ಅದೇ ರೀತೀ ಮಧು ಬಂಗಾರಪ್ಪನವರ ಬ್ಯಾಚ್​ ಕೂಡ ಸ್ನೇಹಮಿಲನ ಆಯೋಜಿಸಿತ್ತು. ಬರ್ತಿನ್ರೋ..ಅಂತಾ ಖುಷಿಯಾಗಿಯೇ ಸ್ಕೂಲ್​ಗೆ ತೆರಳಿದ ಮಧು ಬಂಗಾರಪ್ಪ, ಸಚಿವಗಿರಿಯ ಯಾವೊಂದನ್ನು ತಮ್ಮೊಂದಿಗೆ ಕೊಂಡೊಯ್ಯಲಿಲ್ಲ. ತಾನು ನಲಿದಾಡಿದ ಶಾಲೆಯ ಹಳೆ ನೆನಪುಗಳನ್ನ ಮನಸ್ಸಲ್ಲೇ ಹೆಕ್ಕಿ ತೆಗೆಯುತ್ತಾ ಕಣ್ಣಗಳಲ್ಲಿಯೇ ಅವುಗಳನ್ನ ಒಂದೊಂದಾಗಿ ನೇಯುತಾ, ಎದುರಾದ ಸ್ನೇಹಿತರ ನಗುವಿಗೆ ನಗುವಾಗಿ ಸುಂದರ ಕ್ಷಣಗಳನ್ನ  ಮಧುರ ಹಾರವಾಗಿಸಿಕೊಂಡು, ಇನ್ನೆಲ್ಲೂ ಸಿಗದ, ಮತ್ತೆ ಸಿಗುವ ನಂಬಿಕೆಯಿರದ ಸಂತೃಪ್ತ ಭಾವವೊಂದನ್ನ ಎದೆಗೆ ತುಂಬಿಸಿಕೊಂಡರು. 

ಸಾಗರದಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೃದಯಾಘಾತದಿಂದ ಸಾವು

ಸಚಿವರೇ ಮಗುವಾದ ಮೇಲೆ ಇನ್ನೇನಿರದು ವಿಶೇಷ. ಶಾಲೆಯ ಹಳೆ ನೆನಪಿನ ಪುಸ್ತಕವನ್ನು ನೀವು ನಾವೆಲ್ಲರೂ ಆಗಾಗ ಮೆಲಕು ಹಾಕುವವರೆ. ನಮ್ಮದೆಲ್ಲಾ ಹಾವಳಿ ಹೇಗಿತ್ತು ಗೊತ್ತಾ!? ಒಂದೆರಡಲ್ಲಾ ನಾವ್ ಮಾಡಿದ್ದು ಅಂತಾ ಕೊನೆಗೆ ಯಾರು ಸಿಗದಿದ್ದರೇ ತಮ್ಮ ಮಕ್ಕಳಿಗೆ ಹೇಳಿ ಸಂತೋಷ ಪಡುವ ಆನಂದಕ್ಕೆ ಬಹಶಃ ಬೇರೆ ಉದಾಹರಣೆ ಸಿಗದು. ಇರಲಿ ವಿಷಯಕ್ಕೆ ಬರೋಣ  ಮೇರಿ ಇಮ್ಯಾಕ್ಯುಲೇಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು, 1972 ರಿಂದ 1979 ರವರೆಗೆ 5ನೇ ತರಗತಿಯವರೆಗೆ ಇಲ್ಲಿ ವಿದ್ಯಾಭ್ಯಾಸ ಮಾಡಿದ ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡರು.

ಜಾತಿ ಗಣತಿ ವಿರೋಧಿಸುವವರ ವಿರುದ್ಧ ಸುಪ್ರೀಂ ಕೋರ್ಟ್ ಸುಮೊಟೊ ಕೇಸ್ ದಾಖಲಿಸಲಿ: ಸಚಿವ ಮಧು ಬಂಗಾರಪ್ಪ

ಹಳೆಯ ಶಾಲೆಯಲ್ಲಿ ಗದ್ದಲದಿಂದ ತುಂಬಿದ್ದ ಕಾರಿಡಾರ್‌ಗಳು, ತರಗತಿ ಕೊಠಡಿಗಳಲ್ಲಿ ನಾವೆಲ್ಲ ಕುಳಿತು ಪಾಠ ಕೇಳಿದ ಬೆಂಚುಗಳು ಮತ್ತು ಕಪ್ಪುಹಲಗೆಯ ಮೇಲೆ ಸೀಮೆ ಸುಣ್ಣದಲ್ಲಿ ಬರೆದ ನೆನಪುಗಳು ಇಂದಿಗೂ ಮರುಕಳಿಸುತ್ತಿವೆ. ಈ ಭೇಟಿಯು ಕಾಲವನ್ನು ಮತ್ತೆ ಬಾಲ್ಯಕ್ಕೆ ಕೊಂಡೊಯ್ದ ಭಾವನೆಯನ್ನು ನೀಡಿತು ಎಂದು ಸಂತೋಷದಿಂದ ಮೆಲುಕು ಹಾಕಿದರು. ನನ್ನ ಗುರುಗಳು ಹಾಗೂ ಪ್ರೀತಿಯ ಸ್ನೇಹಿತರೊಂದಿಗೆ ಒಟ್ಟಾಗಿ ಕಳೆದ ಈ ಸಮಯವು ಮತ್ತಷ್ಟು ಸಂತೋಷವನ್ನು ತಂದಿದೆ ಎಂದರು.  

ಶಿವಮೊಗ್ಗ ಗಾಂಧಿ ಬಜಾರ್ ತರಕಾರಿ ಮಾರ್ಕೆಟ್​ನಲ್ಲಿ ಗೆರೆ ಎಳೆದ ಟ್ರಾಫಿಕ್​ ಪೊಲೀಸ್! ಏಕೆ ಗೊತ್ತಾ

ಮಧು ಬಂಗಾರಪ್ಪರನವರ ಶಾಲೆ ವಿಸಿಟ್​ನ ಫೋಟೋಗಳು ಇಲ್ಲಿವೆ ಗಮನಿಸಿ

Education Minister Madhu Bangarappa
Education Minister Madhu Bangarappa
Education Minister Madhu Bangarappa
Education Minister Madhu Bangarappa
Education Minister Madhu Bangarappa Visits Childhood School, Shares Nostalgic Moments
Education Minister Madhu Bangarappa Visits Childhood School, Shares Nostalgic Moments
Education Minister Madhu Bangarappa Visits Childhood School, Shares Nostalgic Moments
Education Minister Madhu Bangarappa Visits Childhood School, Shares Nostalgic Moments
Education Minister Madhu Bangarappa Visits Childhood School, Shares Nostalgic Moments
Education Minister Madhu Bangarappa Visits Childhood School, Shares Nostalgic Moments

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Education Minister Madhu Bangarappa Visits Childhood School, Shares Nostalgic Moments

Share This Article