ಶಿವಮೊಗ್ಗ ಗಾಂಧಿ ಬಜಾರ್ ತರಕಾರಿ ಮಾರ್ಕೆಟ್​ನಲ್ಲಿ ಗೆರೆ ಎಳೆದ ಟ್ರಾಫಿಕ್​ ಪೊಲೀಸ್! ಏಕೆ ಗೊತ್ತಾ

ajjimane ganesh

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ : ವ್ಯಾಪಾರಕ್ಕಾಗಿ ರಸ್ತೆ ಅತಿಕ್ರಮಣ ತಪ್ಪಿಸಲು ಪಟ್ಟಿ ಎಳೆದ ಶಿವಮೊಗ್ಗ ಟ್ರಾಫಿಕ್ ಪೊಲೀಸ್, ಗೆರೆ ದಾಟಿ ಬರಂಗಿಲ್ಲ ಎಂದು ಸೂಚನೆ!

Shimoga Gandhi Bazar Encroachment issue clear Authorities Paint Roads Warn Vegetable Vendors
Shimoga Gandhi Bazar Encroachment issue clear Authorities Paint Roads Warn Vegetable Vendors

ಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಗಾಂಧಿ ಬಜಾರ್ ಮೇಲೆ ವಿಶೇಷ ಗಮನ ಹರಿಸಿದ್ದಾರೆ. ಅಲ್ಲಿದ್ದ ಮಂಗಳವಾರದ ಸಂತೆ ಮಂಜುನಾಥ ಟಾಕೀಸ್ ರೋಡ್​ಗೆ ಶಿಫ್ಟ್ ಆಗಿದೆ. ಪುಟ್​ಪಾತ್ ವ್ಯಾಪಾರಸ್ಥರನ್ನು ವಿಶೇಷ ಅಭಿಯಾನ ನಡೆಸಿ ತೆರವುಗೊಳಿಸಲಾಗಿದೆ. ಇದೀಗ ಗಾಂಧಿ ಬಜಾರ್ ತರಕಾರಿ ಮಾರ್ಕೆಟ್ ವ್ಯಾಪಾರಸ್ಥರಿಗೆ ಗೆರೆ ದಾಟಿ ಬರುವಂತಿಲ್ಲ ಎಂದು ರಸ್ತೆಯಲ್ಲಿ ಪೇಂಟ್​ ಮೂಲಕ ಗೆರೆ ಎಳೆಯಲಾಗಿದೆ.  

ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರಿಪೈಡ್​ ಆಟೋ ಬಾಡಿಗೆ ವಿಚಾರದಲ್ಲಿ ದಂಡ ವಿಧಿಸಿದ ಪೊಲೀಸ್! ನಡೆದಿದ್ದು!?

ಗಾಂಧಿ ಬಜಾರ್​ ಹೇಳಿಕೇಳಿ ಶಿವಮೊಗ್ಗದ ಅತಿದೊಡ್ಡ ವಹಿವಾಟಿನ ಜಾಗ. ಇಲ್ಲಿ ಸಾವಿರಾರು ಜನರು ನಿತ್ಯ ಏನಾದರೂ ಖರೀದಿಗೆ ಬಂದರೆ, ನೂರಾರು ಮಂದಿ ತಮ್ಮ ಸರಕನ್ನು ಮಾರಿಹೋಗಲು ಬರುತ್ತಾರೆ. ಇಂತಹವರು ತಮ್ಮ ವಹಿವಾಟಿಗೆ ಬಿಡಾರ ಹಾಕುವುದು ಪುಟ್​ಪಾತ್ ಮೇಲೆ ಇಲ್ಲವೇ ರಸ್ತೆ ಬದಿಯಲ್ಲಿ. ಬೀದಿ ಬದಿಯ ಈ ವ್ಯಾಪಾರ, ಅಲ್ಲಿನ ಮಳಿಗೆದಾರರಿಗೆ, ವಾಹನ ಸವಾರರಿಗೆ ಹಾಗೂ ಇತರರಿಗೆ ಸಮಸ್ಯೆ ತಂದಿಟ್ಟಿತ್ತು. ತರಕಾರಿ ಮಾರ್ಕೆಟ್​ನಲ್ಲಿ ರಸ್ತೆಯಲ್ಲಿ ಓಡಾಡುವುದಕ್ಕೂ ದಾರಿ ಇರುತ್ತಿರಲಿಲ್ಲ ಎಂಬ ದೂರು ಎದ್ದಿತ್ತು. ಹೀಗಾಗಿ ಇತ್ತೀಚೆಗೆ ತರಕಾರಿ ಮಾರ್ಕೆಟ್ ಹಾಗೂ ಗಾಂಧಿ ಬಜಾರ್​ನಲ್ಲಿ ವಿಶೇಷ ಡ್ರೈವ್ ನಡೆಸಿ ಪುಟ್ಪಾತ್​ ವ್ಯಾಪಾರಸ್ಥರನ್ನು ಬದಿಗೆ ಸರಿಸಿದ್ದ ಪೊಲೀಸರು, ಇದೀಗ ತರಕಾರಿ ಮಾರ್ಕೆಟ್​ನಲ್ಲಿ ಈ ಗೆರೆ ದಾಟಿ ಅಂಗಡಿ ಮುಂದಕ್ಕೆ ಬರಬಾರದು ಎಂದು ಸೂಚಿಸಿದ್ದಾರೆ. 

ಭದ್ರಾವತಿಯ ಕುಟುಂಬಕ್ಕೆ ₹10 ಲಕ್ಷ ನೀಡಿದ ಶಿವಮೊಗ್ಗ ಕೆಎಸ್​ಆರ್​ಟಿಸಿ ವಿಭಾಗ

ಅಂದರೆ, ತರಕಾರಿ ವ್ಯಾಪಾರಸ್ಥರು ರಸ್ತೆಯ ಮೇಲೆ ತರಕಾರಿಗಳನ್ನು ಇಟ್ಟುಕೊಂಡು ಮಾರಾಟ ಮಾಡಬಾರದು ಎಂಬ ಕಾರಣಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ವೈಟ್ ಪೈಂಟ್ ಮೂಲಕ ಗೆರೆ ಎಳೆದಿದ್ದಾರೆ. ಈ ಮೂಲಕ ವ್ಯಾಪಾರದ ಗಡಿ ಎಳೆದಿದ್ದು, ಇದನ್ನ ದಾಟುವಂತಿಲ್ಲ ಎಂದು ಸೂಚ್ಯವಾಗಿ ಸೂಚಿಸಿದ್ದಾರೆ.

Malenadu Today

ಭದ್ರಾವತಿಯ ಕುಟುಂಬಕ್ಕೆ ₹10 ಲಕ್ಷ ನೀಡಿದ ಶಿವಮೊಗ್ಗ ಕೆಎಸ್​ಆರ್​ಟಿಸಿ ವಿಭಾಗ

Shimoga Gandhi Bazar Encroachment issue clear Authorities Paint Roads Warn Vegetable Vendors
Shimoga Gandhi Bazar Encroachment issue clear Authorities Paint Roads Warn Vegetable Vendors

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shimoga Gandhi Bazar Encroachment issue clear Authorities Paint Roads Warn Vegetable Vendors
Shimoga Gandhi Bazar Encroachment issue clear Authorities Paint Roads Warn Vegetable Vendors

Shimoga Gandhi Bazar Encroachment issue clear Authorities Paint Roads Warn Vegetable Vendors

Share This Article