ಸಿಮೆಂಟ್ ಲಾರಿ ಪಲ್ಟಿ, ತಾಳಗುಪ್ಪ ನಿವಾಸಿ ಸಾವು! ಕಾರ್ಗಲ್ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

Malenadu Today

SHIVAMOGGA  |  Jan 26, 2024  |   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ. 

ಇಲ್ಲಿನ ಕಾರ್ಗಲ್ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ನಿನ್ನೆ ಅಂದರೆ ಗುರುವಾರ ಸಂಜೆ ಈ ಘಟನೆ ಸಂಭವಿಸಿದೆ. ಸಂಜೆ ನಾಲ್ಕು ಮೂವತ್ತರ ಹೊತ್ತಿಗೆ ಇಲ್ಲಿನ ಇಡುವಾಣಿ ಬಳಿಯಲ್ಲಿ ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. 

ಕಾರ್ಗಲ್ ಪೊಲೀಸ್ ಸ್ಟೇಷನ್ 

ಸಿಮೆಂಟ್​ ಚೀಲಗಳಿದ್ದ ಲಾರಿ  ಪಲ್ಟಿಯಾಗಲು ಕಾರಣ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಚಾಲಕನು ಸೇರಿ ಕೆಲವರು ಗಾಯಗೊಂಡಿದ್ದಾರೆ. ಅಲ್ಲದೆ ತಾಳಗುಪ್ಪ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಉಳಿದವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಘಟನೆಯಲ್ಲಿ ಒಂದು ಮಗ್ಗಲಾಗಿ ಬಿದ್ದಿರುವ ಲಾರಿಯಲ್ಲಿದ್ದ ಸಿಮೆಂಟ್ ಮೂಟೆಗಳು ಕೂಡ ರಸ್ತೆತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಕಾರ್ಗಲ್ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 


Share This Article