SHIVAMOGGA | Jan 22, 2024 | Allahu Akbar slogans during ram mandir celebrations | ರಾಮಮಂದಿರ ಸಂಭ್ರಮಾಚರಣೆ ವೇಳೆ ಘೋಷಣೆ ಕೂಗಿದ ಮಹಿಳೆಯ ವಿಚಾರದಲ್ಲಿ ಆಕೆಯ ತಂದೆ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಗಳ ನಡವಳಿಕೆ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ತಮ್ಮ ಮಗಳು ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾಳೆ. ಮಾನಸ, ಓಪನ್ ಮೈಂಡ್, ಶ್ರೀಧರ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಆಕೆಯನ್ನು ಅಡ್ಮಿಟ್ ಮಾಡಲು ಹೇಳಿದ್ದಾರೆ.
ಮನೆಯಲ್ಲಿ ವಿಚಿತ್ರ ವರ್ತನೆ
ಆಕೆಯು ಮನೆಯಲ್ಲಿಯು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದು, ದಿನವು ಗಲಾಟೆ ಮಾಡುತ್ತಿದ್ದು, ಮನೆಯಲ್ಲಿ ಟಿವಿಯನ್ನ ಒಡೆದು ಹಾಕಿದ್ದಾಳೆ. ಆಕೆಯ ನಡವಳಿಕೆಯಿಂದ ಅಕ್ಕಪಕ್ಕದ ಮನೆಯವರು ಸಹ ಬೇಸರ ಆಗಿದ್ದಾರೆ. 2018 ರಿಂದ ಬರಬರುತ್ತಾ ಆಕೆಗೆ ಈ ಸ್ಥಿತಿ ಜಾಸ್ತಿಯಾಗಿದ್ದು, ಆಕೆಗೆ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಆಕೆ ಯಾರನ್ನ ಮಾತನ್ನು ಕೇಳದೇ ಅವಳ ಮನಸ್ಸಿಗೆ ತೋಚಿದಂತೆ ವರ್ತಿಸುತ್ತಾಳೆ.
ಅಲ್ಲಿ ಏನು ನಡೆಯಿತು ಗೊತ್ತಿಲ್ಲ
ಇವತ್ತು ಅಲ್ಲಿ ಏನು ನಡೆಯಿತು ಗೊತ್ತಿಲ್ಲ. ಆದರೆ ನಾನು ಆಕೆಯನ್ನ ಫಾಲೋ ಮಾಡಿಕೊಂಡು ಬಂದಿದ್ದೆ. ಪಾರ್ಕ್ ಗೆ ಬಂದಿರಬಹುದು ಎಂದುಕೊಂಡೆ. ಆಕೆ ಸ್ಕೂಟಿ ತೆಗೆದುಕೊಂಡು ಹೋಗುವಾಗಲೇ ಫಾಲೋ ಮಾಡಿಕೊಂಡು ಬಂದಿದ್ದೆ. ಆದರೆ ಆಕೆ ಮಿಸ್ ಆದಳು. ಈ ವೇಳೆ ಆಕೆಗೆ ಕರೆ ಮಾಡಿದೆ, ಭಾಷಣದ ಶಬ್ಧ ಕೇಳುತ್ತಿತ್ತು. ಎಲ್ಲಿದ್ಯಾ ಎಂದು ಕೇಳಿದೆ. ಏನೋ ಫಂಕ್ಷನ್ ನಡೆಯುತ್ತಿದೆ ಎಂದಳು. ಆನಂತರ ಅಲ್ಲಿಗೆ ಬರುವಷ್ಟರಲ್ಲಿ ತಮ್ಮ ಸಂಬಂಧಿಕರು ಫೋನ್ ಮಾಡಿದ್ರು. ನಿಮ್ಮ ಮಗಳನ್ನು ಪೊಲೀಸರು ಹಿಡಿದುಕೊಂಡು ಹೋದರು ಎಂದರು. ಹಾಗಾಗಿ ತಕ್ಷಣ ನಾನು ಪೊಲೀಸ್ ಸ್ಟೇಷನ್ಗೆ ಬಂದೆ ಎಂದಿದ್ದಾರೆ.
ಕೌಟುಂಬಿಕ ಸಮಸ್ಯೆ ಕಾರಣ
ತನ್ನ ಕೌಟುಂಬಿಕ ಸಮಸ್ಯೆಯಿಂದಾಗಿ ತಮ್ಮ ಮನೆಯಲ್ಲಿದ್ದು, ಆಕೆಗೆ ಮೂವರು ಮಕ್ಕಳಿದ್ದಾರೆ. ಆಕೆಯನ್ನ ವಶಕ್ಕೆ ಪಡೆದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸ್ ಸ್ಟೇಷನ್ಗೆ ಬಂದಿದ್ದೆ. ಅವರು ದಾಖಲೆಗಳನ್ನು ತರುವಂತೆ ತಿಳಿಸಿದ್ರು. ದಾಖಲೆಗಳನ್ನ ತಂದು ಪೊಲೀಸರಿಗೆ ನೀಡಿದ್ದೇನೆ. ಮುಂದೆ ಈ ರೀತಿಯು ಆಗದಂತೆ ನೋಡಿಕೊಳ್ಳುತ್ತೇನೆ. ಆಕೆಗೆ ಚಿಕಿತ್ಸೆ ಕೊಡಿಸುತ್ತೇನೆ.
ತಮ್ಮದು ಸೆಕ್ಯುಲರ್ ಕುಟುಂಬ
ಟೀಚರ್ ಆಗಿ ಕೆಲಸ ಮಾಡುತ್ತಿದ್ದವಳು, ಅವಳಿಗೆ ಬಡವ ಬಲ್ಲಿದರು ಎಂದು ಓಡಾಡುತ್ತಿದ್ದವಳು. ತಮ್ಮನೆಯಿಂದ ಊಟ ತೆಗೆದುಕೊಂಡು ಹೋಗಿ ಬಡವರಿಗೆ ಕೊಟ್ಟು ಬರುತ್ತಿದ್ದವಳು. ಜಾತಿಗೀತಿ ಎಂದು ನೋಡುತ್ತಿರಲಿಲ್ಲ. ಮೇಲಾಗಿ ತಾವು ಸರ್ಕಾರಿ ಉದ್ಯೋಗಿ ಆಗಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿ ಜೀವನದಲ್ಲಿದ್ದೇನೆ. ತಮ್ಮ ಪತ್ನಿ ಸಹ ಟೀಚರ್ ಆಗಿ ಕೆಲಸ ಮಾಡಿದ್ದಾರೆ. ತಮ್ಮದು ಸೆಕ್ಯುಲರ್ ಕುಟುಂಬ. ಎಲ್ಲರೊಳಗೆ ಒಂದಾಗಿ ಬದುಕಬೇಕು ಎಂದೇ ಮಕ್ಕಳಿಗೆ ಹೇಳಿಕೊಟ್ಟಿರುವುದು. ಈ ಘಟನೆ ಬೇಸರ ತಂದಿದೆ. ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಚಿಕಿತ್ಸೆ ಕೊಡಿಸುತ್ತೇನೆ ಎಂದು ತಿಳಿಸಿದ್ದಾರೆ.
