JAI Movie ಶಿವಮೊಗ್ಗ: ನಟ, ನಿರ್ದೇಶಕ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಜೈ’ ಇದೇ ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಪೊಲಿಟಿಕಲ್ ಡ್ರಾಮಾ ಮತ್ತು ಸೋಶಿಯಲ್ ಕಾಮಿಡಿಯ ಸಾರವನ್ನು ಹೊಂದಿರುವ ಈ ಚಿತ್ರವು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ರೂಪೇಶ್ ಶೆಟ್ಟಿ, ಜನರು ತಾವು ಆಯ್ಕೆ ಮಾಡುವ ರಾಜಕೀಯ ನಾಯಕರು ಮಾಡುವ ಎಲ್ಲ ತಪ್ಪುಗಳಿಗೆ ಸುಮ್ಮನೆ ‘ಜೈ’ ಎನ್ನದೇ, ಅದನ್ನು ಪ್ರಶ್ನಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಈ ಚಿತ್ರ ಹೊಂದಿದೆ ಎಂದು ತಿಳಿಸಿದರು.
ಚಿತ್ರವು ಉತ್ತಮವಾಗಿ ಮೂಡಿಬಂದಿದ್ದು, ಈಗಾಗಲೇ ಆರು ದೇಶಗಳಲ್ಲಿ ಇಂಟರ್ನ್ಯಾಷನಲ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಈ ಪ್ರೀಮಿಯರ್ ಪ್ರದರ್ಶನಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಚಿತ್ರತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಒಂದು ಚಿತ್ರ ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋಗಳನ್ನು ಬಿಟ್ಟಾಗ ಅದು ಜನರಿಗೆ ಬೇಗ ತಲುಪುತ್ತದೆ ಎಂಬುದು ನಮ್ಮ ನಂಬಿಕೆ ಎಂದು ರೂಪೇಶ್ ಶೆಟ್ಟಿ ಹೇಳಿದರು. ಇದೇ ಕಾರಣಕ್ಕಾಗಿ, ಬಿಡುಗಡೆಗೂ ಮುನ್ನ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಇಂದು ಮೂರು ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗುತ್ತಿದ್ದು, ಎಲ್ಲರೂ ಬಂದು ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದರು.
ಜೈ ಚಿತ್ರವು ಒಟ್ಟು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎಂಬ ದಾಖಲೆಯನ್ನು ಸೃಷ್ಟಿಸುತ್ತಿದೆ. ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರು.

https://malenadutoday.com/drunken-driving-drive-by-shivamogga-police/
ಚಿತ್ರದ ನಾಯಕಿ ಅಧ್ವಿತಿ ಶೆಟ್ಟಿ ಮಾತನಾಡಿ ಇದು ನನ್ನ ಮೊದಲ ತುಳು ಸಿನಿಮಾ. ಈ ಸಿನಿಮಾದಲ್ಲಿ ನಾನು ವರದಿಗಾರ್ತಿಯ (ರಿಪೋರ್ಟರ್) ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಚಿತ್ರದ ಕಥೆ ಮತ್ತು ನಿರೂಪಣೆ ಅತ್ಯುತ್ತಮವಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದರು .
JAI Movie Set for Grand Release on Nov 14


