ಆರೋಗ್ಯ, ವ್ಯವಹಾರ, ಉದ್ಯೋಗ, ದಿನವಿಶೇಷ! ಇವತ್ತಿನ ದಿನಭವಿಷ್ಯ!

ajjimane ganesh

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ :  ಮಂಗಳವಾರ , ವಿಶ್ವವಸು ನಾಮ ಸಂವತ್ಸರದಲ್ಲಿ ದಕ್ಷಿಣಾಯನ ಮತ್ತು ಶರದೃತು ಕಾಲದಲ್ಲಿ ಕಾರ್ತಿಕ ಮಾಸದ ಕೃಷ್ಣ ಪಕ್ಷ. ಪುಷ್ಯ ನಕ್ಷತ್ರ. ದಿನದ ರಾಹುಕಾಲವು ಮಧ್ಯಾಹ್ನ 3:00 ರಿಂದ ಸಂಜೆ 4:30ರವರೆಗೆ ಇದ್ದು, ಯಮಗಂಡ ಕಾಲವು ಬೆಳಿಗ್ಗೆ 9:00 ರಿಂದ 10:30ರವರೆಗೆ ಇರುತ್ತದೆ. 

Work Delays  Health Issues for These Zodiac Signs into Stress Today!
Work Delays  Health Issues for These Zodiac Signs into Stress Today!

ಈ ರಾಶಿಯವರಿಗೆ ಅದೃಷ್ಟ : ಇಂದಿನ ರಾಶಿ ಭವಿಷ್ಯ: 2025 ನವೆಂಬರ್ 11ರ ದೈನಂದಿನ ಜ್ಯೋತಿಷ್ಯ ಫಲಗಳ ಸಂಪೂರ್ಣ ಮಾಹಿತಿ

ಮೇಷ : ಕೆಲಸದಲ್ಲಿ ಸ್ವಲ್ಪ ವಿಳಂಬ. ಆರ್ಥಿಕ ವಹಿವಾಟುಗಳು ಸ್ವಲ್ಪಮಟ್ಟಿಗೆ ನಿರಾಶೆಯನ್ನುಂಟು ಮಾಡುವ ಸಾಧ್ಯತೆ ಇದೆ. ಕೆಲಸದ ಒತ್ತಡಕ್ಕೆ ಒಳಗಾಗಬೇಕಾಗಬಹುದು. ದೇವರ ದರ್ಶನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಸಮಯ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಚಿಕ್ಕಪುಟ್ಟ ಅಡಚಣೆಗಳು ಇರಲಿವೆ.

ವೃಷಭ : ಹೊಸ ವ್ಯಕ್ತಿಗಳ ಪರಿಚಯ. ಶುಭ ಸಮಾಚಾರ. ಹಿಂದೆ ಇದ್ದ ವಿವಾದ ಇಂದು ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಎದುರಿಸುತ್ತಿದ್ದ ಗೊಂದಲ ನಿವಾರಣೆಯಾಗಲಿದೆ. ಆರೋಗ್ಯ ಜಾಗ್ರತೆ. 

Work Delays  Health Issues for These Zodiac Signs into Stress Today!
Work Delays  Health Issues for These Zodiac Signs into Stress Today!

ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

ಮಿಥುನ : ಪ್ರಗತಿಯು ನಿಧಾನಗತಿಯಲ್ಲಿ ಸಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ನಿರೀಕ್ಷಿತ ಫಲಿತಾಂಶ . ಅನಿರೀಕ್ಷಿತ ಪ್ರಯಾಣ ಒತ್ತಡಗಳಿಗೆ ಒಳಗಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.

ಕರ್ಕಾಟಕ : ಸಂಪರ್ಕ ಜಾಲವು ವಿಸ್ತಾರವಾಗಲಿದೆ ಮತ್ತು ಹೊಸ ಸಂಬಂಧ ಬೆಳೆಯಲಿವೆ. ಹಣಕಾಸಿನ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತದೆ. ಅಗತ್ಯ ಕೆಲಸಗಳನ್ನು ಕೈಗೆತ್ತಿಕೊಳ್ಳುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಇವತ್ತಿನ ಸಮಸ್ಯೆ ಬಗೆಹರಿಯಲಿದೆ. 

ಸಿಂಹ :  ಹಣಕಾಸಿನ ವಿಷಯಗಳು ಸ್ವಲ್ಪಮಟ್ಟಿಗೆ ನಿರಾಶಾದಾಯಕವಾಗಿರಬಹುದು. ಕೆಲಸದ ಒತ್ತಡವಿರುವುದರಿಂದ ಆಯಾಸ ಹೆಚ್ಚಬಹುದು. ಆತುರ ತೋರುವುದು ಅಷ್ಟೊಂದು ಸೂಕ್ತವಲ್ಲ. ಆಸ್ತಿ ಸಂಬಂಧಿತ ವಿವಾದ, ಭಿನ್ನಾಭಿಪ್ರಾಯಗಳು ಉದ್ಭವಿಸಬಹುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯವಾಗಿರಲಿದೆ. 

ಕನ್ಯಾ:  ಸ್ಥಾನಮಾನ ಉತ್ತಮಗೊಳ್ಳಲಿದೆ. ಆಸ್ತಿ ವ್ಯವಹಾರ ಲಾಭ ತಂದುಕೊಡಲಿದ್ದು, ಆರ್ಥಿಕ ಬೆಳವಣಿಗೆಯನ್ನು ಕಾಣುವಿರಿ. ಸಂತೋಷದ ಸಮಯವನ್ನು ಕಳೆಯುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಮಾನಸಿಕ ಒತ್ತಡಗಳಿಂದ ಮುಕ್ತಿ ಸಿಗಲಿದೆ.

ತುಲಾ : ಹೊಸ ವಿಷಯ ನಿಮಗೆ ಲಭ್ಯವಾಗಲಿವೆ. ವಿವಾದ ಇಂದು ಬಗೆಹರಿಯುವ ಸಾಧ್ಯತೆ ಇದೆ. ಶುಭ ಕಾರ್ಯಗಳಲ್ಲಿ ಅಥವಾ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ದೇವಾಲಯಗಳಿಗೆ ಭೇಟಿ. ವಾಹನ ಬಳಕೆಯಲ್ಲಿ ಗಮನವಿರಲಿ. ವ್ಯವಹಾರ ವಿಸ್ತರಣೆ, ಉದ್ಯೋಗ ಕ್ಷೇತ್ರದಲ್ಲಿ ಅತ್ಯಂತ ಅನುಕೂಲಕರವಾದ ವಾತಾವರಣ

Work Delays  Health Issues for These Zodiac Signs into Stress Today!
Work Delays  Health Issues for These Zodiac Signs into Stress Today!

ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು ಸ್ಟೇಷನ್​ನಿಂದ ಬಂತು ಪ್ರಕಟಣೆ! ಸಾಗರದಲ್ಲಿ ಮತ್ತೊಂದು ಮಿಸ್ಸಿಂಗ್ ಕೇಸ್

ವೃಶ್ಚಿಕ : ಸ್ನೇಹಿತರೊಂದಿಗೆ ಅನಗತ್ಯವಾಗಿ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ. ಗುರಿಗಳನ್ನು ಸಾಧಿಸಲುಪರಿಶ್ರಮ ಅನಿವಾರ್ಯವಾಗಿದೆ. ಮಾನಸಿಕ ಒತ್ತಡವು ಹೆಚ್ಚಾಗಬಹುದು.ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿ ಅಧಿಕ.

ಧನು  : ವಿವಾದ ಸೃಷ್ಟಿಯಾಗುವ ಸಾಧ್ಯತೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಯಶಸ್ಸನ್ನು ಪಡೆಯಲು ಕಠಿಣ ಶ್ರಮ. ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಬದಲಾವಣೆ.

ಮಕರ : ವಿದ್ಯಾರ್ಥಿಗಳಿಗೆ ಇಂದು ಹೊಸ ಭರವಸೆ ಮೂಡಲಿವೆ ಮತ್ತು ಉತ್ತಮ ಪ್ರಗತಿ ಕಾಣುವಿರಿ. ಸಮಾಜದಲ್ಲಿ ಕೀರ್ತಿ ಮತ್ತಷ್ಟು ಹೆಚ್ಚಾಗಲಿದೆ. ಸ್ನೇಹಿತರಿಂದ ಆಹ್ವಾನ ಬರಲಿದೆ.ವ್ಯವಹಾರವು ತೃಪ್ತಿ ನೀಡುವಂತಿದ್ದು, ಉದ್ಯೋಗ ಕ್ಷೇತ್ರದಲ್ಲಿ ಪರಿಸ್ಥಿತಿ ಅತ್ಯಂತ ಅನುಕೂಲಕರವಾಗಿರಲಿದೆ.

ಶಿವಮೊಗ್ಗ : ದುಮ್ಮಳ್ಳಿಯಲ್ಲಿ ಮಹಿಳೆಯ ಬರ್ಬರ ಹತ್ಯೆ! ನಡೆದಿದ್ದೇನು?

ಕುಂಭ:  ಸಂಬಂಧವು ಹೆಚ್ಚು ಆತ್ಮೀಯವಾಗಲಿದೆ. ಮನರಂಜನೆಯಲ್ಲಿ ಕಾಲ ಕಳೆಯುವಿರಿ. ಶುಭ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸುವಿರಿ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯದಿಂದ ಕೆಲಸ ಮಾಡುವಿರಿ.

ಮೀನ : ಕೈಗೊಂಡ ಕೆಲಸಗಳು ಯಶಸ್ಸು ಕಾಣಲಿದೆ.ಆಲೋಚನೆಗಳು ಗೊಂದಲಮಯವಾಗಿರಬಹುದು. ಕುಟುಂಬದ ವಾತಾವರಣದಲ್ಲಿ ಒತ್ತಡ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ತೊಂದರೆ ಎದುರಿಸಬೇಕಾಗಿ ಬರಬಹುದು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Work Delays  Health Issues for These Zodiac Signs into Stress Today!

Share This Article