ನವೆಂಬರ್ 10 2025 ಮಲೆನಾಡು ಟುಡೆ ಸುದ್ದಿ : ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿ ಯ ಸುರುಗೀತೋಪು ಬಡಾವಣೆಯ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪು ಗಳ ನಡುವೆ ಗಲಭೆ ನಡೆದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸ ಲಾಗಿದೆ. ಈ ಕುರಿತಂತೆ ದೂರು, ಪ್ರತಿ ದೂರು ಸೇರಿದಂತೆ ಒಟ್ಟು 3 ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ಗಳು ಎಲ್ಲೆಲ್ಲಿ ಇವೆ!?
ಸುರುಗಿತೋಪಿನ ಅನ್ನಪೂರ್ಣೇಶ್ವರಿ ಯುವಕರ ಸಂಘ ದೀರ್ಘಕಾಲ ಕೂರಿಸಿದ್ದ ಗಣಪತಿಯ ವಿಸರ್ಜನೆ ಕಳೆದ ಬುಧವಾರ ನಡೆಯಿತು. ಆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೂ ಹಲ್ಲೆಯಾಗಿದೆ. ಈ ಸಂಬಂಧ ಪೊಲೀಸರು ಸಾಗರ್, ಅಪ್ಪು ಯಾನೆ ಅಪ್ರೋಜ್, ಅರವಿಂದ ಎಂಬುವವರನ್ನು ಬಂಧಿಸಿದ್ದಾರೆ.
ಆದರೆ, ಅಮಾಯಕರ ಮೇಲೆ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಎ.ಅಜಿತ್ ನೇತೃತ್ವದಲ್ಲಿ ನ.6 ರಂದು ಕಾಗದ ನಗರ ಠಾಣೆ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸಲಾಯಿತು. ನಂತರ ಜೀವಿತ್ ನೀಡಿದ ದೂರಿನ ಮೇಲೆ ಸುಬ್ಬು ದರ್ಶನ್, ಲೋಹಿತ್ ಸೇರಿದಂತೆ 7 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳೆಲ್ಲಾ ಪರಾರಿ ಆಗಿದ್ದಾರೆ.

ಶರಾವತಿ ವಿಚಾರದಲ್ಲಿ ಉಗ್ರಹೋರಾಟಕ್ಕೆ ಅಣಿ! ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ
ಸುರುಗಿತೋಪಿನಲ್ಲಿ ದೀರ್ಘ ಕಾಲ ಗಣಪತಿ ಕೂರಿಸಿದ್ದು, ಇಲ್ಲಿ ಕಾಂಗ್ರೆಸ್, ಜೆಡಿಎಸ್ ಯುವಕರ ನಡುವೆ ಆಗಾಗ್ಗೆ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ. ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಹೋಯ್‌ಕೈ ನಡೆದಿತ್ತು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ದೊಡ್ಡ ಸುದ್ದಿ! ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ!
