20 ಸೆಕೆಂಡ್​ನಲ್ಲಿ ಕದ್ದು ಬಿಟ್ಟರು! ಮೂಕ ಪ್ರಾಣಿಯ ಕಳ್ಳತನಕ್ಕೆ ಮೌನ ಸಾಕ್ಷಿಯಾದ ಸಾಗರ!

ajjimane ganesh

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಗೋ ಹತ್ಯೆ ನಿಷೇಧ ಜಾರಿಯಲ್ಲಿದೆ, ಈ ಕಾಯಿದೆ ಬಗ್ಗೆ ಈಗಲೂ ನಾನಾ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಹಸುಗಳನ್ನು ಕದ್ದೊಯ್ಯುವಂತಹ ಕ್ರೂರ ಕೃತ್ಯಗಳಿಗೆ ಮಾತ್ರ ಕಡಿವಾಣ ಬೀಳಬೇಕಿದೆ. ಹಸುಗಳ್ಳತನ ಪ್ರಕರಣ ಮಲೆನಾಡಲ್ಲಿ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ, ಗೋಕಳ್ಳರ ಭಯಕ್ಕೆ ಜನರು ಹಸು ಸಾಕುವುದನ್ನೆ ಬಿಡುತ್ತಿದ್ದಾರೆ. ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದ ಕಳ್ಳತನ ಪ್ರಕರಣ ಪಶುಸಾಕಾಣಿಕೆದಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಗಳಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರಾದರೂ ಸಹ, ತಮ್ಮ ದನಕಳೆದುಕೊಂಡವರಿಗೆ ಅವರ ದನಗಳು ವಾಪಸ್ ಸಿಕ್ಕಿರಲಿಲ್ಲ. 

Cow theft  in Sagar Caught on CCTV Silence Over Cattle Smuggling Criticized
Cow theft  in Sagar Caught on CCTV Silence Over Cattle Smuggling Criticized

ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ

ಇದೀಗ ಇಂತಹುದೆ ಘಟನೆ ಸಾಗರ ತಾಲ್ಲೂಕು ನಲ್ಲಿ ನಡೆದಿದೆ. ಹಸುವನ್ನ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿಯೇ ಸೆರೆಯಾಗಿದೆ ಮತ್ತು ಸಿಸಿ ಕ್ಯಾಮರಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  ಸಾಗರ ಪೇಟೆಯಲ್ಲಿ ನಡೆದ ಘಟನೆ ಇದಾಗಿದ್ದು, ನಂಬರ್ ಪ್ಲೇಟ್ ಇಲ್ಲದ ವೆಹಿಕಲ್​ಗಳಲ್ಲಿ ಆರೋಪಿಗಳು ಹಸುವನ್ನ ಕದ್ದು ಪರಾರಿಯಾಗಿದ್ದಾರೆ. 

Cow theft  in Sagar Caught on CCTV Silence Over Cattle Smuggling Criticized
Cow theft  in Sagar Caught on CCTV Silence Over Cattle Smuggling Criticized

ಅಣಲೇಕೊಪ್ಪ ಪೋಸ್ಟ್ ಆಫೀಸ್ ಬಳಿ ಫಾರ್ಚೂನರ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಹಸುವಿಗೆ ತಿನ್ನಲು ಏನೋ ಕೊಟ್ಟು, ಬಳಿಕ ಅದನ್ನು ಕಾರಿನೊಳಗೆ ನೂಕಿ ಕದ್ದೊಯ್ದಿದ್ದಾರೆ.  ಘಟನೆ ಸಂಬಂಧ, ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

 

View this post on Instagram

 

A post shared by KA on line (@kaonlinekannada)

ಶಿವಮೊಗ್ಗ : 3 ತಿಂಗಳ ಗರ್ಭಿಣಿಯನ್ನ ಹೊರಹಾಕಿದ್ದಕ್ಕೆ, ಒಂದು ವರ್ಷ ಅಂದರ್! ಕೋರ್ಟ್​ ತೀರ್ಪು!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Cow theft  in Sagar Caught on CCTV Silence Over Cattle Smuggling Criticized

Share This Article