Copper Utensils Theft ಹಿತ್ತಲಿನ ಬಾಗಿಲಿನಿಂದ ಮನೆಯೊಳಗೆ ಬಂದು ತಾಮ್ರಮ ಹಂಡೆ ಸೇರಿಸಿದಂತೆ ವಿವಿಧ ಸಾಮಗ್ರಿಗಳನ್ನ ಕದ್ದೊಯ್ದ ಪ್ರಕರಣ ಸೊರಬ ತಾಲ್ಲೂಕಿನಲ್ಲಿ ವರದಿಯಾಗಿದೆ.
Copper Utensils Theft ನಡೆದಿದ್ದೇನು?
ದಾಖಲಾಗಿರುವ ಎಪ್ಐಆರ್ ಪ್ರಕಾರ, ಇಲ್ಲಿನ ನಿವಾಸಿಯೊಬ್ಬರು ಅಕ್ಟೋಬರ್ 29 ರಂದು ರಾತ್ರಿ ಮಲಗಿದ್ದ ವೇಳೆ, ಮನೆಯ ಹಿತ್ತಲಿನಲ್ಲಿ ಶಬ್ಧವಾಗಿದ್ದನ್ನ ಕೇಳಿ ಎಚ್ಚರಗೊಂಡಿದ್ದರು. ಅದೇ ಹೊತ್ತಿಗೆ ನಾಯಿ ಬೊಗಳಿದ್ದನ್ನ ಕೇಳಿ, ಸಂಶಯಗೊಂಡ ನಿವಾಸಿಯು ಲೈಟ್ ಆನ್ ಮಾಡಿ ಪರಿಶೀಲಿಸಿದ್ದಾರೆ. ಈ ವೇಳೆ ಬಚ್ಚಲು ಮನೆಯಲ್ಲಿ ಕಳ್ಳನೊಬ್ಬ ಕದಿಯುತ್ತಿರುವುದು ಕಾಣಿಸಿದೆ. ಆತನನ್ನು ಹಿಡಿದು ಪ್ರಶ್ನಿಸಿದಾಗ ತಾಮ್ರದ ವಸ್ತುಗಳನ್ನು ಕದ್ದಿರುವುದಾಗಿ ಹೇಳಿದ್ದ. ಅಲ್ಲದೆ ನಾಳೆ ಕದ್ದ ವಸ್ತುಗಳನ್ನು ತಂದುಕೊಂಡುವುದಾಗಿ ಹೇಳಿದ ಆರೋಪಿಯು ದೂರುದಾರರನ್ನು ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ವಸ್ತುಗಳನ್ನ ಕಳೆದುಕೊಂಡವರು, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

