ಶಿವಮೊಗ್ಗ : ಶಿವಮೊಗ್ಗದ ಪೇಪರ್ ಪ್ಯಾಕ್ಟರಿಯ ಶಾರದ ನಗರದ ಯುವತಿಯೊಬ್ಬರು ತಮ್ಮ ಸ್ಕೂಟಿಯಲ್ಲಿ ಸಂಘದ ಹಣ ಕಟ್ಟಲು ತೆರಳುತ್ತಿದ್ದ ವೇಳೆ ಕಳ್ಳನೊಬ್ಬ ಯುವತಿಯ ಬಂಗಾರದ ಸರವನ್ನು ಎಳೆದು ಕದ್ದೊಯ್ದಿದ್ದಾನೆ.
ಯುವತಿಯೊಬ್ಬರು ಧರ್ಮಸ್ಥಳ ಸಂಘದ ಹಣವನ್ನು ಕಟ್ಟಲು ಬೆಳಿಗ್ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಆವೇಳೆ ಹಿಂದಿನಿಂದ ಬೈಕ್ನಲ್ಲಿ ಬಂದ ಕಳ್ಳ ಯುವತಿಯ ಕೊರಳಲ್ಲಿದ್ದ 9 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ. ಇದರಿಂದ ಮಹಿಳೆ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದು ಏಳುವಷ್ಟರಲ್ಲಿ ಕಳ್ಳ ಸರವನ್ನು ಕದ್ದೊಯ್ದಿದ್ದಾನೆ. ಈ ಹಿನ್ನೆಲೆ ಮಹಿಳೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
Shivamogga Chain Snatching

