ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಕುಂಸಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಮತ್ತು ಮಹಿಳಾ ಒಕ್ಕೂಟದ ಕೊಠಡಿಗಳಿಗೆ ನುಗ್ಗಿರುವ ದುಷ್ಕರ್ಮಿಗಳು, ಮದ್ಯ ಸೇವಿಸಿ ಆಹಾರ ಧಾನ್ಯಗಳನ್ನು ಹಾಳು ಮಾಡಿದ್ದಾರೆ.
ದುಷ್ಕರ್ಮಿಗಳು ಮೊದಲು ಕೊಠಡಿಗಳ ಬೀಗವನ್ನು ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ಒಳಗೆ ಪ್ರವೇಶಿಸಿದ ನಂತರ, ಅವರು ಟೇಬಲ್ ಸುತ್ತಲೂ ಕುರ್ಚಿಗಳನ್ನು ಹಾಕಿಕೊಂಡು ಕುಳಿತು ಮದ್ಯಪಾನ ಮಾಡಿದ್ದು, ಸ್ಥಳದಲ್ಲಿ ಚೇರುಗಳ ಮೇಲೆ ಟವೆಲ್‌ಗಳು ಮತ್ತು ಮದ್ಯದ ಕವರ್‌ಗಳು ಪತ್ತೆಯಾಗಿವೆ.
- Advertisement -
ಇದೇ ವೇಳೆ, ಸರ್ಕಾರದಿಂದ ಅಂಗನವಾಡಿಗೆ ನೀಡಲಾಗಿದ್ದ ಆಹಾರ ಧಾನ್ಯಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾಳು ಮಾಡಿದ್ದಾರೆ. ಇದರೊಂದಿಗೆ, ಎರಡು ಟ್ರೇಗಳಷ್ಟು ಮೊಟ್ಟೆಗಳನ್ನು ಬೇಯಿಸಿ ತಿಂದು ಉಳಿದ ಆಹಾರ ಪದಾರ್ಥಗಳನ್ನು ಸಹ ಹಾಳು ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

