ಶಿವಮೊಗ್ಗ : ರೈಲಿನಲ್ಲಿ ಸಿಕ್ತು 83 ಸಾವಿರ ಮೌಲ್ಯದ ಈ ವಸ್ತು : ಪೊಲೀಸರು ಮಾಡಿದ್ದೇನು ಗೊತ್ತಾ,,?

prathapa thirthahalli
Prathapa thirthahalli - content producer

ಶಿವಮೊಗ್ಗ: ರೈಲ್ವೆ ಸಂರಕ್ಷಣಾ ಪಡೆಯ (RPF) ‘ಆಪರೇಷನ್ ಅಮನಾತ್’ ಕಾರ್ಯಕ್ರಮದ ಅಡಿಯಲ್ಲಿ, ಶಿವಮೊಗ್ಗರೈಲ್ವೆ ನಿಲ್ದಾಣದಲ್ಲಿ ಮಹತ್ವದ ಕಾರ್ಯಾಚರಣೆಯೊಂದು ನಡೆದಿದೆ.

ಮೈಸೂರು ತಾಳಗುಪ್ಪ ಎಕ್ಸ್​ಪ್ರೆಸ್​​ ರೈಲಿನ B-2 ಕೋಚ್‌ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಶ್ರವಣ ಯಂತ್ರವನ್ನು ಬಿಟ್ಟು ಹೋಗಿರುವ ಕುರಿತು RPF/ಶಿವಮೊಗ್ಗಕ್ಕೆ ರೈಲ್‌ಮದದ್ (Railmadad) ಮೂಲಕ ದೂರು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ RPF ಸಿಬ್ಬಂದಿ, ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು. ಶೋಧದ ನಂತರ, ರೈಲಿನ ಅದೇ ಕೋಚ್‌ನಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಅಂದಾಜು 83,000 ಮೌಲ್ಯದ ಶ್ರವಣ ಯಂತ್ರವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಂಡರು. ನಂತರ ಈ ಬೆಲೆಬಾಳುವ ವೈದ್ಯಕೀಯ ಉಪಕರಣವನ್ನು ಸಂಬಂಧಪಟ್ಟ ಪ್ರಯಾಣಿಕರಿಗೆ ಹಸ್ತಾಂತರಿಸಲಾಯಿತು.

- Advertisement -

Malenadu Today

http://ಬಸ್​ನಲ್ಲಿ ಸಿಕ್ಕ ಇರ್ಪಾನ್​ ಹೆಸರಿನ ಪಾರ್ಸಲ್​ನಲ್ಲಿತ್ತು 50 ಲಕ್ಷ ಕ್ಯಾಶ್​, 400 ಗ್ರಾಮ್ ಚಿನ್ನ https://malenadutoday.com/gold-and-cash-seized-from-private-bus-in-bhatkal/ via @malnadtoday

RPF Shivamogga

 

Share This Article