Dog Passes Away ಭದ್ರಾವತಿ: ನಾಯಿ ಎಂದರೇ ಹಾಗೆಯೇ ನಿಯತ್ತಿನ ಪ್ರಾಣಿ. ಒಮ್ಮೆ ತನ್ನ ಮಾಲೀಕನನ್ನು ಹಚ್ಚಿಕೊಂಡರೆ ಅವುಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಮಾಲೀಕರನ್ನು ರಕ್ಷಿಸಲು ಸಿದ್ದವಿರುತ್ತವೆ. ಹಾಗೆಯೇ ಮಾಲೀಕರಿಗೆ ಏನಾದರೂ ಹೆಚ್ಚುಕಮ್ಮಿ ಆದರೆ ಅದರಿಂದ ನೊಂದು ಕೆಲವೊಮ್ಮೆ ತನ್ನ ಪ್ರಾಣವನ್ನು ತ್ಯಾಗಮಾಡುತ್ತವೆ, ಅದಕ್ಕೆ ನಿದರ್ಶನ ಎಂಬಂತೆ ಭದ್ರಾವತಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮಾಲೀಕನ ಸಾವಿನ ಸುದ್ದಿ ತಿಳಿದು ಶ್ವಾನವೊಂದು ಸಹ ಪ್ರಾಣ ಬಿಟ್ಟಿದೆ.
ನಗರದ ಹುತಾಕಾಲನಿಯ ಜಿಂಕ್‌ಲೈನ್ ನಿವಾಸಿ ಲಾರೆನ್ಸ್ (61), ಪೈಂಟರ್ ಕೆಲಸ ಮಾಡುತ್ತಿದ್ದರು. ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಾಲ್ಕು ದಿನಗಳ ಹಿಂದೆ ನಿಧನರಾಗಿದ್ದರು. ಆಸ್ಪತ್ರೆಯಿಂದ ಮನೆಗೆ ತರಲಾದ ಲಾರೆನ್ಸ್ ಅವರ ಮೃತದೇಹವನ್ನು ಕಂಡ ಅವರ ಶ್ವಾನವು ತೀವ್ರ ನೊಂದುಕೊಂಡಿದೆ. ಮಾಲೀಕನ ಮೃತದೇಹದ ಪಕ್ಕದಲ್ಲಿಯೇ ಮಲಗಿದ ಶ್ವಾನ, ಅಲ್ಲೇ ಅಂತಿಮ ಉಸಿರೆಳೆದಿದೆ.ಗುರುವಾರ ಲಾರೆನ್ಸ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಶ್ವಾನವನ್ನು ಮನೆಯ ಹಿಂಭಾಗದಲ್ಲಿಯೇ ಹೂಳಲಾಗಿದೆ.
https://malenadutoday.com/areca-worker-dies-of-electrocution-in-basavani/
Dog Passes Away After Seeing Owner’s Demise


