ಪಿಎಂ ಕಿಸಾನ್ ಎಪಿಕೆ ಫೈಲ್ ಮೂಲಕ ವಂಚನೆ: ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಗೊತ್ತಾ..

prathapa thirthahalli
Prathapa thirthahalli - content producer

Shivamogga cyber fraud : ಶಿವಮೊಗ್ಗ: ಸರ್ಕಾರಿ ಯೋಜನೆಯಾದ ಪಿಎಂ ಕಿಸಾನ್‌ಗೆ ಸಂಬಂಧಿಸಿದೆ ಎಂದು ನಂಬಿಸಿ ಕಳುಹಿಸಲಾದ ನಕಲಿ ‘ಎಪಿಕೆ ಫೈಲ್’ ಅನ್ನು ಕ್ಲಿಕ್ ಮಾಡಿದ ಪರಿಣಾಮವಾಗಿ ಶಿವಮೊಗ್ಗ ಜಿಲ್ಲೆಯ ಸೊರಬದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 1,12,799 ಹಣವನ್ನು ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.

ದೂರುದಾರರಿಗೆ ಅಕ್ಟೋಬರ್ 15 ರಂದು ಅಪರಿಚಿತ ಸಂಖ್ಯೆಯಿಂದ ಒಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿ ‘ಪಿಎಂ ಕಿಸಾನ್ ಎಪಿಕೆ ಫೈಲ್’ ಇದ್ದುದ್ದನ್ನು ನೋಡಿದ ವ್ಯಕ್ತಿ, ಇದು ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಫೈಲ್ ಆಗಿರಬಹುದು ಎಂದು ಭಾವಿಸಿ ಅದನ್ನು ಕ್ಲಿಕ್ ಮಾಡಿದ್ದಾರೆ.

ನಂತರ, ಅಪರಿಚಿತ ವಂಚಕರು ಯಾವುದೋ ಮೂಲದಿಂದ ದೂರುದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು, ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಇದರ ಪರಿಣಾಮವಾಗಿ, ದೂರುದಾರರ ಗಮನಕ್ಕೆ ಬಾರದಂತೆ  ಹಂತ ಹಂತವಾಗಿ 1,12,799 ಹಣವನ್ನು ವಂಚನೆಯಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ವಂಚನೆಗೆ ಸಂಬಂಧಿಸಿದಂತೆ ವ್ಯಕ್ತಿಯು ಶಿವಮೊಗ್ಗದ ಸಿಇಎಮ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Shivamogga cyber fraud

Share This Article