sn channabasappa :ರಾಜ್ಯ ಸರ್ಕಾರವು ಆರ್ಎಸ್ಎಸ್ (RSS) ಮೇಲೆ ದೊಡ್ಡ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ, ಆದರೆ ಸಂಘವು ಇಂತಹ ಅನೇಕ ವಿರೋಧಗಳನ್ನು ಎದುರಿಸುತ್ತಾ ಬಂದಿದೆ. ಸಂಘಕ್ಕೆ ಕೊಡಲಿ ಪೆಟ್ಟು ಕೊಡಬಹುದೇ ಹೊರತು ಅದನ್ನು ನಿಷೇಧಿಸಲು ಅಥವಾ ಮುಚ್ಚಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಕೆಲವು ಸಚಿವರು ಅಧಿಕಾರವಿದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ.ಆರ್ಎಸ್ಎಸ್ ಅನ್ನು ಬ್ಯಾನ್ ಮಾಡುತ್ತೇನೆ ಎಂದು ಹೇಳಲು ಮೊದಲು ತಾಕತ್ತು ಬೇಕು. ನಮ್ಮ ಆರ್ಎಸ್ಎಸ್ ಸಂಘವು ಸಮಾಜದೊಳಗೆ ವಿಲೀನವಾಗಿದೆ. ಗುರೂಜಿ (ಗುರೂಜಿ ಗೋಳವಲ್ಕರ್) ಅವರು, ಆರ್ಎಸ್ಎಸ್ ಯೋಚನೆಗಳು ನಿಲ್ಲುವುದು ಯಾವಾಗ ಎಂದು ಕೇಳಿದಾಗ, ಸಮಾಜದೊಳಗೆ ವಿಲೀನವಾದಾಗ ಎಂದು ಹೇಳಿದ್ದರು ಅಧಿಕಾರ ಸಿಕ್ಕಿದೆ ಎಂದು ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳಲು ಆಗುವುದಿಲ್ಲ. ಸಂಘದ ಕಾರ್ಯವನ್ನು ಯಾರೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ ಎಂದರು
sn channabasappa ರಾಜ್ಯ ಸರ್ಕಾರ ಸರ್ಕಾರಿ ಜಾಗಗಳನ್ನು ಗುರುತಿಸುತ್ತಿರುವುದನ್ನು ನೋಡಿದರೆ, ಮುಂದೆ ಅವುಗಳನ್ನು ವಕ್ಫ್ ಬೋರ್ಡ್ಗೆ ಬರೆದುಕೊಡಲು ಬರುತ್ತಾರೆ ಎಂದು ಅನಿಸುತ್ತಿದೆ. ಸಂಘದ ಶಾಖೆ ಕೇವಲ ಒಂದು ಗಂಟೆಯ ಕಾಲ ನಡೆಯುತ್ತದೆ, ಇಂದು ಕುತಂತ್ರದ ಮೂಲಕ ಏನೋ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ವೈಚಾರಿಕವಾಗಿ ನಮ್ಮನ್ನು ವಿರೋಧ ಮಾಡುತ್ತಿದೆ, ಆದರೆ ನಮಗೆ ಸಂವಿಧಾನವಿದೆ, ಅದು ಸ್ವಾತಂತ್ರ್ಯ ಕೊಟ್ಟಿದೆ. ಅದರ ವ್ಯಾಪ್ತಿಯಲ್ಲಿ ನೀವು ಈ ರೀತಿ ಮಾಡದಿರುವುದು ತಪ್ಪು ಎಂದರು
ಇನ್ನೂ RSS ನೊಂದಣೆ ಬಗ್ಗೆ ಮಾತನಡಿದ ಅವರು ಸಮಾಜಮುಖಿ ಕಾರ್ಯ ಮಾಡುತ್ತಿರುವಾಗ ಯಾರದ್ದೇ ಒಪ್ಪಿಗೆ ಬೇಕಾಗಿಲ್ಲ. ಸಂಘವು ಸಂವಿಧಾನಬದ್ಧವಾಗಿ ಎಲ್ಲಾ ಕಾರ್ಯವನ್ನು ಮಾಡುತ್ತಿದೆ. ಆದರೆ, ಸಂಘದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನೂರು ವರ್ಷ ಆದ ಮೇಲೆ ಅವರಿಗೆ ಸಂಘದ ನೋಂದಣಿ ಬಗ್ಗೆ ನೆನಪಾಗಿದೆ. ಯಾರೇ ಏನೇ ಮಾಡಿದರೂ, ಈ ‘ಅನಿಷ್ಟತನದ’ ಮಾತನ್ನು ಕಾಂಗ್ರೆಸ್ ಬಿಡಬೇಕು. ನೆಹರೂ ಕಾಲದಿಂದಲೂ ಆರ್ಎಸ್ಎಸ್ ಬಗ್ಗೆ ಷಡ್ಯಂತ್ರ ಮಾಡುತ್ತಿದ್ದಾರೆ. ಅವರಿಂದ ಆಗದ ಕೆಲಸ ಇವರಿಂದ ಎಲ್ಲಿ ಸಾಧ್ಯ?” ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶಾಖೆ ಮಾಡಲು ಅನುಮತಿ ಪಡೆಯಲು ಹೇಳಿದ್ದಾರೆ. ಸಂಘದ ನೀತಿ-ನಿಯಮಗಳನ್ನು ಅನುಸರಿಸುವಷ್ಟು ಕಾಂಗ್ರೆಸ್ನವರು ಅನುಸರಿಸಿಲ್ಲ. ನಾವು ಯಾವ ಜಾಗವನ್ನು ಸಂಘಕ್ಕೆ ಬರೆದುಕೊಡಿ ಎಂದು ಕೇಳಿಲ್ಲ. ಸರ್ಕಾರಿ ಜಾಗದಲ್ಲಿ ನಮಾಜ್ ಮಾಡಬಹುದು, ಆದರೆ ಶಾಖೆ ಮಾಡುವ ಹಾಗಿಲ್ಲ ಎಂದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
sn channabasappa


