ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025: ಬೈಕ್ ಸವಾರನೊಬ್ಬನಿಗೆ ಕಪಾಲಕ್ಕೆ ಹೊಡೆದ ಸಂಚಾರಿ ಪೊಲೀಸ್ ಸಿಬ್ಬಂದಿಯ ವಿರುದ್ಧ ಇವತ್ತು ಸೋಶಿಯಲ್ ಮೀಡಿಯಾ ಗರಂ ಆಗಿದೆ. ಇದ್ಯಾವ ನ್ಯಾಯ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪ್ರದರ್ಶಿಸಿ ಜನ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಇದೊಂದು ಹೀನಾಯ ವರ್ತನೆ ಅಂತಾ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ ನಂತರ ಮೆಗ್ಗಾನ್ ನಲ್ಲಿ ಸಿಗತ್ತೆ ಈ ಸೌಲಭ್ಯ! ಆಯುಷ್ಮಾನ್ ಕಾರ್ಡ್ಗೂ ಓಕೆ
ನಮ್ಮ ಬೆಂಗಳೂರು ಘಟನೆ
ಅಂದಹಾಘೆ, ಈ ಘಟನೆ ಬೆಂಗಳೂರುನಲ್ಲಿ ನಡೆದಿದ್ದು, ಸಿಲ್ಕ್ಬೋರ್ಡ್ ಸರ್ಕಲ್ ನಲ್ಲಿ ಸಂಚಾರಿ ನಿಯಮಗಳನ್ನ ಪರಿಶೀಲಿಸುವ ಸಂದರ್ಭದಲ್ಲಿ ಬೈಕ್ ಸವಾರನೊಬ್ಬನನ್ನು ಇಲ್ಲಿನ ಸಂಚಾರಿ ಪೊಲೀಶ್ ಸಿಬ್ಬಂದಿ ತಡೆದು ದಾಖಲಾತಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಯಾವ ಕಾರಣಕ್ಕೆ ಏನು ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ದ್ವಿಚಕ್ರ ವಾಹನ ಸವಾರನೊಂದಿಗೆ ವಾಗ್ವಾದ ನಡೆಸಿದ ಸಿಬ್ಬಂದಿ ಎರಡು ಭಾರಿ ಬೈಕ್ ಸವಾರನಿಗೆ ಕಪಾಳಕ್ಕೆ ಹೊಡೆಯುತ್ತಾನೆ. ಇದರಿಂದ ತಾಳ್ಮೆ ಕಳೆದುಕೊಳ್ಳುವ ಬೈಕ್ ಸವಾರ, ಕಣ್ಣೀರು ಹಾಕುತ್ತಾ ಕಿರುಚಾಡುತ್ತಾನೆ.

ಜಾಗ ಖರೀದಿಸುವಾಗ ಜಾಗ್ರತೆ ವಹಿಸಿ! ಭದ್ರಾವತಿಯಲ್ಲಿ ಜಾಗ ಖರೀದಿಸಿದ ಬೆಂಗಳೂರು ಇಂಜಿಯರ್ಗೆ 20 ಲಕ್ಷ ವಂಚನೆ
Bengaluru Traffic Cops Shocking Assault on Biker Captured on Video!
ಗೌರವ ಅನ್ನುವುದು ಕೊಟ್ಟು ತೆಗೆದುಕೊಳ್ಳುವ ವಿಚಾರ. ಈ ವಿಡಿಯೋದಲ್ಲಿ ಬೈಕ್ ಸವಾರ ಪೊಲೀಸ್ ಸಿಬ್ಬಂದಿ ಕೊಡಬೇಕಾದ ಗೌರವವನ್ನೆ ನೀಡಿದ್ದಾನೆ. ತನ್ನ ಸಿಟ್ಟನ್ನು ಆತ ಕಣ್ಣೀರು ಹಾಕುತ್ತಾ ಕಳೆದುಕೊಂಡಿದ್ದಾನೆ ಹೊರತು, ತನ್ನ ವಿವೇಕ ಕಳೆದುಕೊಂಡಿಲ್ಲ. ಆದರೆ ಸಂಚಾರಿ ಪೊಲೀಸ್ ಸಿಬ್ಬಂದಿ ತನ್ನ ಅಧಿಕಾರವನ್ನು ಕಪಾಳಕ್ಕೆ ಹೊಡೆಯಲು ಬಳಸಿದ್ದು ಸರಿಯಲ್ಲ ಎನ್ನುವುದು ಸಾಮಾಜಿಕ ಜಾಲತಾಣಿಗರ ವಾದ . ಇದಕ್ಕೆ ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police) ವಿಭಾಗ ಯಾವ ಉತ್ತರವನ್ನು ನೀಡುತ್ತದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಬೆಂಗಳೂರು – ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ವಿಚಾರದಲ್ಲಿ ಸಂಸದರು ಕೊಟ್ರು ಗುಡ್ ನ್ಯೂಸ್
Bengaluru Traffic Cops Shocking Assault on Biker Captured on Video!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

