ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4 2025: ಸಾಮಾನ್ಯವಾಗಿ ಅಣೆಕಟ್ಟಿನ ಪ್ರದೇಶದಲ್ಲಿ ಯಾರಿಗೂ ಎಂಟ್ರಿ ಇರೊದಿಲ್ಲ. ತೀರಾ ಅನಿವಾರ್ಯ ಇದ್ದಲ್ಲಿ ಪರ್ಮಿಶನ್ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಶಿವಮೊಗ್ಗದ ತುಂಗಾಡ್ಯಾಮ್ನಲ್ಲಿ ಇದೇ ಕಾರಣಕ್ಕೆ ಬಡಪಾಯಿ ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ ಆತನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುವ ಪ್ರಯತ್ನ ಸಹ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇನ್ನೊಂದೆಡೆ ಇದೇ ವಿಚಾರದಲ್ಲಿ ಸ್ಥಳೀಯರು ಹಲ್ಲೆ ಮಾಡಿ , ತಮ್ಮ ಕಾರನ್ನು ಜಖಂಗೊಳಿಸಿದ್ಧಾರೆ ಎಂದು ಎದುರು ದೂರು ಸಹ ನೀಡಲಾಗಿದ್ದು, ಈ ಕುರಿತಾಗಿಯು ಎಫ್ಐಆರ್ ಆಗಿದೆ.tunga Dam Security Guard

ನಡೆದಿದ್ದೆನು?
ಅಕ್ಟೋಬರ್ 1 ನೇ ತಾರೀಖು, ಸಂಜೆ 5.30, ತುಂಗಾಡ್ಯಾಂನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ನ ಬಳಿಗೆ ಬಂದು ಅಪರಿಚಿತರು, ತಾವು ಡ್ಯಾಮ್ ನೋಡಬೇಕು ಎಂದು ಹೇಳಿದ್ದಾರೆ. ಈ ವೇಳೆ ಸೆಕ್ಯುರಿಟಿ ಗಾರ್ಡ್ ಎಇಇ ಹೇಳಿದರೆ ಬಿಡುತ್ತೇನೆ ಎಂದಿದ್ದಾರೆ. ಆಗ ಆರೋಪಿಗಳು ಎಇಇ ಅವರಿಂದ ಹೇಳಿಸಿದ್ದಾರೆ. ಹಾಗಾಗಿ ಡ್ಯಾಮ್ನೊಳಗೆ ಬಿಡಲು ಸೆಕ್ಯುರಿಟಿ ಗಾರ್ಡ್ ಮುಂದಾಗಿದ್ದಾರೆ. ಈ ವೇಳೆ ಸುಮ್ಮನೆ ಒಳಗಡೆ ಹೋಗುವುದು ಬಿಟ್ಟು ಆರೋಪಿಗಳು ಸೆಕ್ಯುರಿಟಿ ಗಾರ್ಡ್ನ್ನ ನಿಂದಿಸಿ ಆತನ ಮೇಲೆ ಮನಸ್ಸೋ ಇಚ್ಚೇ ಹಲ್ಲೆ ಮಾಡಿದ್ಧಾರೆ. ಅಲ್ಲದೆ 49 ವರ್ಷದ ವ್ಯಕ್ತಿಯನ್ನು ಕಾರಿನಲ್ಲಿ ಹಾಕಿಕೊಂಡು ಥಳಿಸಿದ್ದಾರೆ. ಅದೃಷ್ಟಕ್ಕೆ ಸ್ಥಳೀಯರು ಕಾರಿಗೆ ಅಡ್ಡಬಂದು, ಸೆಕ್ಯುರಿಟಿ ಗಾರ್ಡ್ನ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಎಸ್ಕೇಪ್ ಆಗಿದ್ದು, ಓರ್ವ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ಮಾಡಿದ್ದು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.
ಇನ್ನೊಂದು ದೂರಿನಲ್ಲಿ ಏನಿದೆ
ಇನ್ಹೋವಾ ಕಾರಿನ ಚಾಲಕ ಈ ಸಂಬಂಧ ದೂರು ನೀಡಿದ್ದು, ಆತನ ಪ್ರಕಾರ, ಚಾಲಕ ಹಾಗೂ ಆತನ ಪರಿಚಯಸ್ಥರು ತುಂಗಾ ಡ್ಯಾಂ ನೋಡಲು ಬಂದಿದ್ದರು. ಡ್ಯಾಮ್ನ ಗೇಟ್ ಬಳಿ ಬಂದು ವಾಪಸ್ ಹೋಗುವಾಗ ಅಲ್ಲಿದ್ದವರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ಮಾಡಿದ್ದಲ್ಲದೆ, ಇಲ್ಲಿಗೇಕೆ ಬಂದಿರಿ ಎಂದು ಹೊಡೆದು ಕಾರನ್ನು ಜಖಂಗೊಳಿಸಿದರು ಎಂದು ದೂರಲಾಗಿದೆ. ಈ ಕುರಿತಾಗಿಯು ಎಫ್ಐಆರ್ ಆಗಿದ್ದು THE BHARATIYA NYAYA SANHITA (BNS), 2023(U/s-352,115(2),118(1),324(2),190) ಅಡಿಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಎರಡು ದೂರು ದಾಖಲಿಸಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
tunga Dam Security Guard Assaulted Over Entry Dispute
ತುಂಗಾ ಡ್ಯಾಂ ಹಲ್ಲೆ, ಭದ್ರತಾ ಸಿಬ್ಬಂದಿ ಮೇಲೆ ದಾಳಿ, ಅಪಹರಣ ಯತ್ನ, ಇನ್ನೋವಾ ಕಾರ್ ಅಪರಾಧ, ತುಂಗಾ ಪೊಲೀಸ್ ಠಾಣೆ, ಅರುಣ್ ಬಂಧನ, ಬಿಎನ್ಎಸ್ 2023, ತುಂಗಾ ಡ್ಯಾಂ ಭದ್ರತಾ ನಿಯಮ, ಎಫ್ಐಆರ್ ಮಾಹಿತಿ, ಮಲೆನಾಡು ಟುಡೆ ಸುದ್ದಿ, ತುಂಗಾ ಪೊಲೀಸ್ ಠಾಣೆ, ಕೆಎನ್ಎನ್ಎಲ್ ಸೆಕ್ಯೂರಿಟಿ, ತುಂಗಾ ಜಲಾಶಯ, Tunga Dam attack, security guard assault, abduction attempt, Innova car crime, Arun arrested, BNS 2023 FIR, Tunga police station, tunga Dam Security Guard
ಇದನ್ನು ಸಹ ಓದಿ : ಸಿನಿಮಾ ಟಿಕೆಟ್ ಎಸೆಯದಿರಿ ದುಡ್ಡು ವಾಪಸ್ ಬರಬಹುದು, ಇ-ಪೇಪರ್ ಓದಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!