Shivamogga Police Complaint : ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4 2025: ಶಿವಮೊಗ್ಗ ಸೊಕ್ಕಿನವರ ಬೀಡಾಗುತ್ತಿದೆಯೇ ಎಂಬ ಪ್ರಶ್ನೆಗೆ ಉದಾಹರಣೆ ಎಂಬಂತಹ ಘಟನೆಯೊಂದು ಅಬ್ಬಲಗೆರೆಯಲ್ಲಿ ನಡೆದಿದೆ. ಅಬ್ಬಲಗೆರೆಯ ಬಸ್ಸ್ಟ್ಯಾಂಡ್ ಬಳಿಯಲ್ಲಿ ಒಂದಿಷ್ಟು ಮಂದಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಷ್ಟೆ ಅಲ್ಲದೆ ಜನರಿಗೆ ಕಿರಿಕಿರಿ ಉಂಟುಮಾಡಿದ್ದು, ಪ್ರಶ್ನಿಸಿದ ಯುವಕನೊಬ್ಬನಿಗೆ ಹೊಡೆದು ಆತನ ಬೈಕ್ ಮೇಲೆ ಪದೆಪದೇ ಕಾರು ಹತ್ತಿಸಿ ಜಖಂಗೊಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಡುವುದು ಶುದ್ಧ ಕಾನೂನು ಉಲ್ಲಂಘನೆ.ಆದಾಗ್ಯು ಘಟನೆ ವೈಯಕ್ತಿಕ ವಿಚಾರದ ಗಲಾಟೆಯಾಗಿ ಎಫ್ಐಆರ್ನೊಂದಿಗೆ ತಾರ್ಕಿಕ ಅಂತ್ಯ ಕಂಡಿದೆ.
ಶಿವಮೊಗ್ಗ ನಗರದ ಬೀಟ್ ವ್ಯವಸ್ಥೆಯಿದ್ದರೂ, ಹಲವೆಡೆ ನಶೆ ಆಸಾಮಿಗಳ ಹಾವಳಿಗಳು ತೀವ್ರವಾಗಿದೆ. 28 ರಂದು ಅಬ್ಬಲಗೆರೆಯಲ್ಲಿ ನಡೆದ ಘಟನೆಯಲ್ಲಿಯು ಸಹ ಆರೋಪಿಗಳು ನಶೆಯಲ್ಲಿದ್ದರು ಎಂದು ಸ್ಥಳೀಯರು ದೂರಿದ್ದಾರೆ.ಮೇಲಾಗಿ ದುಡ್ಡಿನ ದರ್ಪ ತೋರುವಂತೆ ಬೈಕ್ವೊಂದರ ಮೇಲೆ ಪದೇ ಪದೇ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾರೆ. ಯುವಕನೊಬ್ಬನಿಗೆ ಥಳಿಸಿದ್ದಷ್ಟೆ ಅಲ್ಲದೆ, ಜಗಳ ಬಿಡಿಸಲು ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಘಟನೆಯಾಗಿರದೇ ನಾಗರಿಕ ಸಮಾಜಕ್ಕೆ ಆಘಾತ ಮೂಡಿಸುವ ಘಟನೆಯಾಗಿದೆ.
ತಪ್ಪು ಮಾಡಿದವರ ವಿರುದ್ದ ಎಫ್ಐಆರ್ ಹಾಕಿದಾಕ್ಷಣಕ್ಕೆ ಸಮಸ್ಯೆಗಳು ಪರಿಹಾರ ಕಾಣುವುದಿಲ್ಲ. ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನೂ ಶಿವಮೊಗ್ಗದಲ್ಲಿ ಪ್ರತಿನಿತ್ಯ ಇಂತಹ ಘಟನೆಗಳು ನಡೆಯುತ್ತಿವೆಯಾದರೂ ವರದಿಯಾಗುತ್ತಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಮನಿಸಬೇಕಿದೆ.
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga Police Complaint

