SIMS McGann Hospital ಶಿವಮೊಗ್ಗ ನಗರದಲ್ಲಿರುವ ಸಿಮ್ಸ್ (SIMS) ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏಜೆನ್ಸಿಯ ವ್ಯವಸ್ಥಾಪಕರೊಬ್ಬರು ಶಿವಮೊಗ್ಗ ಗ್ರಾಮಾಂತರದ ಹಿರಿಯ ಶಾಸಕಿ ಶಾರದಾ ಪೂರ್ಯನಾಯ್ಕ್‌ಗೆ ರವರಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಏಜೆನ್ಸಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಸಂಸ್ಥೆಯಿಂದ ಅವರನ್ನು ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷ ಕಾರ್ಯಕರ್ತರು ಇಂದು ಮೆಗ್ಗಾನ್ ಆಸ್ಪತ್ರೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
SIMS McGann Hospital
ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಸೆಪ್ಟೆಂಬರ್ 27, ರಂದು ಮಧ್ಯಾಹ್ನ 12:30ಕ್ಕೆ ಕೆ.ಎಸ್.ಎಫ್9 ಕಾರ್ಪೊರೇಟ್ ಸರ್ವಿಸ್‌ನ ಸ್ಥಳೀಯ ವ್ಯವಸ್ಥಾಪಕ ಸತೀಶ್ ಎಂಬುವವರಿಗೆ ದೂರವಾಣಿ ಕರೆ ಮಾಡಿ, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಅನವಶ್ಯಕವಾಗಿ ತೊಂದರೆ ನೀಡುತ್ತಿರುವ ಬಗ್ಗೆ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ, ಸತೀಶ್ ಅವರು ಏರುಧ್ವನಿಯಲ್ಲಿ ಮತ್ತು ಏಕವಚನದಲ್ಲಿ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಕರೆಯಲ್ಲಿ ಸತೀಶ್ ಅವರು ಮಹಿಳಾ ಶಾಸಕಿಯೆಂದು ಪರಿಗಣಿಸದೆ, ಅನಾವಶ್ಯಕವಾಗಿ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ ಸತೀಶ್ ಮೇಲೆ ಮೇಲೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಆತನನ್ನು ಸಂಸ್ಥೆಯಿಂದ ಕೈಬಿಡಬೇಕು ಎಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ನಿರ್ದೇಶಕರನ್ನು ಜೆಡಿಎಸ್ ಪಕ್ಷ ಒತ್ತಾಯಿಸಿದೆ. ಒಂದು ವೇಳೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅಥವಾ ಆ ಸಂಸ್ಥೆಯನ್ನು ಕೈಬಿಡದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.


