ಜಾತಿಗಣತಿ : ಶಿಕ್ಷಕರಿಗೆ ಸವಾಲಾದ ಟೆಕ್ನಿಕಲ್​ ಏರರ್​! ಸಿಗುವುದೆ ಪರಿಹಾರ?

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 25 2025 :  ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತಿಗಣತಿಯಲ್ಲಿ ಪಾಲ್ಗೊಂಡಿರುವ ಶಿಕ್ಷಕರಿಗೆ ನಾನಾ ಸಮಸ್ಯೆಗಳು ಎದುರಾಗುತ್ತಿದೆ. ಮೇಲಾಗಿ ಟೆಕ್ನಿಕಲ್​ ಎರರ್​ನಿಂದ ಶಿಕ್ಷಕರು ಸರ್ವೆಗೆ ಹೋಗಲಾಗುತ್ತಿಲ್ಲ. ಈ ಬಗ್ಗೆ ಮಲೆನಾಡುಟುಡೆಗೆ ಹಲವು ಶಿಕ್ಷಕರು ಕರೆ ಮಾಡಿದ್ದು ತಮಗಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಗೌಪ್ಯವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. 

ಶಿಕ್ಷಕರು ನೀಡಿರುವ ಮಾಹಿತಿ ಪ್ರಕಾರ, ಗಣತಿಗೆ ಸಂಬಂಧಿಸಿದ ಕಿಟ್​ ಸಹ ಎಲ್ಲರಿಗೂ ಪೂರೈಕೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಾತಿಗಣತಿಗೆ ಕೊನೆಗಳಿಗೆಯಲ್ಲಿ ಹೈಸ್ಕೂಲ್​ ಶಿಕ್ಷಕರಿಗೆ ಕರೆ ಮಾಡಿದ್ದ ಅಧಿಕಾರಿಗಳು, ಮರುದಿನ ತರಬೇತಿಗೆ ಬರುವಂತೆ ಸೂಚಿಸಿತ್ತು. ಮರುದಿನ ತರಬೇತಿಯ ವೇಳೆ ಹಲವರಿಗೆ  ಕಿಟ್ ಸಿಕ್ಕಿಲ್ಲ ಎಂಬ ಆರೋಪ ಶಿಕ್ಷಕರದ್ದಾಗಿದೆ. ದೃಢೀಕರಣದ ಪೇಪರ್​ ನೀಡಿ ಅದನ್ನೆ ಜೆರಾಕ್ಸ್​ ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. 

ಇದೊಂದು ಕಡೆಯಾದರೆ, ಜಾತಿಗಣತಿಗೆ ಸಂಬಂಧಿಸಿದ ಆಪ್ ಕೈಕೊಡುತ್ತಿದ್ದು, ಅದರಿಂದಾಗಿಯೇ ಜಾತಿಗಣತಿಯನ್ನು ಸೂಕ್ತವಾಗಿ ನಡೆಸಲು ಆಗುತ್ತಿಲ್ಲ ಎಂದು ಗಣತಿಯಲ್ಲಿ ಪಾಲ್ಗೊಂಡವರು ಆರೋಪಿಸಿದ್ದಾರೆ. ಐಫೋನ್ ಗಳಿಗೆ ಆಪ್ ಡೌನ್​ಲೌಡ್ ಆಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಬೇರೆ ಮೊಬೈಲ್​ ಬಳಸಿ ಎನ್ನುತ್ತಿದ್ದಾರೆ. ಇದು ಸಹ ಗಣತಿಯಲ್ಲಿ ಪಾಲ್ಗೊಂಡವರಿಗೆ ಗೊಂದಲ ಮೂಡಿಸುತ್ತಿದೆ. ಇನ್ನೂ ಆಪ್ ಡೌನ್​ಲೋಡ್ ಆದ ಆಂಡ್ರಾಯಿಡ್ ಮೊಬೈಲ್​ಗಳಲ್ಲಿ ಆಪ್ ಎರರ್​ ತೋರಿಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. 

ಇವೆಲ್ಲದರ ನಡುವೆ ಆಪ್​ ಡೌನ್​ಲೋಡ್​ ಆಗದೆ, ಡೌನ್​ಲೋಡ್ ಆದರೂ ಎರರ್ ಎಂದು ಬರುತ್ತಿರುವ ಮೆಸೇಜ್​ಗಳಿಂದಾಗಿ ಗಣತಿದಾರರು ಯಾವ ಏರಿಯಾಕ್ಕೆ ಸರ್ವೆಗೆ ಹೋಗಬೇಕು ಎಂದು ಗೊತ್ತಾಗದೇ ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಆಪ್​ನಲ್ಲಿ ತೋರುವ ಪ್ರದೇಶದಲ್ಲಿಯೇ ಗಣತಿದಾರರು ಸಮೀಕ್ಷೆಗೆ ಹೋಗಬೇಕು. ಟೆಕ್ನಿಕಲ್​ ಸಮಸ್ಯೆಯಿಂದಾಗಿ ನಾವು ಹೋಗಲಾಗುತ್ತಿಲ್ಲ ಎಂಬುದು ಗಣತಿಗೆ ತೆರಳಲು ಸಿದ್ಧವಾಗಿರುವ ಶಿಕ್ಷಕರ ಅಭಿಪ್ರಾಯವಾಗಿದೆ

ಇನ್ನೂ ಪ್ರತಿ 15 ಶಿಕ್ಷಕರಿಗೆ ಒಬ್ಬ ಸೂಪರ್​ವೈಸರ್ ನೇಮಕವಾಗಬಹುದು. ಸದ್ಯ ಆ ಕೆಲಸ ಇನ್ನೂ ಆಗಿಲ್ಲ ಎನ್ನುವುದು ಗಣತಿದಾರರ ಆಕ್ಷೇಪವಾಗಿದೆ. ಸರ್ವೆಗೆ ಹೋಗಿ ಎನ್ನುತ್ತಾರೆ. ಆದರೆ ಸರ್ವೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಯಾರನ್ನು ಸಂಪರ್ಕಿಸಬೇಕು. ಯಾರ ಸಲಹೆಯನ್ನು ಪಡೆಯಬೇಕು ಎಂಬಿತ್ಯಾದಿ ವಿವರಗಳು ಲಭ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. 

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಪಲನೀಡಲಿಲ್ಲ. ಒಟ್ಟಾರೆ ಜಾತಿಗಣತಿಯ ವಿಚಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದು, ಆದಷ್ಟು ಬೇಗ ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳನ್ನು ಸರಿಪಡಿಸಬೇಕಿದೆ.

Caste Census in Shivamogga Faces Technical Glitches,

Share This Article