Dasara Mahotsava Inauguration ಶಿವಮೊಗ್ಗ : ಈ ವರ್ಷದ 43ನೇ ದಸರಾ ಮಹೋತ್ಸವವನ್ನು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಹತ್ತು ದಿನಗಳ ಕಾಲ ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಿವಮೊಗ್ಗ ಶಾಸಕ ಎಸ್.ಎನ್. ಚೆನ್ನಬಸಪ್ಪ ತಿಳಿಸಿದ್ದಾರೆ. ಅಕ್ಟೋಬರ್ 2ರಂದು ನಡೆಯುವ ಆನೆ ಅಂಬಾರಿ ಮೆರವಣಿಗೆಯೊಂದಿಗೆ ದಸರಾ ಮುಕ್ತಾಯಗೊಳ್ಳಲಿದೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಶ್ರೀ ರುದ್ರರೂಪಿಣಿ ಮಹಾಂಕಾಳಿ ದುರ್ಗಾಕುಮಾರಿ ಕಾರ್ಣೀಕೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ವಿನೋಬನಗರದಲ್ಲಿರುವ ದೇವಾಲಯ ಆವರಣದಲ್ಲಿ ದಸರಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ 26ನೇ ವರ್ಷದ ಉತ್ಸವದ ಅಂಗವಾಗಿ ರಜತ ಕವಚವು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಸೆಪ್ಟೆಂಬರ್ 29ರಂದು ಚಂಡಿಕಾ ಹೋಮ ಪೂಜೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನೆರವೇರಲಿದೆ. ಆದಿಚುಂಚನಗಿರಿ ಪೀಠದ ಪ್ರಸನ್ನನಾಥ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
Dasara Mahotsava Inauguration ದಸರಾ ಉದ್ಘಾಟನೆ ಮತ್ತು ಗಣ್ಯರು
ಈ ಬಾರಿಯ ದಸರಾ ಉದ್ಘಾಟನಾ ಕಾರ್ಯಕ್ರಮವು ಸೆಪ್ಟೆಂಬರ್ 22ರಂದು ಬೆಳಿಗ್ಗೆ ನಡೆಯಲಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ದಸರಾಕ್ಕೆ ಚಾಲನೆ ನೀಡಲಿದ್ದಾರೆ. ದೇಶದ ಸೈನ್ಯಕ್ಕೆ ಶಕ್ತಿ ತುಂಬಿದ ಹಾಗೂ ಯುವಕರಿಗೆ ಸೇನೆ ಸೇರುವಂತೆ ಪ್ರೇರೇಪಿಸಿದ ಸೋಮಶೇಖರ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಶಾಸಕರು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕರು, ಸಚಿವರು, ಸಂಸದರು ಮತ್ತು ವಿವಿಧ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಮತ್ತು ಸಚಿವ ಮಧು ಬಂಗಾರಪ್ಪ ಅವರು ದಸರಾ ಮಹೋತ್ಸವದಲ್ಲಿ ಇರಲಿದ್ದಾರೆ.
Dasara Mahotsava Inauguration ವಿವಿಧ ಸಮಿತಿಗಳು ಮತ್ತು ಕಾರ್ಯಕ್ರಮಗಳ ವಿವರ
ದಸರಾ ಯಶಸ್ವಿಗಾಗಿ 14 ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ, ಸಾಂಸ್ಕೃತಿಕ ದಸರಾ, ಕಲಾ ದಸರಾ, ಪತ್ರಿಕಾ ದಸರಾ, ಪೌರಕಾರ್ಮಿಕರ ದಸರಾ, ರಂಗ ದಸರಾ ಮತ್ತು ಜ್ಞಾನ ದಸರಾ ಸೇರಿವೆ. ಈ ಸಮಿತಿಗಳು ಕಳೆದ ಎರಡು ತಿಂಗಳಿಂದ ಸಿದ್ಧತೆಗಳನ್ನು ನಡೆಸುತ್ತಿವೆ. ನೃತ್ಯ, ಸಂಗೀತ, ನಾಟಕ ಮತ್ತು ಸ್ಥಳೀಯ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗಾಗಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳು, ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟಗಳು ಮತ್ತು ರಂಗ ದಸರಾ ಮೂಲಕ ಹೊಸ ಕಲಾವಿದರನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ.
Dasara Mahotsava Inauguration ದಸರಾ ಕಾರ್ಯಕ್ರಮಗಳ ವಿವರ:
ಸೆಪ್ಟೆಂಬರ್ 22, 2025:ಬೆಳಿಗ್ಗೆ 9ಕ್ಕೆ – ಕುವೆಂಪು ರಂಗಮಂದಿರ: ಮಕ್ಕಳ ದಸರಾ ಮತ್ತು ಕ್ರೀಡಾಕೂಟ. ರಾಷ್ಟ್ರೀಯ ಸ್ಕೇಟಿಂಗ್ ವಿಜೇತರಾದ ಆದ್ವಿಕಾ ನಾಯರ್ ಮತ್ತು ಹಿತ ಪ್ರವೀಣ್ ಅವರಿಂದ ಚಾಲನೆ.ಸಂಜೆ 6ಕ್ಕೆ – ಕುವೆಂಪು ರಂಗಮಂದಿರ: ಯುವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ. ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ.
Dasara Mahotsava Inauguration ಸೆಪ್ಟೆಂಬರ್ 23, 2025:ಬೆಳಿಗ್ಗೆ 9ಕ್ಕೆ – ನಗರದ ವಿವಿಧೆಡೆ: ಮಕ್ಕಳ ಜಾಥಾ. ಅಂತಾರಾಷ್ಟ್ರೀಯ ನೃತ್ಯಗಾರ್ತಿ ಮತ್ತು ಈಜುಗಾರ್ತಿ ಋತು ಸ್ಪರ್ಷ ಅವರಿಂದ ಉದ್ಘಾಟನೆ.ಸಂಜೆ 5ರಿಂದ – ಡಾ. ಅಂಬೇಡ್ಕರ್ ಭವನ: ಮಕ್ಕಳ ದಸರಾ ಸಮಾರೋಪ. ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಅವರಿಂದ ಉದ್ಘಾಟನೆ.ಸಂಜೆ 5ರಿಂದ – ಕುವೆಂಪು ರಂಗಮಂದಿರ: ಸುಗಮ ಸಂಗೀತ ಮತ್ತು ಯಕ್ಷ ಸಂಭ್ರಮ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಪುಟ್ಟಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉಪಸ್ಥಿತಿ.
ಸೆಪ್ಟೆಂಬರ್ 24, 2025:ಬೆಳಿಗ್ಗೆ 7ಕ್ಕೆ – ಶಿವಮೊಗ್ಗ ಪಾಲಿಕೆಯಿಂದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನವರೆಗೆ: ಪರಿಸರ ದಸರಾದಲ್ಲಿ ಸೈಕಲ್ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮ. ಧಾರವಾಡ ಐಐಟಿಯ ಪ್ರಾಧ್ಯಾಪಕ ಮತ್ತು ಪರಿಸರವಾದಿ ಡಾ. ಶ್ರೀಪತಿ ಎಲ್.ಕೆ. ಅವರಿಂದ ಚಾಲನೆ.ಬೆಳಿಗ್ಗೆ 9:30ಕ್ಕೆ – ಡಾ. ಅಂಬೇಡ್ಕರ್ ಭವನ: ಚಲನಚಿತ್ರ ದಸರಾ ಮತ್ತು ಚಲನಚಿತ್ರ ಪ್ರದರ್ಶನ. ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ. ನಟ ಶರಣ್ ಮತ್ತು ನಟಿ ಕಾರುಣ್ಯರಾಮ್ ಉಪಸ್ಥಿತಿ.ಬೆಳಿಗ್ಗೆ 10:30ಕ್ಕೆ – ಸುವರ್ಣ ಸಾಂಸ್ಕೃತಿಕ ಭವನ: ರಂಗ ದಸರಾ. ಉಡುಪಿಯ ರಂಗ ನಿರ್ದೇಶಕ ಗಣೇಶ್ ಮಂದಾರ್ಥಿ ಅವರಿಂದ ಉದ್ಘಾಟನೆ.ಬೆಳಿಗ್ಗೆ 11:30ಕ್ಕೆ – ಡಾ. ಅಂಬೇಡ್ಕರ್ ಭವನ: ಚಲನಚಿತ್ರ ರಸಗ್ರಹಣ ಕಾರ್ಯಾಗಾರ. ನಿರ್ದೇಶಕ ಸಾಯಿ ಅವರಿಂದ ಚಾಲನೆ.ಸಂಜೆ 4:30ರಿಂದ ರಾತ್ರಿ 9:30 – ಕುವೆಂಪು ರಂಗಮಂದಿರ: ನೃತ್ಯ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ. ನಟಿ, ನಿರ್ದೇಶಕಿ ರೂಪ ಅಯ್ಯರ್ ಅವರಿಂದ ಚಾಲನೆ.
Dasara Mahotsava Inauguration ಸೆಪ್ಟೆಂಬರ್ 25, 2025:ಬೆಳಿಗ್ಗೆ 9ಕ್ಕೆ – ಸೈನ್ಸ್ ಮೈದಾನ: ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್ ಜಾಥಾ. ಪ್ರಗತಿಪರ ರೈತ ಮಹಿಳೆ ಕಮಲಮ್ಮ ಅವರಿಂದ ಉದ್ಘಾಟನೆ.ಬೆಳಿಗ್ಗೆ 10ಕ್ಕೆ – ಶಿವಪ್ಪನಾಯಕ ಅರಮನೆ: ಕಲಾ ದಸರಾ, ಛಾಯಾಚಿತ್ರ, ಚಿತ್ರಕಲಾ, ಗೊಂಬೆ ಪ್ರದರ್ಶನ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಉದ್ಘಾಟನೆ. ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಹೆಚ್.ಸಿ. ಉಪಸ್ಥಿತಿ.ಬೆಳಿಗ್ಗೆ 11ಕ್ಕೆ – ಕುವೆಂಪು ರಂಗಮಂದಿರ: ವೇದಿಕೆ ಕಾರ್ಯಕ್ರಮ ಮತ್ತು ಕೃಷಿ ಬಗ್ಗೆ ಉಪನ್ಯಾಸ. ಪ್ರಗತಿಪರ ರೈತ ಈರಪ್ಪ ನಾಯ್ಕ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ. ಜಗದೀಶ ಉಪಸ್ಥಿತಿ.ಸಂಜೆ 4ಕ್ಕೆ – ಶಿವಪ್ಪನಾಯಕ ವೃತ್ತದಿಂದ ಶಿವಪ್ಪನಾಯಕ ಅರಮನೆ: ಕಲಾ ಜಾಥಾ. ಸಂಚಾರ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್ ಟಿ.ವಿ. ಅವರಿಂದ ಉದ್ಘಾಟನೆ.ಸಂಜೆ 6ಕ್ಕೆ – ಶಿವಪ್ಪನಾಯಕ ಅರಮನೆ: ಕಲಾ ದಸರಾ, ಸುಗಮ ಸಂಗೀತ, ಜಾನಪದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ. ಸಿನಿಮಾ ಮತ್ತು ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಂದ ಉದ್ಘಾಟನೆ.ಸಂಜೆ 6ಕ್ಕೆ – ಪೊಲೀಸ್ ಸಮುದಾಯ ಭವನ: ರಂಗಗೀತೆ ಗಾಯನ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರಿಂದ ಉದ್ಘಾಟನೆ.
ಸೆಪ್ಟೆಂಬರ್ 26, 2025:ಸಂಜೆ 5ಕ್ಕೆ – ಸಿಟಿ ಸೆಂಟರ್ ಮಾಲ್: ಟ್ಯಾಲೆಂಟ್ ಹಂಟ್. ಸೂಡಾ ಆಯುಕ್ತ ವಿಶ್ವನಾಥ ಪಿ.ಮುದ್ದಜಿ ಅವರಿಂದ ಉದ್ಘಾಟನೆ.ಸಂಜೆ 5ಕ್ಕೆ – ಶಿವಪ್ಪನಾಯಕ ಅರಮನೆ: ಕಲಾ ದಸರಾ, ನಗೆ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ನಟ ಮುಖ್ಯಮಂತ್ರಿ ಚಂದ್ರು ಅವರಿಂದ ಉದ್ಘಾಟನೆ.ಸಂಜೆ 5ಕ್ಕೆ – ಡಾ. ಅಂಬೇಡ್ಕರ್ ಭವನ: ಸುಗಮ ಸಂಗೀತ ಮತ್ತು ಸಾಹಿತ್ಯ ಸಂಭ್ರಮ. ಡಿಎಆರ್ ಡಿವೈಎಸ್ಪಿ ಎಸ್.ವಿ. ದಿಲೀಪ್ ಅವರಿಂದ ಉದ್ಘಾಟನೆ.
Dasara Mahotsava Inauguration ಸೆಪ್ಟೆಂಬರ್ 27, 2025:ಬೆಳಿಗ್ಗೆ 10ಕ್ಕೆ – ಡಾ. ಅಂಬೇಡ್ಕರ್ ಭವನ: ಪೌರ ಕಾರ್ಮಿಕರ ದಸರಾ. ಪತ್ರಕರ್ತ ಎನ್. ರವಿಕುಮಾರ್ ಅವರಿಂದ ಉದ್ಘಾಟನೆ.ಸಂಜೆ 6ಕ್ಕೆ – ಫ್ರೀಡಂ ಪಾರ್ಕ್: ವಿಶೇಷ ಸಾಂಪ್ರದಾಯಿಕ ಮಿಶ್ರ ಸಂಗೀತ. ಜಿ.ಪಂ. ಉಪ ಕಾರ್ಯದರ್ಶಿ ಕೆ.ಆರ್. ಸುಜಾತಾ ಅವರಿಂದ ಉದ್ಘಾಟನೆ. ಜಿ.ಪಂ. ಉಪ ಕಾರ್ಯದರ್ಶಿ ಅನ್ನಪೂರ್ಣಾ ನಾಗಪ್ಪ ಮುದುಕಮ್ಮನವರ, ಲೆಕ್ಕ ಪರಿಶೋಧನಾ ವಲಯ ಜಂಟಿ ನಿರ್ದೇಶಕಿ ಗೀತಾ ಎನ್. ಯರೇಶೀಮಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್. ಮಾರುತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಕೆ.ಎಸ್. ಶ್ರೀಕಾಂತ್ ಉಪಸ್ಥಿತಿ.
ಸೆಪ್ಟೆಂಬರ್ 28, 2025:ಬೆಳಿಗ್ಗೆ 5:30ಕ್ಕೆ – ಕುವೆಂಪು ರಂಗಮಂದಿರ ಆವರಣ: ಯೋಗ ದಸರಾ. ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ.ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ – ಕಮಲಾ ನೆಹರು ಕಾಲೇಜು: ಗಮಕ ಕಾರ್ಯಕ್ರಮ. ಗಮಕ ರತ್ನಾಕರ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ಉಪಸ್ಥಿತಿ.ಸಂಜೆ 5ಕ್ಕೆ – ಪತ್ರಿಕಾ ಭವನ: ಪತ್ರಕರ್ತರ ದಸರಾ. ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ ಮೂರ್ತಿ ಅವರಿಂದ ಉದ್ಘಾಟನೆ. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ಮತ್ತು ಸಂಘದ ನಿರ್ದೇಶಕ ಎನ್. ರವಿಕುಮಾರ್ ಉಪಸ್ಥಿತಿ.ಸಂಜೆ 5ಕ್ಕೆ – ಫ್ರೀಡಂ ಪಾರ್ಕ್: ಮ್ಯೂಸಿಕಲ್ ನೈಟ್ಸ್. ಸಚಿವ ಮಧು ಬಂಗಾರಪ್ಪ, ನಟ ಡಾ. ಶಿವರಾಜ್ ಕುಮಾರ್, ಮಾಜಿ ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಉಪಸ್ಥಿತಿ.ಸಂಜೆ 6ಕ್ಕೆ – ಫ್ರೀಡಂ ಪಾರ್ಕ್: ಆಹಾರ ಮೇಳ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಅವಿನ್ ಆರ್. ಅವರಿಂದ ಉದ್ಘಾಟನೆ.
ಸೆಪ್ಟೆಂಬರ್ 29, 2025 : ಬೆಳಿಗ್ಗೆ 10:30ಕ್ಕೆ – ಶಿವಪ್ಪನಾಯಕ ವೃತ್ತ: ಸಾರ್ವಜನಿಕರಿಗೆ ಆಹಾರ ತಿನ್ನುವ ಮತ್ತು ಹಣ್ಣು ತಿನ್ನುವ ಸ್ಪರ್ಧೆ. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಂದ್ರ ಹೆಚ್.ಆರ್. ಅವರಿಂದ ಉದ್ಘಾಟನೆ.ಸಂಜೆ 6ಕ್ಕೆ – ಫ್ರೀಡಂ ಪಾರ್ಕ್: ಭಾವಗೀತೆ ಹಾಗೂ ವಚನಗಳ ಗೀತ ನೃತ್ಯ ವೈಭವ ಮತ್ತು ‘ಅವತರಿಸು ಭ’ ನೃತ್ಯ ರೂಪಕ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ. ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಎಂಎಲ್‌ಸಿ ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಉಪಸ್ಥಿತಿ.
ಅಕ್ಟೋಬರ್ 1, 2025:ಸಂಜೆ 5:30ಕ್ಕೆ – ಫ್ರೀಡಂ ಪಾರ್ಕ್: ನಾಟ್ಯ ವೈಭವ, ಜಾನಪದ ವೈಭವ. ನಟಿ ಹರ್ಷಿಕಾ ಪೂಣಚ್ಚ ಅವರಿಂದ ಉದ್ಘಾಟನೆ. ಮುಖ್ಯ ಅತಿಥಿ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ.
ಅಕ್ಟೋಬರ್ 2, 2025:ಸಂಜೆ 5ಕ್ಕೆ – ಫ್ರೀಡಂ ಪಾರ್ಕ್: ಸುಗಮ ಸಂಗೀತ. ಸುರೇಖಾ ಹೆಗ್ಡೆ ಮತ್ತು ತಂಡದಿಂದ ಕಾರ್ಯಕ್ರಮ.
Dasara Mahotsava Inauguration ಆನೆ ಅಂಬಾರಿ ಉತ್ಸವ ಮತ್ತು ಅನುದಾನ
ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಸಾಗರ, ಬಾಲಣ್ಣ ಮತ್ತು ಕುಂತಿ ಎಂಬ ಆನೆಗಳು ಭಾಗವಹಿಸಲಿವೆ. ಗಜಪಡೆಗೆ ಆಹ್ವಾನ ನೀಡಲು ಆಯೋಜಕರು ಇಂದು ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಲಿದ್ದಾರೆ. ದಸರಾ ಆಚರಣೆಗಾಗಿ ರಾಜ್ಯ ಸರ್ಕಾರದಿಂದ 50 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಸಂಸ್ಕೃತಿ ಸಚಿವ ಶಿವರಾಜ್ ತಂಗಡಿ ಕೂಡ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ, ನಗರದ ನಾಗರಿಕರು ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಈ ಬಾರಿಯ ದಸರಾ ವೈಭವಪೂರ್ಣವಾಗಿ ನಡೆಯಲಿದೆ ಎಂದು ತಿಳಿಸಲಾಗಿದೆ.

