ತೀರ್ಥಹಳ್ಳಿ ಪೇಟೆ ಸುತ್ತಮುತ್ತ ಜೋಡಿ ಕಾಡಾನೆಗಳ ಒಡಾಟ! ಜಾಗ್ರತೆ

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಇದೀಗ ಜೋಡಿ ಆನೆಗಳ ಹಾವಳಿ ಜೋರಾಗಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ತೀರ್ಥಹಳ್ಳಿ ಪೇಟೆ ಸಮೀಪವೇ ಕಾಡಾನೆಗಳು ಸುತ್ತಾಟ ನಡೆಸ್ತಿವೆ.  ಕೊಪ್ಪ ತಾಲ್ಲೂಕು ಕಡೆಯಿಂದ ಬಂದ  ಎರಡು ಕಾಡಾನೆಗಳು ಶೇಡ್ಗಾರು ಮಾರ್ಗವಾಗಿ  ಮೊನ್ನೆ ಮಗೃವಧೆ ಸುತ್ತಮುತ್ತ ಕಾಣಿಸಿಕೊಂಡಿತ್ತು. ಆನಂತರ ಮೇಳಿಗೆ ಗ್ರಾಮಕ್ಕೆ ಬಂದಿದ್ದು  ಹೊರಣೇಬೈಲು ಗ್ರಾಮದ ರೈತರೊಬ್ಬರ ಗೇಟನ್ನು ಮುರಿದ ಬಗ್ಗೆ ವರದಿಯಾಗಿತ್ತು. ಇತ್ತೀಚಿನ ಮಾಹಿತಿ ಪ್ರಕಾರ, ಆನೆಗಳು ಕುರುವಳ್ಳಿ ಬಳಿ ಕಾಣಿಸಿಕೊಂಡಿದ್ದು, ಹೊರಬೈಲಿನ  ತೋಟವೊಂದರಲ್ಲಿ ಓಡಾಡುತ್ತಿದ್ದವು. ಮಂಡಗದ್ದೆಯಿಂದ ತೀರ್ಥಹಳ್ಳಿಯವರೆಗೂ ಕಾಡಾನೆಗಳು ಓಡಾಡುತ್ತಿದ್ದು, ಕಾಡಾನೆಗಳನ್ನು ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದರು. ಈ ಮಧ್ಯೆ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸವನ್ನು ಆರಂಭಿಸಿದೆ. 

Wild Elephants in Thirthahalli
Wild Elephants in Thirthahalli
Wild Elephants in Thirthahalli
Wild Elephants in Thirthahalli

Wild Elephants in Thirthahalli

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Wild Elephants in Thirthahalli

 

View this post on Instagram

 

A post shared by KA on line (@kaonlinekannada)

Share This Article