ಗುಡ್​ ನ್ಯೂಸ್​ : ಕಡಿಮೆ ಆಗಲಿದೆ ನಂದಿನಿ ಹಾಲಿನ ವಿವಿಧ ಉತ್ಪನ್ನಗಳ ಬೆಲೆ, ಕಾರಣವೇನು

prathapa thirthahalli
Prathapa thirthahalli - content producer

Nandini milk  : ಶಿವಮೊಗ್ಗ: ಕೇಂದ್ರ ಸರ್ಕಾರವು ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರವನ್ನು ಶೇ 12ರಿಂದ ಶೇ 5ಕ್ಕೆ ಕಡಿತಗೊಳಿಸಿರುವುದರಿಂದ ನಂದಿನಿಯ (Nandini) ವಿವಿಧ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ದರಗಳು ಸೆಪ್ಟೆಂಬರ್ 22ರಿಂದ ಕಡಿಮೆಯಾಗಲಿವೆ.

ಈ ನಿರ್ಧಾರದಿಂದಾಗಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (KMF) ಜಿಎಸ್‌ಟಿ ಕಡಿಮೆಗೊಳಿಸಲು ಸಿದ್ಧತೆ ನಡೆಸಿದ್ದು, ಇದರಿಂದ ಒಂದು ಲೀಟರ್ ಮೊಸರಿನ ದರ ಸುಮಾರು ₹4ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ದರ ಇಳಿಕೆ ಕುರಿತು ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಸಭೆ ಇಂದು (ಶುಕ್ರವಾರ) ನಡೆಯಲಿದ್ದು, ಸೋಮವಾರದಿಂದಲೇ ಪರಿಷ್ಕೃತ ದರಗಳನ್ನು ಜಾರಿಗೆ ತರುವಂತೆ ಮಾರಾಟಗಾರರಿಗೆ ಸೂಚನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ಇಳಿಕೆ ಸಂಬಂಧ ನಮಗೆ ಕೇಂದ್ರದಿಂದ ಸೂಚನೆ ಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು, ಆದೇಶ ಹೊರಡಿಸುತ್ತೇವೆ” ಎಂದು ಮಹಾಮಂಡಳಿ ತಿಳಿಸಿದೆ. ಈ ಆದೇಶದ ಪ್ರಕಾರ, ನಂದಿನಿ ಹಾಲಿನ ಉತ್ಪನ್ನಗಳ (Nandini milk products) ದರವು ಶೇ 7ರಷ್ಟು ಕಡಿಮೆಯಾಗಲಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೆ ತರಲಾಗಿತ್ತು. ಬಳಿಕ 2022ರಲ್ಲಿ ಅದನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ತೆರಿಗೆ ದರ ಇಳಿದಿರುವುದರಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

Nandini Milk

Share This Article