ಶಿವಮೊಗ್ಗ: ಮಕ್ಕಳಿಗೆ ಚಿತ್ರಕಲೆ ಮತ್ತು ದೇಶಭಕ್ತಿಗೀತೆ ಸ್ಪರ್ಧೆ

ajjimane ganesh

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 :   ಶಿವಮೊಗ್ಗ  ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2025-26ನೇ ಸಾಲಿನ 79ನೇ ಸ್ವಾತಂತ್ರ್ಯ  ದಿನಾಚರಣೆ ಅಂಗವಾಗಿ 5-16 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾ ಬಾಲಭವನ ಸಮಿತಿಯಿಂದ ಸೆ.19 ರಂದು ಚಿತ್ರಕಲೆ ಮತ್ತು ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಿದೆ. 

ಚಿತ್ರಕಲೆ ಸ್ಪರ್ಧೆಯಲ್ಲಿ 75 ಮಕ್ಕಳಿಗೆ 3 ಗುಂಪಿನ ವರ್ಗವಾರು ಮಾಡಿದ್ದು, 5-8 ವರ್ಷದ ಮಕ್ಕಳಿಗೆ “ಶಾಲೆಯ ಪರಿಸರ”, 9-12 ವರ್ಷದ ಮಕ್ಕಳಿಗೆ “ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ” ಮತ್ತು 13-16 ವರ್ಷದ ಮಕ್ಕಳಿಗೆ “ಬಾಲ್ಯ ವಿವಾಹ ನಡೆಯುತ್ತಿರುವಾಗ ಅದನ್ನು ತಡೆಗಟ್ಟುವ ಚಿತ್ರಣ” ಎಂಬ ವಿಷಯಗಳಿದ್ದು, ಭಾಗವಹಿಸುವ ಮಕ್ಕಳಿಗೆ ಡ್ರಾಯಿಂಗ್ ಶೀಟ್‌ನ್ನು ಮಾತ್ರ ಕೊಡಲಾಗುತ್ತಿದ್ದು, ಇನ್ನುಳಿದ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು. 

ದೇಶಭಕ್ತಿಗೀತೆ ಸ್ಪರ್ಧೆಯು ವೈಯಕ್ತಿಕ ಸ್ಪರ್ಧೆಯಾಗಿದ್ದು, 3 ರಿಂದ 4 ನಿಮಿಷಗಳು ಇರುತ್ತದೆ. ಕನ್ನಡ ಭಾಷೆಯಲ್ಲೇ ಹಾಡಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. 

 Kannada  Horoscope car decor new

ಆಸಕ್ತ ಮಕ್ಕಳು ಸೆ. 19 ರಂದು ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಪಾಠಶಾಲೆ, ಕರ್ನಾಟಕ ಸಂಘದ ಪಕ್ಕ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ಮಧ್ಯಾಹ್ನ 1.00 ಗಂಟೆ ಹಾಜರಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಮಂಜುಳ ಆರ್. -9353617934 ಇವರನ್ನು ಸಂಪರ್ಕಿಸುವುದು ಎಂದು ವಾರ್ತಾ ಇಲಾಖೆಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Competition Start-up Subsidy Applications for minority  Free General Duty Assistant Training for SC/ST health tips by malenadu today Shimoga railway crossing closure information Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news
suvarna news information news

Children’s Drawing and Patriotic Song Competition in Shivamogga on September 19

ಮಕ್ಕಳ ಸ್ಪರ್ಧೆ, ಶಿವಮೊಗ್ಗ ಸ್ಪರ್ಧೆ, ಚಿತ್ರಕಲೆ, ದೇಶಭಕ್ತಿಗೀತೆ, ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸೆಪ್ಟೆಂಬರ್ 19, ಶಿವಮೊಗ್ಗ, ಕರ್ನಾಟಕ, Children’s Competition, Shivamogga, Drawing Competition, Patriotic Song Contest, Bal Bhavan, Child Development Department, Karnataka, September 19

Share This Article