Shivamogga news : ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮೂರು ಹೆಬ್ಬಾವು ಮತ್ತು ಒಂದು ನಾಗರಹಾವಿಗೆ ಹಿಂಸೆ ನೀಡಿ, ಅದರೊಂದಿಗೆ ಫೋಟೋ ಮತ್ತು ವೀಡಿಯೋ ತೆಗೆದು ವಿಕೃತಿ ಮೆರೆದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Shivamogga news ಘಟನೆಯ ವಿವರ
ಶಿವಮೊಗ್ಗದ ಮತ್ತೂರು ರಸ್ತೆಯ ಮಳಲಿಕೊಪ್ಪದಲ್ಲಿ ಕೆಲವರು ಸೇರಿ ಮೂರು ಹೆಬ್ಬಾವು ಮತ್ತು ಒಂದು ನಾಗರಹಾವನ್ನು ಹಿಡಿದು ಅವುಗಳ ಬಾಯಿಗೆ ಪ್ಲಾಸ್ಟರ್ ಹಾಕಿ ಹಿಂಸೆ ನೀಡಿದ್ದಾರೆ. ಈ ವೇಳೆ ಅದರೊಂದಿಗೆ ಫೋಟೋ ಮತ್ತು ವೀಡಿಯೋ ಶೂಟ್ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ವೈರಲ್ ಆಗಿದೆ.
ವೈರಲ್ ವೀಡಿಯೋ ಗಮನಕ್ಕೆ ಬಂದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮಳಲಿಕೊಪ್ಪದ ಇರ್ಫಾನ್ ಮತ್ತು ಇತರೆ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಬ್ಬಾವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 1 ಅಡಿಯಲ್ಲಿ ಬರುತ್ತವೆ. ಅವುಗಳಿಗೆ ಹಿಂಸೆ ನೀಡುವುದು ಕಾನೂನು ಉಲ್ಲಂಘನೆ ಮತ್ತು ಬೇಟೆ ಪ್ರಕರಣ ಎಂದು ಪರಿಗಣಿಸಲಾಗಿದೆ.


