ದಸರಾ ಸ್ಪೆಷಲ್: ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ರೈಲುಗಳ ಸಂಪೂರ್ಣ ಮಾಹಿತಿ ಇಲ್ಲಿದೆ!

prathapa thirthahalli
Prathapa thirthahalli - content producer

Dasara Special Trains : ಶಿವಮೊಗ್ಗ, ಕೆಲವೇ ದಿನಗಳಲ್ಲಿ ನಾಡಹಬ್ಬ ದಸರಾ ಪ್ರಾರಂಭವಾಗಲಿದ್ದು, ಈ ಸಮಯದಲ್ಲಿ ಮೈಸೂರಿನ ವೈಭವವನ್ನು ಕಣ್ತುಂಬಿಕೊಳ್ಳಲು ಜನ ಉತ್ಸುಕರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಮೈಸೂರಿಗೆ ನೇರವಾಗಿ ಪ್ರಯಾಣಿಸಲು ಲಭ್ಯವಿರುವ ರೈಲುಗಳ ವೇಳಾಪಟ್ಟಿ ಮತ್ತು ಇತರೆ ಮಾಹಿತಿ ಇಲ್ಲಿದೆ. ಶಿವಮೊಗ್ಗದಿಂದ ಮೈಸೂರಿಗೆ ಪ್ರತಿದಿನ ರೈಲುಗಳಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸಮಯಗಳಲ್ಲಿ ಅವು ಸಂಚರಿಸುತ್ತವೆ.

Dasara Special Trains : ಶಿವಮೊಗ್ಗದಿಂದ ಮೈಸೂರಿಗೆ ಲಭ್ಯವಿರುವ ರೈಲುಗಳು ಮತ್ತು ಸಮಯಗಳು

ಕುವೆಂಪು ಎಕ್ಸ್‌ಪ್ರೆಸ್:

ಈ ರೈಲು ತಾಳಗುಪ್ಪದಿಂದ ಬೆಳಗ್ಗೆ 6:15ಕ್ಕೆ ಹೊರಟು, ಶಿವಮೊಗ್ಗದಿಂದ ಬೆಳಗ್ಗೆ 8:20ಕ್ಕೆ ಪ್ರಯಾಣ ಆರಂಭಿಸುತ್ತದೆ. ಮಧ್ಯಾಹ್ನ 3:35ಕ್ಕೆ ಮೈಸೂರು ರೈಲ್ವೆ ನಿಲ್ದಾಣ ತಲುಪಲಿದೆ. ಈ ರೈಲು ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ತೆರಳುತ್ತದೆ ಮತ್ತು ವಾರದ ಎಲ್ಲ ದಿನಗಳಲ್ಲಿಯೂ ಲಭ್ಯವಿರುತ್ತದೆ.

ಶಿವಮೊಗ್ಗ-ಮೈಸೂರು ಎಕ್ಸ್‌ಪ್ರೆಸ್:

ಈ ರೈಲು ನೇರವಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11:15ಕ್ಕೆ ಹೊರಡುತ್ತದೆ ಮತ್ತು ಸಂಜೆ 5:05ಕ್ಕೆ ಮೈಸೂರು ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಸಹ ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಸಂಚರಿಸುತ್ತದೆ ಮತ್ತು ವಾರದ ಎಲ್ಲ ದಿನಗಳಲ್ಲಿ ಲಭ್ಯವಿದೆ.

ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್:

ತಾಳಗುಪ್ಪದಿಂದ ಮಧ್ಯಾಹ್ನ 2:50ಕ್ಕೆ ಹೊರಡುವ ಈ ರೈಲು, ಶಿವಮೊಗ್ಗದಿಂದ ಸಂಜೆ 4:50ಕ್ಕೆ ಹೊರಡುತ್ತದೆ. ಇದು ರಾತ್ರಿ 10:30ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ. ಈ ರೈಲು ಸಹ ಪ್ರತಿದಿನ ಓಡಾಟ ನಡೆಸುತ್ತದೆ ಮತ್ತು ಹಾಸನ ಮಾರ್ಗದಲ್ಲಿ ಸಂಚರಿಸುತ್ತದೆ.

ತಾಳಗುಪ್ಪ-ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್:

ಈ ರೈಲು ತಾಳಗುಪ್ಪದಿಂದ ರಾತ್ರಿ 8:55ಕ್ಕೆ ಹೊರಟು, ಶಿವಮೊಗ್ಗದಿಂದ ರಾತ್ರಿ 11:00ಕ್ಕೆ ಪ್ರಯಾಣ ಆರಂಭಿಸುತ್ತದೆ. ಇದು ಬೆಳಗ್ಗೆ 4:50ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಅಲ್ಲಿಂದ ಮುಂದುವರೆದು ಬೆಳಗ್ಗೆ 8:20ಕ್ಕೆ ಮೈಸೂರು ನಿಲ್ದಾಣವನ್ನು ತಲುಪುತ್ತದೆ.

Share This Article